Bomb Threats: ಕೇವಲ ಒಂದೇ ವಾರದಲ್ಲಿ ವಿಮಾನಗಳಿಗೆ ಬಂದ ಬಾಂಬ್ ಬೆದರಿಕೆಗಳ ಸಂಖ್ಯೆ ಎಷ್ಟು ಗೊತ್ತಾ?
Bomb Threats: ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇವೆ. ಹಾಗಾದರೆ ಇಂದಿನ ಘಟನೆ ಸೇರಿದಂತೆ ಇದೇ ಒಂದು ವಾರದಲ್ಲಿ ಇಂತಹ ಎಷ್ಟು ಪ್ರಕರಣಗಳು ದಾಖಲಾಗಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳಿಗೆ ಬಾಂಬ್ ಬೆದರಿಕೆಗಳ ಸರಣಿಯು ಗುರುವಾರ (ಅಕ್ಟೋಬರ್ 17) ಕೂಡ ಮುಂದುವರೆದಿದೆ. 8 ವಿಮಾನಗಳಿಗೆ ಸಾಮಾಜಿಕ ಮಾಧ್ಯಮದ ಮೂಲಕ ಬೆದರಿಕೆಗಳು ಬಂದಿವೆ. ಇವುಗಳಲ್ಲಿ ಏರ್ ಇಂಡಿಯಾದ ಐದು, ವಿಸ್ತಾರಾದ ಎರಡು ಮತ್ತು ಇಂಡಿಗೋದ ಒಂದು ವಿಮಾನಗಳು ಸೇರಿವೆ ಕೂಡ ಸೇರಿವೆ.

ಇನ್ನು ಇಂದು (ಅಕ್ಟೋಬರ್ 17) ನಡೆದ ಘಟನೆಗಳೊಂದಿಗೆ, ಈ ವಾರ ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳಿಗೆ ಬಾಂಬ್ ಬೆದರಿಕೆಯ ಪ್ರಕರಣಗಳ ಸಂಖ್ಯೆ 28ಕ್ಕೆ ಏರಿಕೆ ಆಗಿವೆ. ಈ ಎಲ್ಲಾ ಬೆದರಿಕೆಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಅನಾಮಧೇಯ ಖಾತೆಗಳಿಂದ ಬಂದಿವೆ.
ಒಂದು ವಾರದಲ್ಲಿ ಹೀಗೆ ಹಲವಾರು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದಿದೆ. ಇನ್ನು ಇಂದು (ಅಕ್ಟೋಬರ್ 17) ಬೆಳಗ್ಗೆ ಫ್ರಾಂಕ್‌ಫರ್ಟ್‌ನಿಂದ ಮುಂಬೈಗೆ ತೆರಳುತ್ತಿದ್ದ ವಿಸ್ತಾರಾ ವಿಮಾನಕ್ಕೂ ಇದೇ ರೀತಿಯ ಬೆದರಿಕೆ ಬಂದಿದ್ದು, ವಿಮಾನವನ್ನು ಮುಂಬೈನಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ಇದು 20ನೇ ಹುಸಿ ಬಾಂಬ್ ಬೆದರಿಕೆ ಕರೆಯಾಗಿದೆ.
ಬುಧವಾರ ಇಂಡಿಗೋ, ಸ್ಪೈಸ್ ಜೆಟ್ ಮತ್ತು ಆಕಾಸ್ ಏರ್‌ಲೈನ್ಸ್‌ನ ಏಳು ವಿಮಾನಗಳಿಗೆ ಇದೇ ರೀತಿಯ ಬಾಂಬ್ ಬೆದರಿಕೆ ಬಂದಿತ್ತು. ಇದಕ್ಕೂ ಮೊದಲು, ಸೋಮವಾರ ಮತ್ತು ಮಂಗಳವಾರದಂದು ಭಾರತೀಯ ವಿಮಾನಯಾನ ಸಂಸ್ಥೆಗಳ ಸುಮಾರು 12 ವಿಮಾನಗಳಿಗೆ ಇದೇ ರೀತಿಯ ಬೆದರಿಕೆಗಳು ಬಂದಿದ್ದವು.
ಗುರುವಾರ (ಅಕ್ಟೋಬರ್ 17) ಬೋಯಿಂಗ್ 787 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆ 147 ಜನರೊಂದಿಗೆ ಮುಂಬೈಗೆ ಹೊರಟಿದ್ದ ವಿಸ್ತಾರಾ ವಿಮಾನ ಫ್ರಾಂಕ್‌ಫರ್ಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ತಕ್ಷಣ ಭದ್ರತಾ ತಪಾಸಣೆಗೆ ಒಳಪಡಿಸಲಾಯಿತು ಎಂದು ಏರ್‌ಲೈನ್ಸ್ ತಿಳಿಸಿದೆ.
ಇದೇ ವೇಳೆ ಟರ್ಕಿಯ ಇಸ್ತಾನ್‌ಬುಲ್‌ನಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೂ ಬಾಂಬ್ ಬೆದರಿಕೆ ಬಂದಿದ್ದು, ಸಮಗ್ರ ಭದ್ರತಾ ತಪಾಸಣೆಯನ್ನು ಕೈಗೊಳ್ಳಲು ಭದ್ರತಾ ಸಂಸ್ಥೆಗಳು ಇಲ್ಲಿನ ಪ್ರತ್ಯೇಕ ಸ್ಥಳಕ್ಕೆ ವಿಮಾನ ತೆಗೆದುಕೊಂಡು ಹೋಗಲಾಯಿತು.
ಅಕ್ಟೋಬರ್ 16, 2024ರಂದು ಫ್ರಾಂಕ್‌ಫರ್ಟ್‌ನಿಂದ ಮುಂಬೈಗೆ ತೆರಳುತ್ತಿದ್ದ ವಿಸ್ತಾರಾ ಫ್ಲೈಟ್ UK 028ಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಬಾಂಬ್ ಬೆದರಿಕೆ ಬಂದಿತ್ತು ಎಂದು ಏರ್‌ಲೈನ್ಸ್ ಹೇಳಿದೆ. ಪ್ರೋಟೋಕಾಲ್ ಪ್ರಕಾರ, ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಈ ಬಗ್ಗೆ ತಿಳಿಸಲಾಯಿತು. ಬಳಿಕ ವಿಮಾನವನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು ಎಂದು ವಿಸ್ತಾರ ಏರ್‌ಲೈನ್ಸ್ ತಿಳಿಸಿದೆ.
ಅಗತ್ಯ ಭದ್ರತಾ ತಪಾಸಣೆಗಳನ್ನು ನಡೆಸಲು ವಿಮಾನಯಾನ ಸಂಸ್ಥೆಯು ಭದ್ರತಾ ಏಜೆನ್ಸಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದೆ ಎಂದು ಏರ್‌ಲೈನ್ ಮಾಹಿತಿ ನೀಡಿದೆ. ಬುಧವಾರದಂದು ಆಕಾಸ ಏರ್ ಮತ್ತು ಇಂಡಿಗೊ ವಿಮಾನಗಳಿ ಬಾಂಬ್ ಬೆದರಿಕೆ ಬಂದಿದ್ದವು. ನಂತರ ಅವು ಹುಸಿ ಬಾಂಬ್ ಬೆದರಿಕೆ ಎಂದು ದೃಢಪಟ್ಟಿತ್ತು.












Click it and Unblock the Notifications