ಭಾರತದಲ್ಲಿ ಮತ್ತೆ 43,393 ಕೊರೊನಾ ಸೋಂಕಿತರು ಪತ್ತೆ

ನವದೆಹಲಿ, ಜುಲೈ 09: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ದಿನ ಹೆಚ್ಚು ಒಂದು ದಿನ ಕಡಿಮೆಯಾಗುತ್ತಿದೆ.

ಮೂರನೇ ಅಲೆಯ ಆತಂಕದಲ್ಲಿ ಜನತೆ ಇದ್ದಾರೆ, ಕಳೆದ 24 ಗಂಟೆಯಲ್ಲಿ 43,393 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 3,07,52,950 ಪ್ರಕರಣಗಳಿವೆ. 4,58,727 ಸಕ್ರಿಯ ಪ್ರಕರಣಗಳಿವೆ.

ಒಂದೇ ದಿನದಲ್ಲಿ 44,459 ಮಂದಿ ಚೇತರಿಕೆ ಕಂಡಿದ್ದಾರೆ, ಇದುವರೆಗೆ 2,98,88,284 ಮಂದಿ ಗುಣಮುಖರಾಗಿದ್ದಾರೆ. ಒಂದೇ ದಿನದಲ್ಲಿ 911 ಮಂದಿ ಮೃತಪಟ್ಟಿದ್ದು, ಇಲ್ಲಿಯವರೆಗೆ 4,05,939 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

43,393 New Coronavirus cases reported in india in last 24 hours

ಕಳೆದ 24 ಗಂಟೆಯಲ್ಲಿ 40,23,173 ಲಸಿಕೆ ನೀಡಲಾಗಿದೆ, ಇಲ್ಲಿಯವರೆಗೆ 36,89,91,222 ಮಂದಿಗೆ ಲಸಿಕೆ ನೀಡಲಾಗಿದೆ. ಜುಲೈ 8ರವರೆಗೆ 42,70,16,605 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಜುಲೈ 8 ರಂದು 17,90,708 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ಲಸಿಕೆ ಅಭಿಯಾನ ಆರಂಭಿಸಿ 174 ದಿನಗಳದಲ್ಲಿ 36.85 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಣೆ ಮಾಡಲಾಗಿದೆ.

ದೇಶದಲ್ಲಿ ಗುರುವಾರ ರಾತ್ರಿ 7 ಗಂಟೆ ವೇಳೆಗೆ 36,08,940 ಮಂದಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಒಟ್ಟು 36,85,76,352 ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

18 ರಿಂದ 44 ವಯೋಮಾನದ 17,93,389 ಜನರಿಗೆ ಮೊದಲ ಡೋಸ್ ಹಾಗೂ 1,71,647 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಇದೇ ವಯೋಮಾನದ 10,82,14,937 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 33,70,920 ಜನರಿಗೆ ಎರಡನೇ ಡೋಸ್ ಲಸಿಕೆ ವಿತರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+