ದೇಶದಲ್ಲಿ ಕಳೆದ 111 ದಿನಗಳಲ್ಲೇ ಅತಿ ಕಡಿಮೆ ಕೊರೊನಾ ಪ್ರಕರಣ ದಾಖಲು

ನವದೆಹಲಿ, ಜುಲೈ 06: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 34,703 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಒಟ್ಟು 3,06,19,932 ಪ್ರಕರಣಗಳಿವೆ, ಒಂದೇ ದಿನದಲ್ಲಿ 51,864 ಮಂದಿ ಗುಣಮುಖರಾಗಿದ್ದಾರೆ, ಇದುವರೆಗೆ ಒಟ್ಟು 2,97,52,294 ಮಂದಿ ಗುಣಮುಖರಾಗಿದ್ದಾರೆ, ಒಂದೇ ದಿನದಲ್ಲಿ 553 ಮಂದಿ ಮೃತಪಟ್ಟಿದ್ದಾರೆ, ಇದುವರೆಗೆ 4,03,281 ಮಂದಿ ಮೃತಪಟ್ಟಿದ್ದರು.

4,64,357 ಸಕ್ರಿಯ ಪ್ರಕರಣಗಳಿವೆ, ದೇಶದಲ್ಲಿ ಕಳೆದ 111 ದಿನದಲ್ಲೇ ಇದೇ ಮೊದಲ ಬಾರಿಗೆ ಕೊರೊನಾ ಪ್ರಕರಣಗಳ ಸಂಖ್ಯೆ ತೀರಾ ಇಳಿಕೆಯನ್ನು ಕಂಡಿದೆ.

34-703-new-coronavirus-cases-reported-in-india-in-the-last-24-hours

ಕಳೆದ 24 ಗಂಟೆಗಳಲ್ಲಿ 41,34,868 ಮಂದಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಲಾಗಿದೆ. 18 ರಿಂದ 44 ವಯೋಮಾನದ 18,30,741 ಜನರಿಗೆ ಮೊದಲ ಡೋಸ್ ಹಾಗೂ 1,40,368 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 171 ದಿನಗಳೇ ಕಳೆದಿವೆ. ದೇಶದಲ್ಲಿ ಇದುವರೆಗೂ ಒಟ್ಟು 35,71,05,461 ಮಂದಿಗೆ ಕೊವಿಡ್-19 ಲಸಿಕೆ ವಿತರಣೆ ಮಾಡಲಾಗಿದೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು.

ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+