ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6G in India : ಈ ದಶಕದ ಅಂತ್ಯಕ್ಕೆ 6G ಇಂಟರ್‌ನೆಟ್‌: ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಆಗಸ್ಟ್‌ 26: ದೇಶದಲ್ಲಿ 5G ಸೇವೆಗಳನ್ನು ಪ್ರಾರಂಭಿಸಲು ತಯಾರಿ ನಡೆಸಲಾಗುತ್ತಿದೆ. ಈ ವೇಳೆಯೇ ಈ ದಶಕದ ಅಂತ್ಯದ ವೇಳೆಗೆ 6ಜಿ ಇಂಟರ್‌ನೆಟ್‌ ಸೇವೆಯನ್ನು ಪ್ರಾರಂಭಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022ರ ಗ್ರ್ಯಾಂಡ್ ಫಿನಾಲೆಯ ತಮ್ಮ ಭಾಷಣದಲ್ಲಿ ಮೋದಿ ಹೇಳಿದರು.

ಕೃಷಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಡ್ರೋನ್ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸಲು ಯುವಕರು ಹೊಸ ಪರಿಹಾರ ಕ್ರಮಗಳಲ್ಲಿ ಕೆಲಸ ಮಾಡಬಹುದು. ನಾವು ಈ ದಶಕದ ಅಂತ್ಯದ ವೇಳೆಗೆ 6ಜಿ ಅನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದ್ದೇವೆ. ಸರ್ಕಾರವು ಗೇಮಿಂಗ್ ಮತ್ತು ಮನರಂಜನೆಯಲ್ಲಿ ಆತ್ಮನಿರ್ಭರ ಪರಿಹಾರ ಕ್ರಮಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಸರ್ಕಾರವು ಇಲ್ಲಿ ಹೂಡಿಕೆ ಮಾಡುವುದರಿಂದ ಎಲ್ಲಾ ಯುವಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತದಲ್ಲಿ Cheap And Best 5ಜಿ ಸೇವೆ ಯಾವಾಗ ಶುರು!?ಭಾರತದಲ್ಲಿ Cheap And Best 5ಜಿ ಸೇವೆ ಯಾವಾಗ ಶುರು!?

ಪ್ರತಿದಿನ ಹೊಸ ಕ್ಷೇತ್ರಗಳು ಮತ್ತು ಸವಾಲುಗಳು ನವೀನ ಪರಿಹಾರಗಳನ್ನು ಹುಡುಕುತ್ತಿವೆ. ಹೀಗಾಗಿ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿ ಹಳ್ಳಿಯಲ್ಲಿ ಆಪ್ಟಿಕಲ್ ಫೈಬರ್ ಮತ್ತು 5ಜಿ ಬಿಡುಗಡೆ ಹಾಗೂ ಉತ್ತೇಜನದಂತಹ ಕ್ರಮಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಅವರು ಯುವ ನವೋದ್ಯಮಿಗಳಿಗೆ ಕಿವಿಮಾತು ಹೇಳಿದರು.

ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಭಾರತವು 5ಜಿ ತಂತ್ರಜ್ಞಾನದ ಅಳವಡಿಕೆಗೆ ಸಜ್ಜಾಗಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ 5ಜಿ ಸೇವೆ ಲಭ್ಯವಾಗಬಹುದು. ಹಲವು ನೆಟ್‌ವರ್ಕ್‌ ಉದ್ಯಮಗಳು 5ಜಿ ಮೂಲಸೌಕರ್ಯಕ್ಕಾಗಿ ನೇಮಕವನ್ನು ಪ್ರಾರಂಭಿಸಿದೆ. 2ರಿಂದ 3 ವರ್ಷಗಳಲ್ಲಿ 5ಜಿ ಸೇವೆಗಳು ದೇಶದ ಪ್ರತಿಯೊಂದು ಭಾಗಕ್ಕೂ ತಲುಪುತ್ತವೆ. 5ಜಿ ಶುಲ್ಕಗಳನ್ನು ಕೈಗೆಟುಕುವಂತೆ ಮಾಡಲು ನಾವು ಉದ್ಯಮಿಗಳನ್ನು ವಿನಂತಿಸಿದ್ದೇವೆ. ನಮ್ಮ ಮೊಬೈಲ್ ಸೇವೆಗಳ ಶುಲ್ಕಗಳು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ ಅವರು ಹೇಳಿದರು.

ನಿಮ್ಮ ಮೊಬೈಲ್ 5Gಗೆ ಬೆಂಬಲಿಸುತ್ತಾ? ಹೇಗೆ ತಿಳಿಯಿರಿನಿಮ್ಮ ಮೊಬೈಲ್ 5Gಗೆ ಬೆಂಬಲಿಸುತ್ತಾ? ಹೇಗೆ ತಿಳಿಯಿರಿ

 ಸ್ಪೆಕ್ಟ್ರಮ್ ಹರಾಜು ಯಶಸ್ವಿ: ಸಚಿವ

ಸ್ಪೆಕ್ಟ್ರಮ್ ಹರಾಜು ಯಶಸ್ವಿ: ಸಚಿವ

5ಜಿ ಯ ಅತ್ಯಂತ ವೇಗದ ಸೇವೆ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲಾ ಹಂತಗಳು ಬಹಳ ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತ ರೀತಿಯಲ್ಲಿ ಮುಂದುವರಿಯುತ್ತಿವೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಸ್ಪೆಕ್ಟ್ರಮ್ ಹರಾಜು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸಮನ್ವಯ ಆವರ್ತನ ಹಂಚಿಕೆ ಪತ್ರಗಳನ್ನು ಸಮಯಕ್ಕೆ ಸರಿಯಾಗಿ ನೀಡಲಾಗಿದೆ. ಏಕಕಾಲದಲ್ಲಿ ನಾವೆಲ್ಲರೂ 5ಜಿ ಇಂಟರ್‌ನೆಟ್‌ ಸೇವೆ ಮೂಲಕ ಕೆಲಸ ಮಾಡಲಿದ್ದೇವೆ ಎಂದು ಅವರು ಹೇಳಿದರು.

