ಜನವರಿಯಲ್ಲಿ 8.96 ಲಕ್ಷ ಉದ್ಯೋಗ ಸೃಷ್ಟಿ: ಇಪಿಎಫ್‌ಒ ಮಾಹಿತಿ

ನವದೆಹಲಿ, ಮಾರ್ಚ್ 23: ಔಪಚಾರಿಕ ವಲಯದಲ್ಲಿ ಪ್ರಸಕ್ತ ವರ್ಷದ ಜನವರಿಯಲ್ಲಿ 8.96 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಕಾರ್ಮಿಕರ ಭವಿಷ್ಯನಿಧಿ ಕಚೇರಿಯ ವೇತನಪಟ್ಟಿಯ ಮಾಹಿತಿ ತಿಳಿಸಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಈ ಸರಾಸರಿ ಉದ್ಯೋಗ ಸೃಷ್ಟಿಯ ಪ್ರಮಾಣವು ಕಳೆದ 17 ತಿಂಗಳಿನಲ್ಲಿಯೇ ಅಧಿಕವಾಗಿದೆ ಎಂದು ಅದು ತಿಳಿಸಿದೆ. ಇಪಿಎಫ್‌ಒ 2018ರ ಏಪ್ರಿಲ್ ನ ವೇತನಪಟ್ಟಿಯ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಇದು 2017ರ ಸೆಪ್ಟೆಂಬರ್‌ ಅವಧಿಯನ್ನು ಸಹ ಒಳಗೊಂಡಿದೆ. ಕಳೆದ 17 ತಿಂಗಳಿನಲ್ಲಿ 76.48 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಇದು ತಿಳಿಸಿದೆ.

ಜನವರಿಯಲ್ಲಿ ಸೇರ್ಪಡೆಯಾದ ಉದ್ಯೋಗಿಗಳ ಪ್ರಮಾಣ ಶೇ 131 ರಷ್ಟು ಹೆಚ್ಚಾಗಿದೆ. 3.87 ಲಕ್ಷ ಇಪಿಎಫ್‌ಓ ಗ್ರಾಹಕರು ಸೇರಿಕೊಂಡಿದ್ದಾರೆ. 2017ರ ಸೆಪ್ಟೆಂಬರ್‌ನಲ್ಲಿ ಒಟ್ಟಾರೆ 2,75,609 ಉದ್ಯೋಗಗಳು ಸೃಷ್ಟಿಯಾಗಿದ್ದವು.

8.96 lakh jobs created in january epfo payroll data

ಎರಡು ಕೋಟಿ ಉದ್ಯೋಗ ನಷ್ಟ
ನ್ಯಾಷನಲ್ ಸ್ಯಾಂಪಲ್ ಸರ್ವೇ ಕಚೇರಿ (ಎನ್‌ಎಸ್‌ಎಸ್‌ಒ) ಇತ್ತೀಚೆಗೆ ಸಲ್ಲಿಸಿದ ವರದಿ ಪ್ರಕಾರ 2011-12ರಿಂದ 2017-18ರ ಅವಧಿಯ ಐದು ವರ್ಷಗಳಲ್ಲಿ ದೇಶದಲ್ಲಿ ಸುಮಾರು ಎರಡು ಕೋಟಿ ಮಂದಿ ಉದ್ಯೋಗ ನಷ್ಟ ಅನುಭವಿಸಿದ್ದಾರೆ.

ಕರ್ನಾಟಕದ ಮತದಾರರೆ, ನಿಮ್ಮ ಕ್ಷೇತ್ರ ಯಾವುದು? ಕಳೆದ ಬಾರಿ ಗೆದ್ದವರು, ಸೋತವರು ಯಾರು?

ಎನ್‌ಎಸ್‌ಎಸ್‌ಒದ ಕಾರ್ಮಿಕ ದಳದ ಕಾಲಮಾನದ ಸಮೀಕ್ಷೆ (ಪಿಎಲ್‌ಎಫ್‌ಎಸ್‌) ವರದಿ ಇನ್ನೂ ಬಹಿರಂಗವಾಗಬೇಕಿದೆ. ಅದರ ಮಾಹಿತಿ ಪ್ರಕಾರ 28.6 ಕೋಟಿ ಮಂದಿ ಮಾತ್ರ 2017-18ರ ಅವಧಿಯಲ್ಲಿ ಉದ್ಯೋಗ ಗಿಟ್ಟಿಸಿದ್ದಾರೆ. 2011-12ರ ಅವಧಿಯಲ್ಲಿ 30.4 ಕೋಟಿ ಜನರು ಉದ್ಯೋಗ ಪಡೆದುಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+