ಗುಜರಾತಿನಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ 7 ಮಕ್ಕಳು ಸಾವು
ಪಂಚಮಹಲ್, ಆಗಸ್ಟ್ 13: ಗುಜರಾತಿನ ಪಂಚಮಹಲ್ ಜಿಲ್ಲೆಯಲ್ಲಿ ಕಾರೊಂದು ಚರಂಡಿಗೆ ಉರುಳಿದ ಪರಿಣಾಮ ಒಂದೇ ಕುಟುಂಬದ 7 ಮಕ್ಕಳು ಮೃತರಾದ ಭೀಕರ ಘಟನೆ ಭಾನುವಾರ ನಡೆದಿದೆ.
ಗುಜರಾತಿನ ಜಂಬುಘೋಡ ನಗರದ ಭಟ್ ಗ್ರಾಮದ ಹಾಲೋಲ್-ಬೊಡೆಲಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಚಾಲಕ ನಿಯಂತ್ರಣ ಕಳೆದುಕೊಂಡು ವಾಹನ ಚಲಾಯಿಸಿದ್ದೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.
ಈ ಕಾರಿನಲ್ಲಿ ಒಟ್ತು 10 ಜನ ಪ್ರಯಾಣಿಸುತ್ತಿದ್ದರು. ಅದರಲ್ಲಿ ಒಂದೇ ಕುಟುಂಬದ ಏಳು ಮಕ್ಕಳೂ ಇದ್ದರು. ಅಪಘಾತದ ನಂತರ ಏಳು ಮಕ್ಕಳು ಸ್ಥಳದಲ್ಲೇ ಮೃತರಾಗಿದ್ದು, ಮೂವರನ್ನು ರಕ್ಷಿಸಲಾಗಿದೆ.

ಗಂಭೀರವಾಗಿ ಗಾಯಗೊಂಡ ಮೂವರು ಮಗತ್ತು ಮೃತರಾದ ಏಳು ಮಕ್ಕಳು ಎಲ್ಲರೂ ಒಂದೇ ಕುಟುಂಬದ ಸದಸ್ಯರೆಂಬುದು ತಿಳಿದುಬಂದಿದೆ. ಸಂಬಂಧಿಕರೊಬ್ಬರ ಮನೆಗೆ ತೆರಳಿದ್ದ ಅವರು, ಮನೆಗೆ ವಾಪಸ್ಸಾಗುತ್ತಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.












Click it and Unblock the Notifications