 ಹೊಸ ಆಲೋಚನೆಗಳಿಗೆ ಒಗ್ಗಬೇಕು

ಹೊಸ ಆಲೋಚನೆಗಳಿಗೆ ಒಗ್ಗಬೇಕು

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನಲ್ಲಿ ಭಾರತದಲ್ಲಿ ನಾವೀನ್ಯತೆಯ ಕ್ರಮಗಳನ್ನು ಹೆಚ್ಚಿಸಲು ಒತ್ತಿ ಹೇಳಿದ ಪ್ರಧಾನಿ ಮೋದಿ ಅವರು, ನಾವು ಸಾಮಾಜಿಕ ಬೆಂಬಲ ಮತ್ತು ಸಾಂಸ್ಥಿಕ ಬೆಂಬಲ ಎಂಬ ಎರಡು ವಿಷಯಗಳತ್ತ ನಿರಂತರವಾಗಿ ಗಮನಹರಿಸಬೇಕು. ಸಮಾಜದಲ್ಲಿ ಆವಿಷ್ಕಾರವನ್ನು ವೃತ್ತಿಯಾಗಿ ಸ್ವೀಕರಿಸುವುದು ಹೆಚ್ಚಿದೆ. ಅಂತಹ ಪರಿಸ್ಥಿತಿಯಲ್ಲಿ ನಾವು ಹೊಸ ಆಲೋಚನೆಗಳು ಮತ್ತು ಮೂಲ ಚಿಂತನೆಯನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.

 ಇಂದು ಡಿಜಿಟಲ್ ಮತ್ತು ಟ್ಯಾಲೆಂಟ್ ಕ್ರಾಂತಿ

ಇಂದು ಡಿಜಿಟಲ್ ಮತ್ತು ಟ್ಯಾಲೆಂಟ್ ಕ್ರಾಂತಿ

ಇಂದು ಪ್ರತಿಯೊಂದು ಕ್ಷೇತ್ರವನ್ನು ಆಧುನಿಕಗೊಳಿಸುವತ್ತ ಗಮನ ಹರಿಸಲಾಗಿದೆ. ಸಂಶೋಧನೆ ಮತ್ತು ಆವಿಷ್ಕಾರಗಳು ಕೆಲಸ ಮಾಡುವ ವಿಧಾನದಿಂದ ಜೀವನ ವಿಧಾನಕ್ಕೆ ಬದಲಾಗಬೇಕು. ಕಳೆದ 7ರಿಂದ 8 ವರ್ಷಗಳಲ್ಲಿ ದೇಶವು ಒಂದರ ನಂತರ ಮತ್ತೊಂದು ಕ್ರಾಂತಿಯ ಮೂಲಕ ವೇಗವಾಗಿ ಪ್ರಗತಿ ಹೊಂದುತ್ತಿದೆ. ಇಂದು ಡಿಜಿಟಲ್ ಮತ್ತು ಟ್ಯಾಲೆಂಟ್ ಕ್ರಾಂತಿಗಳು ನಡೆಯುತ್ತಿವೆ. ಇಂದು ಭಾರತದಲ್ಲಿ ಮೂಲಸೌಕರ್ಯ ಕ್ರಾಂತಿಯಾಗುತ್ತಿದೆ. ಇಂದು ಭಾರತದಲ್ಲಿ ಆರೋಗ್ಯ ಕ್ಷೇತ್ರದ ಕ್ರಾಂತಿಯಾಗುತ್ತಿದೆ. ಅಲ್ಲದೆ ಇಂದು ಡಿಜಿಟಲ್ ಕ್ರಾಂತಿ, ತಂತ್ರಜ್ಞಾನ ಕ್ರಾಂತಿ, ಪ್ರತಿಭಾ ಕ್ರಾಂತಿ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

 ನವೋದ್ಯಮಿಗಳಿಗೆ ಅನೇಕ ಅವಕಾಶ: ಮೋದಿ

ನವೋದ್ಯಮಿಗಳಿಗೆ ಅನೇಕ ಅವಕಾಶ: ಮೋದಿ

ಮಹತ್ವಾಕಾಂಕ್ಷೆಯ ಸಮಾಜದ ಬಗ್ಗೆ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಘೋಷಣೆಯನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಯವರು, ಈ ಮಹತ್ವಾಕಾಂಕ್ಷೆಯ ಸಮಾಜವು ಮುಂಬರುವ 25 ವರ್ಷಗಳಲ್ಲಿ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಸಮಾಜದ ಆಕಾಂಕ್ಷೆಗಳು, ಕನಸುಗಳು ಮತ್ತು ಸವಾಲುಗಳು ನವೋದ್ಯಮಿಗಳಿಗೆ ಅನೇಕ ಅವಕಾಶಗಳನ್ನು ತರುತ್ತವೆ ಎಂದು ಮೋದಿ ಅವರು ಹೇಳಿದರು.

English summary
Prime Minister Narendra Modi has said that the government is preparing to launch 6G internet services by the end of this decade while preparing to launch 5G services in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X