ಸ್ವಂತಕ್ಕೆ ಏನೂ ಉಳಿಸಿಕೊಳ್ಳಲಿಲ್ಲ, ಜೀವಮಾನದ ಸಂಪೂರ್ಣ ಗಳಿಕೆ ಹಾಗೂ ದೇಹವನ್ನ ದೇಶಕ್ಕೆ ಸಮರ್ಪಿಸಿದ 82ರ ವೃದ್ಧ

ಮಧುರೈನ 82 ವರ್ಷದ ವೃದ್ಧರೊಬ್ಬರು ತಮ್ಮ ಜೀವಮಾನದ ಸಂಪೂರ್ಣ ಉಳಿತಾಯದ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡುವುದಾಗಿ ಘೋಷಣೆ ಮಾಡಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಧುರೈ ಜಿಲ್ಲೆಯ ತಿರುಪ್ಪರಂಕುಂಡ್ರಂ ಸಮೀಪದ ಹಾರ್ವೆ ನಗರದ ನಿವಾಸಿಯಾದ 82 ವರ್ಷದ ಪಿ.ಸುಬ್ಬಯ್ಯ ಅವರು ಸೋಮವಾರ ನಡೆದ ಕುಂದುಕೊರತೆ ಸಭೆಯಲ್ಲಿ ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರನ್ನು ಭೇಟಿಯಾದರು. ಈ ವೇಳೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ನಿಧಿಗಾಗಿ ತಕ್ಷಣದ ನೆರವಾಗಿ 10,000 ರೂಪಾಯಿ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು ಎಂದು ದಿ ಹಿಂದೂ ವರದಿ ಮಾಡಿದೆ.

82-Year-Old Madurai Man Donates Rs 60 Lakh Wealth Pledges Body for Medical Research Know details

ಪಿ.ಸುಬ್ಬಯ್ಯ ಅವರ ವಿಲ್‌ನಲ್ಲಿ ಏನಿದೆ?

ಅಲ್ಲದೆ ಅವರು ತಮ್ಮ ಮರಣಶಾಸನದ ಅಧಿಕೃತ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. ಆ ವಿಲ್‌ನಲ್ಲಿ, ತಮ್ಮ ಬ್ಯಾಂಕ್ ಖಾತೆಯಲ್ಲಿರುವ 30 ಲಕ್ಷ ರೂಪಾಯಿ ನಗದು ಹಾಗೂ ಅದಕ್ಕೆ ಬರುವ ಬಡ್ಡಿ ಹಣ, ಜೊತೆಗೆ ಬ್ಯಾಂಕ್ ಲಾಕರ್‌ನಲ್ಲಿರುವ 30 ಲಕ್ಷ ರೂಪಾಯಿ ಮೌಲ್ಯದ ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿಪಾಸ್ತಿಗಳನ್ನು ಸಂಪೂರ್ಣವಾಗಿ ಧ್ವಜ ದಿನಾಚರಣೆ ನಿಧಿಗೆ ಸೇರುವಂತೆ ಬರೆದಿಟ್ಟಿದ್ದಾರೆ.

ಪಿ.ಸುಬ್ಬಯ್ಯ ಅವರ ಮತ್ತೊಂದು ಮಹತ್ವದ ನಿರ್ಧಾರ

ಹಣ ಮತ್ತು ಆಸ್ತಿಯನ್ನು ನೀಡಿದ್ದಷ್ಟೇ ಅಲ್ಲದೆ, ಸುಬ್ಬಯ್ಯ ಅವರು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಮರಣಾನಂತರ ದೇಹವನ್ನು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರಿಸಬೇಕು ಎಂದು ಕೋರಿ ಲಿಖಿತ ಘೋಷಣಾ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ.

ಪಿ. ಸುಬ್ಬಯ್ಯ ಅವರು ಹಿಂದೆ ಮಿಲಿಟರಿ ಇಂಜಿನಿಯರಿಂಗ್ ಸೇವೆಗಳಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾದವರು. ಅವರ ಪತ್ನಿ ವಸಂತಾ ಅವರು 2017ರಲ್ಲಿಯೇ ನಿಧನರಾಗುದ್ದು, ಈ ದಂಪತಿಗೆ ಮಕ್ಕಳಿರಲಿಲ್ಲ. ಪ್ರಸ್ತುತ ಒಂಟಿಯಾಗಿ ಜೀವಿಸುತ್ತಿರುವ ಸುಬ್ಬಯ್ಯ ಅವರು ತಮ್ಮ ಜೀವಮಾನದ ಗಳಿಕೆಯನ್ನು ದೇಶ ಕಾಯುವ ಯೋಧರ ಕಲ್ಯಾಣಕ್ಕೆ ಹಾಗೂ ತಮ್ಮ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಬಳಕೆಯಾಗಲಿ ಎಂಬ ಆಶಯದೊಂದಿಗೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಈ ನಿಸ್ವಾರ್ಥ ಸೇವೆ ಮತ್ತು ದೇಶಪ್ರೇಮಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+