400 ಮಂದಿ ವಿಷಾಹಾರ ಸೇವನೆ, ನಾಲ್ವರು ತೀವ್ರ ಅಸ್ವಸ್ಥ
ಕೇರಳದ ಪಲ್ಲಿಪುರಂನ ಸಿಆರ್ ಪಿಎಫ್ ಶಿಬಿರದಲ್ಲಿ ವಿಷಾಹಾರವನ್ನು ಸೇವಿಸಿ 400 ಯೋಧರು ಅಸ್ವಸ್ತರಾಗಿರುವ ಘಟನೆ ನಡೆದಿದೆ. ನಾಲ್ವರು ಯೋಧರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ.
ತಿರುವನಂಪತಪುರಂ, ಏಪ್ರಿಲ್ 02: ಕೇರಳದ ಪಲ್ಲಿಪುರಂನ ಸಿಆರ್ ಪಿಎಫ್ ಶಿಬಿರದಲ್ಲಿ ವಿಷಾಹಾರವನ್ನು ಸೇವಿಸಿ 400 ಯೋಧರು ಅಸ್ವಸ್ತರಾಗಿರುವ ಘಟನೆ ನಡೆದಿದೆ. ನಾಲ್ವರು ಯೋಧರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ.
ವಿಷಯುಕ್ತ ಆಹಾರದಿಂದಾಗಿ ಯೋಧರು ಅಸ್ವಸ್ತರಾಗಿದ್ದಾರೆಂದು ಶಂಕಿಸಲಾಗಿದೆ. ಅಸ್ವಸ್ತಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಶನಿವಾರ ರಾತ್ರಿ ವೇಳೆ ಆಹಾರ ಸೇವಿಸುತ್ತಿದ್ದಂತೆಯೇ ಯೋಧರಿಗೆ ಹೊಟ್ಟೆನೋವು ಹಾಗೂ ವಾಂತಿಯಾಗಲು ಪ್ರಾರಂಭವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದ್ದು ವೈದ್ಯಾಧಿಕಾರಿಗಳು ಹೇಳಿದ್ದಾರೆ.












Click it and Unblock the Notifications