110 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕಿಯ ರಕ್ಷಣೆ
Recommended Video

ಪಾಟ್ನಾ, ಆಗಸ್ಟ್ 01: ಬಿಹಾರದ ಮುಂಗೇರ್ ಜಿಲ್ಲೆಯ ಬಳಿಯ ಗ್ರಾಮವೊಂದರಲ್ಲಿ 110 ಅಡಿ ಆಳದ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ಸತತ ಕಾರ್ಯಾಚಾರಣೆ ನಂತರ ಯಶಸ್ವಿಯಾಗಿ ರಕ್ಷಿಸಲಾಗಿದೆ.
ರಾಷ್ಟ್ರೀಯ ವಿಪತ್ತು ದಳ ಮತ್ತು ರಾಜ್ಯ ವಿಪತ್ತು ದಳ ಜಂಟಿಯಾಗಿ ಮಾಡಿದ ಕಾರ್ಯಾಚರಣೆಯಿಂದ ಪುಟ್ಟ ಬಾಲಕಿ ಸನಾಳ ಜೀವ ಉಳಿದಿದೆ.

ಬಾಲಕಿ ಸನಾ ಅಂಗಳದಲ್ಲಿ ಆಡುತ್ತಿದ್ದಾಗ ಕೊಳವೆ ಬಾವಿಗೆ ಬಿದ್ದಿದ್ದಾಳೆ ಎಂದು ಪೋಷಕರು ಹೇಳಿದ್ದಾರೆ. ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ. ಪೊಲೀಸರು ವಿಪತ್ತು ದಳವನ್ನು ಸಂಪರ್ಕ ಮಾಡಿದ್ದಾರೆ.
ರಾಜ್ಯ ವಿಪತ್ತು ದಳ ಹಾಗೂ ಕೆಲ ಮಂದಿಯ ರಾಷ್ಟ್ರೀಯ ವಿಪತ್ತು ದಳದ ತಂಡವನ್ನು ಹೆಲಿಕಾಪ್ಟರ್ ಮೂಲಕ ಘಟನೆ ನಡೆದಿದ್ದ ಮುಂಗಿಚೆರಕ್ ಗ್ರಾಮಕ್ಕೆ ಕರೆತರಲಾಗಿದೆ. ಆ ನಂತರ ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ದಳದ) ಮತ್ತೊಂದು ತಂಡ ರಸ್ತೆ ಮೂಲಕ ಘಟನಾ ಸ್ಥಳಕ್ಕೆ ಬಂದಿದೆ.

ಕೊಳವೆ ಬಾವಿಗೆ ಸ್ವಲ್ಪ ದೂರದಲ್ಲಿ ಇಂಗ್ಲಿಷ್‌ನ ಎಲ್ (L) ಆಕಾರದಲ್ಲಿ ಮತ್ತೊಂದು ಬಾವಿ ತೋಡಿ, ವಿಪತ್ತು ದಳದ ಸಿಬ್ಬಂದಿಯೊಬ್ಬರು ಅದರ ಮೂಲಕ ಹಾದು ಹೋಗಿ ಬಾಲಕಿಯನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ.
ಬಾಲಕಿಯು ಧೈರ್ಯಕ್ಕೂ ಬಹು ಮೆಚ್ಚುಗೆ ವ್ಯಕ್ತವಾಗಿದ್ದು, ಮೂರು ವರ್ಷದ ಆ ಬಾಲಕಿ ವಿಪತ್ತು ದಳದ ಸಿಬ್ಬಂದಿ ಮೇಲಿನಿಂದ ನೀಡಿದ ಎಲ್ಲಾ ಸೂಚನೆಗಳನ್ನು ಧಯರ್ಯದಿಂದ ಪಾಲಿಸಿದರು ಎಂದು ಹೇಳಲಾಗಿದೆ. ಬಾಲಕಿ ಕೊಳವೆ ಬಾವಿಯಿಂದ ಮೇಲಕ್ಕೆ ಕರೆತರುತ್ತಿದ್ದಂತೆ ಆಕೆಯನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ.
ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿಯ ಸಮಯೋಚಿತ ಹಾಗೂ ಸಾಹಸಭರಿತ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕೇವಲ ನಾಲ್ಕು ಗಂಟೆ ಕಾರ್ಯಾಚರಣೆಯಲ್ಲಿ ಅವರು ಬಾಲಕಿಯನ್ನು ರಕ್ಷಿಸಿದ್ದಾರೆ.












Click it and Unblock the Notifications