ಭಾರತದಲ್ಲಿ 38,079 ಮಂದಿ ಕೊರೊನಾ ಸೋಂಕಿತರು ಪತ್ತೆ
ನವದೆಹಲಿ, ಜುಲೈ 17: ಭಾರತದಲ್ಲಿ 38,079 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 560 ಮಂದಿ ಮೃತಪಟ್ಟಿದ್ದಾರೆ, ಒಟ್ಟು 4,24,025 ಸಕ್ರಿಯ ಪ್ರಕರಣಗಳಿವೆ. ಚೇತರಿಕೆ ಪ್ರಮಾಣ ಶೇ.97.31ರಷ್ಟಿದೆ.
ಜುಲೈ 16ರವರೆಗೆ ದೇಶದಲ್ಲಿ ಒಟ್ಟು 44,20,21,954 ಮಾದರಿಯನ್ನು ಪರೀಕ್ಷಿಸಲಾಗಿದೆ. ಜುಲೈ 16 ರಂದು ಒಂದೇ ದಿನ 19,98,715 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕೋವಿಡ್-19 3ನೇ ಅಲೆ ನಿರ್ವಹಣೆ ವಿಚಾರವಾಗಿ ಕೇಂದ್ರ ಸರ್ಕಾರ ಮಹತ್ವದ ಎಚ್ಚರಿಕೆ ನೀಡಿದ್ದು, ಕೊಂಚ ನಿರ್ಲಕ್ಷ್ಯ ವಹಿಸಿದರೂ ಪರಿಸ್ಥಿತಿ ಕೈ ಮೀರುತ್ತದೆ ಎಂದು ಹೇಳಿದೆ.
ಹೌದು.. ಭಾರತ ಈಗಾಗಲೇ ಕೋವಿಡ್-19 2ಅಲೆಯಿಂದಾಗಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ತತ್ತರಿಸಿಹೋಗಿದ್ದು, ಇದೀಗ ಕೆಲವೇ ದಿನಗಳ ಅಂತರದಲ್ಲಿ ಮೂರನೇ ಅಲೆಯ ಭೀತಿ ಆರಂಭವಾಗಿದೆ.

ಇದೇ ವಿಚಾರವಾಗಿ ಕಳೆದ ಕೆಲ ವಾರಗಳಿಂದಲು ಕೇಂದ್ರ ಸರ್ಕಾರ ಮತ್ತು ಕೇಂದ್ರ ಆರೋಗ್ಯ ಇಲಾಖೆ ಕಠಿಣ ಎಚ್ಚರಿಕೆಗಳನ್ನು ನೀಡುತ್ತಾಬಂದಿದ್ದು, ಇದೀಗ ಇದೇ ವಿಚಾರವಾಗಿ ನೀತಿ ಆಯೋಗ ಆರೋಗ್ಯ ವಿಭಾಗ ಕೂಡ ಮಹತ್ವದ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ.ಕೆ ಪಾಲ್ ಅವರು, 'ಭಾರತದ ಕೋವಿಡ್-19 3ನೇ ಅಲೆಯ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ 100 ರಿಂದ 125 ದಿನಗಳು ಅತ್ಯಂತ ನಿರ್ಣಾಯಕವಾದದ್ದು. ಇತ್ತೀಚಿನ ದಿನಗಳಲ್ಲಿ ಹೊಸ ಪ್ರಕರಣಗಳಲ್ಲಿನ ಕುಸಿತವು ನಿಧಾನವಾಗಿದೆ. ಇದು ಖಂಡಿತಾ ನಮದೆ ಎಚ್ಚರಿಕೆಯ ಸಂಕೇತವಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications