ಭಾರತದಲ್ಲಿ ಒಂದೇ ದಿನ 47,704 ಕೊರೊನಾ ಸೋಂಕಿತರು ಪತ್ತೆ
ನವದೆಹಲಿ, ಜುಲೈ 28: ಭಾರತದಲ್ಲಿ ಒಂದೇ ದಿನ 47,704 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
24 ಗಂಟೆಯಲ್ಲಿ 654 ಮಂದಿ ಮೃತಪಟ್ಟಿದ್ದಾರೆ. ಒಟ್ಟು ದೇಶದಲ್ಲಿ 14,83,157 ಕೊರೊನಾ ಸೋಂಕಿತ ಪ್ರಕರಣಗಳಿವೆ. 4,96,988 ಪ್ರಕರಣಗಳು ಸಕ್ರಿಯವಾಗಿವೆ.9,52,744 ಮಂದಿ ಗುಣಮುಖರಾಗಿದ್ದಾರೆ.
ಒಟ್ಟು 33,425 ಮಂದಿ ಮೃತಪಟ್ಟಿದ್ದಾರೆ. ಜುಲೈ 26-27 ರಂದ ದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಕೊವಿಡ್ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಜುಲೈ 26 ರಂದು 5,15,000 ಮಂದಿಯನ್ನು ಪರೀಕ್ಷೆಗೊಳಪಡಿಸಿತ್ತು.

ಜುಲೈ 27 ರಂದು 5,28,000 ಮಂದಿ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
More than 5 lakh #COVID19 tests conducted in a single day over two consecutive days. On 26th July, India tested a total of 5,15,000 samples and on 27th July, a total of 5,28,000 samples were tested: Ministry of Health & Family Welfare pic.twitter.com/fsP0blKJii
— ANI (@ANI) July 28, 2020
ಮಹಾರಾಷ್ಟ್ರದಲ್ಲಿ ಒಟ್ಟು 3,75,799 ಕೊರೊನಾ ಸೋಂಕಿತ ಪ್ರಕರಣಗಳಿದ್ದು, ಹೊಸದಾಗಿ 9,431 ದಾಖಲಾಗಿವೆ. ತಮಿಳುನಾಡಿನಲ್ಲಿ 2,13,723 ಪ್ರಕರಣಗಳಿವೆ ಮತ್ತೆ 6,986 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications