Biryani: 9.3 ಕೋಟಿ ಬಿರಿಯಾನಿ ಆರ್ಡರ್ ಜೊತೆ ಜನ ಈ ವರ್ಷ ಹೆಚ್ಚು ಆರ್ಡರ್ ಮಾಡಿದ್ದೇನು
ಭಾರತೀಯರಿಗೆ ಬಿರಿಯಾನಿ ಎಂದರೆ ಪ್ರಿಯ ಎನ್ನುವುದು ಈ ವರ್ಷ ಮತ್ತೊಮ್ಮೆ ಸಾಬೀತಾಗಿದೆ. 2025ನೇ ಸಾಲಿನಲ್ಲಿ ಭರ್ಜರಿ ಬಿರಿಯಾನಿ ಮಾರಾಟವಾಗಿದೆ. ಈ ವರ್ಷ ಎಷ್ಟು ಬಿರಿಯಾನಿ ಮಾರಾಟವಾಗಿದೆ ಹಾಗೂ ಯಾವ ನಗರ ಮುಂಚೂಣಿಯಲ್ಲಿದೆ ಎನ್ನುವ ವಿವರ ಇಲ್ಲಿದೆ.
2025 ರಲ್ಲಿ ಸ್ವಿಗ್ಗಿ ಮೂಲಕ 9.3 ಕೋಟಿ ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ. ಭಾರತೀಯರು ಈ ವರ್ಷ ಅತ್ಯಂತ ಹೆಚ್ಚು ಬಿರಿಯಾನಿಯನ್ನು ಆನ್‌ಲೈನ್‌ನ ಮೂಲಕ ಆರ್ಡರ್ ಮಾಡಿದ್ದಾರೆ. ಪ್ರತಿ 3.25 ಸೆಕೆಂಡ್‌ಗೆ ಒಂದು ಬಿರಿಯಾನಿ ಆರ್ಡರ್ ಮಾಡಲಾಗಿದೆ. ಪ್ರತಿ ನಿಮಿಷಕ್ಕೆ 194 ಬಿರಿಯಾನಿಗಳು 2025ನೇ ಸಾಲಿನಲ್ಲಿ ಆರ್ಡರ್ ಮಾಡಲಾಗಿದೆ. ಈ ವರ್ಷ ಬರೋಬ್ಬರಿ 5.77 ಕೋಟಿ ಚಿಕನ್ ಬಿರಿಯಾನಿ ಆರ್ಡರ್ ಮಾಡಲಾಗಿದೆ.

ಬಿರಿಯಾನಿ ನಂತರ ಯಾವ ಫೂಡ್ ಇದೆ ?
ಇನ್ನು ದೇಶದಾದ್ಯಂತ ಜನ ಅತೀ ಹೆಚ್ಚು ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ. ಬಿರಿಯಾನಿಯ ನಂತರದ ಎರಡನೇ ಸ್ಥಾನದಲ್ಲಿ ಬರ್ಗರ್‌ಗಳು ಇವೆ. ಈ ವರ್ಷದಲ್ಲಿ ಅತ್ಯಂತ ಹೆಚ್ಚು ಬರ್ಗರ್‌ಗಳನ್ನು ಆರ್ಡರ್ ಮಾಡಲಾಗಿದೆ. ಈ ವರ್ಷ ಬರೋಬ್ಬರಿ 4.42 ಕೋಟಿ ರೂಪಾಯಿ ಮೊತ್ತದ ಬರ್ಗರ್‌ಗಳನ್ನು ಆರ್ಡರ್ ಮಾಡಲಾಗಿದೆ. ಬಿರಿಯಾನಿಯ ನಂತರ ಎರಡನೇ ಸ್ಥಾನದಲ್ಲಿ ಬರ್ಗರ್ ಇದೆ. ಪಿಜ್ಜಾ ಮತ್ತು ದೋಸೆ ಕ್ರಮವಾಗಿ 4.42 ಕೋಟಿ ರೂಪಾಯಿ ಮತ್ತು 2.62 ಕೋಟಿ ರೂಪಾಯಿಗಳೊಂದಿಗೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.
2024ರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಹೈದರಾಬಾದ್ ನಗರವು ಈ ವರ್ಷವೂ 97 ಲಕ್ಷ ಬಿರಿಯಾನಿ ಆರ್ಡರ್‌ಗಳೊಂದಿಗೆ ತನ್ನ ಮ್ಯಾಜಿಕ್ ಅನ್ನು ಮುಂದುವರಿಸಿದೆ. ಬೆಂಗಳೂರು 77 ಲಕ್ಷ ಮತ್ತು ಚೆನ್ನೈ 46 ಲಕ್ಷ ಬಿರಿಯಾನಿಗಳನ್ನು ಆರ್ಡರ್ ಮಾಡಿವೆ. ರಂಜಾನ್ ತಿಂಗಳಲ್ಲಿ ಮಾತ್ರ 60 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಅಂದಾಜಿಸಲಾಗಿದೆ.
