ಭಾರತದಲ್ಲಿ ಹೊಸದಾಗಿ 40,715 ಮಂದಿಗೆ ಕೊರೊನಾ ಸೋಂಕು
ನವದೆಹಲಿ, ಮಾರ್ಚ್ 23: ಭಾರತದಲ್ಲಿ ಕಳೆದ 24 ಗಂಟೆಗಳ್ಲಲಿ 40,715 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಸೋಮವಾರದ ಅಂಕಿ ಅಂಶಗಳ ಪ್ರಕಾರ 46,951 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಅದಕ್ಕಿಂತ ಇಂದು ಪ್ರಕರಣಗಳ ಸಂಖ್ಯೆ ಸ್ವಲ್ಪ ಕಡಿಮೆಯಾದಂತಾಗಿದೆ.
ದೇಶದಲ್ಲಿ ಈವರೆಗೆ 1,11,81,253 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 3,45,377ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 199 ಮಂದಿ ಮೃತಪಟ್ಟಿದ್ದು, 29,785 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇದುವರೆಗೆ 1,60,166 ಮಂದಿ ಸಾವನ್ನಪ್ಪಿದ್ದಾರೆ. ದೇಶಾದ್ಯಂತ 4,84,94,594 ಮಂದಿಗೆ ಲಸಿಕೆ ಹಾಕಲಾಗಿದೆ. ಮಾರ್ಚ್ 22ರವರೆಗೆ 23,54,13,233 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಮಾರ್ಚ್ 22 ರಂದು 9,67,459 ಮಾದರಿಗಳನ್ನು ಪರೀಕ್ಷಿಸಲಾಗಿದೆ.












Click it and Unblock the Notifications