ಜೈಲಿನಿಂದ ಪರಾರಿಯಾಗಿದ್ದ ಸಿಮಿ ಉಗ್ರರು ಎನ್ ಕೌಂಟರಿಗೆ ಬಲಿ

Posted By:
Subscribe to Oneindia Kannada

ಭೋಪಾಲ್, ಅಕ್ಟೋಬರ್ 31: ಇಲ್ಲಿನ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಎಂಟು ಮಂದಿ ವಿಚಾರಣಾಧೀನ ಕೈದಿಗಳು ಸೋಮವಾರ ಎನ್ ಕೌಂಟರಿಗೆ ಬಲಿಯಾಗಿದ್ದಾರೆ. ಭೋಪಾಲ್ ಹೊರ ವಲಯದ ಇಂತಕೇಡಿ ಗ್ರಾಮದ ಬಳಿ ಎಲ್ಲರನ್ನು ಹೊಡೆದುರಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತರನ್ನು ಶೇಖ್ ಮುಜೀಬ್, ಖಾಲೀದ್, ಅಖ್ವೀಲ್, ಮಜೀದ್, ಝಾಕೀರ್ ಹುಸೇನ್, ಮೊಹಮ್ಮದ್ ಸಾಲಿಕ್, ಶೇಖ್ ಮೊಹಮ್ಮದ್ ಹಾಗೂ ಅಮ್ಜದ್ ಎಂದು ಗುರಿಸಲಾಗಿದೆ. ಈ ಎಲ್ಲಾ ಕೈದಿಗಳು ನಿಷೇಧಿತ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ)ದ ಎಂಟು ಸದಸ್ಯರು ಎಂದು ತಿಳಿದು ಬಂದಿದೆ. ಪರಾರಿಯಾಗುವ ವೇಳೆ ಜೈಲಿನ ಸೆಕ್ಯುರಿಟಿ ಗಾರ್ಡ್ ಹತ್ಯೆ ಮಾಡಿದ್ದರು.[ಜೈಲಿನಿಂದ ನಿಷೇಧಿತ ಸಿಮಿ ಸಂಘಟನೆಯ ಸದಸ್ಯರು ಎಸ್ಕೇಪ್]

ಮಧ್ಯಪ್ರದೇಶ ರಾಜ್ಯದಲ್ಲಿ ಈ ರೀತಿ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡಾ ಭೋಪಾಲ್ ಕೇಂದ್ರ ಕಾರಾಗೃಹದಿಂದಲೇ ವಿಚಾರಣಾಧೀನ ಕೈದಿಗಳಾಗಿದ್ದ ಸಿಮಿ ಸಂಘಟನೆಯ ಹತ್ತು ಸದಸ್ಯರು ಎಸ್ಕೇಪ್ ಆಗಿದ್ದರು. ಆದರೆ, ಈ ಪೈಕಿ ಐವರನ್ನು ತಕ್ಷಣವೇ ಬಂಧಿಸುವಲ್ಲಿ ಅಲ್ಲಿನ ಪೊಲೀಸರು ಯಶಸ್ವಿಯಾಗಿದ್ದರು.

8 SIMI operatives who escaped from Bhopal jail killed in encounter

ಸರಣಿ ಸ್ಫೋಟದ ರೂವಾರಿಗಳು: ಅಹಮದಾಬಾದಿನ ಸರಣಿ ಸ್ಫೋಟಕ್ಕೆ ಕಾರಣರಾದ ಇವೆರಲ್ಲರಿಗೆ ಕರೀಂನಗರ, ಪುಣೆ ಹಾಗೂ ಚೆನ್ನೈ ಸ್ಫೋಟಕ್ಕೂ ತಯಾರಿ ಸಿಕ್ಕಿತ್ತು. ಭೋಪಾಲ್ ಕೇಂದ್ರ ಕಾರಾಗೃಹದಲ್ಲಿದ್ದ ಇವರು, ಬೆಡ್ ಶೀಟ್ ಬಳಸಿಕೊಂಡು ಗೋಡೆ ಹತ್ತಿ ಸೋಮವಾರ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಎಸ್ಕೇಪ್ ಹಾಕಿದ್ದಾರೆ. ಪರಾರಿಯಾಗುತ್ತಿದ್ದವರನ್ನು ತಡೆಯಲು ಬಂದ ಜೈಲಿನ ಭದ್ರತಾ ಸಿಬ್ಬಂದಿಯೊಬ್ಬರ ಕುತ್ತಿಗೆಯನ್ನು ಸ್ಟೀಲ್ ತಟ್ಟೆ ಹಾಗೂ ಗಾಜಿನಿಂದ ಸೀಳಿ ಹತ್ಯೆಗೈದಿದ್ದರು.

ಈ ಘಟನೆ ಬಳಿಕ ಐವರು ಜೈಲಿನ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪರಾರಿಯಾದವರ ಬೆನ್ನು ಹತ್ತಿದ ಎಸ್ಪಿ ಅರವಿಂದ್ ಸಕ್ಸೇನಾ ಅವರ ತಂಡ, ಎಲ್ಲರನ್ನು ಎನ್ ಕೌಂಟರಿನಲ್ಲಿ ಹತ್ಯೆ ಮಾಡಿದೆ. ಇದೇ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಬು ಫೈಸಲ್ ಅಲಿಯಾಸ್ ಡಾಕ್ಟರ್ ಎಂಬ ಉಗ್ರ ಈ 'ಜೈಲ್ ಬ್ರೇಕ್' ಐಡಿಯಾ ಹಾಗೂ ಸಂಚು ರೂಪಿಸಿ ಇವರೆಲ್ಲರನ್ನು ಉತ್ತೇಜಿಸಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 8 SIMI operatives who escaped from the Bhopal central jail this morning have been killed in an encounter at Einthkedi village on the outskirts of Bhopal, Madhya Pradesh. They have been identified as Sheikh Mujeeb, Khaled, Aqeel, Majid, Zaqir Hussain, Mohammad Saliq, Sheikh Mehboob and Amjad.
Please Wait while comments are loading...