ತಿಂಡಿಗಳಿಗೂ ಭರ್ಜರಿ ಡಿಮ್ಯಾಂಡ್
ಇನ್ನು ಈ ವರ್ಷ ಕೇವಲ ಊಟಕ್ಕೆ ಮಾತ್ರವಲ್ಲದೆ ಚಿಕನ್ ಬರ್ಗರ್ ಸೇರಿದಂತೆ ಕೆಲವೊಂದು ಆಹಾರ ಪದಾರ್ಥಗಳಿಗೂ ಭರ್ಜರಿ ಡಿಮ್ಯಾಂಡ್ ಸಿಕ್ಕಿದೆ. ಈ ವರ್ಷ ತಿಂಡಿ ಸಮಯದಲ್ಲಿ 63 ಲಕ್ಷ ಬರ್ಗರ್‌ಗಳನ್ನು ಆರ್ಡರ್ ಮಾಡಲಾಗಿದೆ. 2024 ರಲ್ಲಿ ಚಿಕನ್ ರೋಲ್ ಆರ್ಡರ್‌ಗಳು 24.8 ಲಕ್ಷಗಳ ವರೆಗೆ ಆಗಿತ್ತು. ಆದರೆ ಈ ವರ್ಷ ಈ ಬರ್ಗರ್‌ಗಳ ಸಂಖ್ಯೆಯು 41 ಲಕ್ಷಕ್ಕೆ ಏರಿವೆ. ಟೀ ಮತ್ತು ಸಮೋಸಾಕ್ಕೂ ಡಿಮ್ಯಾಂಡ್ ಮುಂದುವರಿದಿದ್ದು 34.2 ಲಕ್ಷ ಸೇಲ್ ಆಗಿವೆ. ಈ ಬಾರಿ ಬಿಳಿ ಚಾಕೊಲೇಟ್ ಸ್ಟಾರ್ ಸಿಹಿತಿಂಡಿ ಎನ್ನುವ ಖ್ಯಾತಿ ಗಳಿಸಿದ್ದು, ಬರೋಬ್ಬರಿ 69 ಲಕ್ಷ ಆರ್ಡರ್‌ಗಳು ಆಗಿವೆ. ಚಾಕೊಲೇಟ್ ಕೇಕ್ 54 ಲಕ್ಷ, ಗುಲಾಬ್ ಜಾಮ್ 45 ಲಕ್ಷ ಆರ್ಡರ್ ಆಗಿವೆ.
ಮೆಕ್ಸಿಕನ್‌ಗೆ ಭಾರತೀಯರು ಫಿದಾ
ಇನ್ನು ಈ ವರ್ಷ ಜನ ಮೆಕ್ಸಿಕನ್‌ಗೆ ಹೆಚ್ಚು ಫಿದಾ ಆಗಿದ್ದಾರೆ. ಅಂತರರಾಷ್ಟ್ರೀಯ ಆಹಾರಗಳಲ್ಲಿ ಒಂದಾಗಿರುವ ಮೆಕ್ಸಿಕನ್ 1.2 ಕೋಟಿ ಆರ್ಡರ್‌ಗಳೊಂದಿಗೆ ಹೆಚ್ಚು ಜನಪ್ರಿಯವಾಗಿದೆ. ಕೊರಿಯನ್ ಫುಡ್ 4.7 ಲಕ್ಷ ಸೇಲ್ ಆಗಿದೆ. ಅದೇ ಸಮಯದಲ್ಲಿ ಜನರು ಪ್ರಾದೇಶಿಕ ಆಹಾರ ಪದಾರ್ಥಗಳನ್ನೂ ಸಹ ಹೆಚ್ಚು ಖರೀದಿ ಮಾಡಿ ಸವಿ ನೋಡಿದ್ದಾರೆ. ಕಳೆದ ಬಾರಿಗಿಂತ ಪಹಾಡಿ, ಮಲಬಾರ್ ಮತ್ತು ರಾಜಸ್ಥಾನಿಗಳ ಆಹಾರ ಪದಾರ್ಥಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ.
ತಡರಾತ್ರಿ ಆಹಾರ ಖರೀದಿ ಮಾಡುವವರ ಸಂಖ್ಯೆ ಹೆಚ್ಚಳ
ಬಿರಿಯಾನಿ ಮತ್ತು ಬರ್ಗರ್‌ಗಳ ಹೆಚ್ಚು ಸೇಲ್‌ನೊಂದಿಗೆ ಈ ಬಾರಿ ರಾತ್ರಿ ಸಮಯದಲ್ಲಿ ಆಹಾರ ಆರ್ಡರ್ ಮಾಡುವವರ ಸಂಖ್ಯೆಯಲ್ಲಿ ಭರ್ಜರಿ ಹೆಚ್ಚಳವಾಗಿದೆ. ತಡರಾತ್ರಿಯ ಆರ್ಡರ್‌ಗಳ ಸಂಖ್ಯೆಯಲ್ಲಿ ಭರ್ಜರಿ ಹೆಚ್ಚಳವಾಗಿದೆ. ಮಧ್ಯರಾತ್ರಿಯ ಸಮಯದಲ್ಲಿ ಆರ್ಡರ್ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಬರೋಬ್ಬರಿ 23 ಲಕ್ಷ ಆರ್ಡರ್‌ಗಳು ಮಧ್ಯರಾತ್ರಿ ಸಮಯದಲ್ಲಿ ಆಗಿವೆ. ಇನ್ನು ಬ್ರೇಕ್‌ಫಾಸ್ಟ್‌ನಲ್ಲಿ ನಕ್ಷತ್ರ ಇಡ್ಲಿಗಳು 96 ಲಕ್ಷ ಆರ್ಡರ್‌ಗಳೊಂದಿಗೆ ಹೆಚ್ಚು ಡಿಮ್ಯಾಂಡ್ ಪಡೆದುಕೊಂಡಿದೆ.












Click it and Unblock the Notifications