Get Updates
Get notified of breaking news, exclusive insights, and must-see stories!

2026: ಸ್ವಿಗ್ಗಿ ಸೇರಿ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿರಿಯಾನಿ - ಕಾಂಡೋಮ್ ಸೇರಿ ಈ ವಸ್ತುಗಳಿಗೆ ಡಿಮ್ಯಾಂಡ್

ಹೊಸ ವರ್ಷದ ಹಿಂದಿನ ದಿನ 2025ರ ಡಿಸೆಂಬರ್ 31ರಂದು ಸ್ವಿಗ್ಗಿಯಲ್ಲಿ ಹಲವು ಭರ್ಜರಿ ಆರ್ಡರ್‌ಗಳನ್ನು ಮಾಡಲಾಗಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಹಲವರು ಪಾರ್ಟಿಗಳಿಗೆ ಸಂಬಂಧಿಸಿದ ಫೂಡ್‌ಗಳನ್ನು ಆರ್ಡರ್ ಮಾಡಿದ್ದಾರೆ. ಚಿನ್ನ, ಬಿರಿಯಾನಿ ಹಾಗೂ ಸಿಹಿ ತಿನಿಸುಗಳನ್ನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದಾರೆ. ಸಾಮಾನ್ಯವಾಗಿ ಹೊಸ ವರ್ಷದ ಸಂದರ್ಭದಲ್ಲಿ ಕಾಂಡೋಮ್ ಆರ್ಡರ್‌ಗಳು ಸಹ ಹೆಚ್ಚು ಸದ್ದು ಮಾಡುತ್ತಿದ್ದವೂ ಆದರೆ ಈ ವರ್ಷ ಇದರ ಟ್ರೆಂಡ್ ತುಸು ಬದಲಾಗಿದೆ.

ಹೊಸ ವರ್ಷದ ಹಿಂದಿನ ದಿನದಂದು ಮನೆಗಳಲ್ಲಿ ಸಂಭ್ರಮಾಚರಣೆ ಟ್ರೆಂಡ್ ಸೃಷ್ಟಿ ಮಾಡಿದೆ. ಇದರೊಂದಿಗೆ ಮನೆಗಳಲ್ಲಿ ಎಲ್ಲರೂ ಸೇರಿ ಊಟ ಮಾಡಿ ಸಂಭ್ರಮಿಸಿದ್ದಾರೆ. ಇನ್ನೂ ಕೆಲವರು ಹೊಸ ವರ್ಷದ ಸಂಭ್ರಮದಲ್ಲಿ ಚಿನ್ನ - ಬೆಳ್ಳಿಯಂತಹ ಅಮೂಲ್ಯ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಫೂಡ್‌ ಆರ್ಡರ್‌ಗೆ ಹೆಚ್ಚು ಡಿಮ್ಯಾಂಡ್ ಬಂದಿದೆ. ಸ್ವಿಗ್ಗಿ ಫೂಡ್ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿರುವಂತೆ ಬುಧವಾರ ಸಂಜೆಯಿಂದಲೇ ವಿವಿಧ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಸಂಜೆ 7.30ರಿಂದ ಟ್ರೆಂಡ್ ಪ್ರಾರಂಭವಾಗಿದ್ದು, ಮಧ್ಯರಾತ್ರಿಯ ವರೆಗೂ ಇದು ಮುಂದುವರಿದಿದೆ. ಈ ಬಾರಿಯೂ ಬಿರಿಯಾನಿ ಅಗ್ರಸ್ಥಾನದಲ್ಲಿ ಇದೆ.

2026 Celebrations Demand for Biryani - Condoms on these platforms including Swiggy

ಸ್ವಿಗ್ಗಿಯಲ್ಲಿ ಬುಧವಾರ ಸಂಜೆ 7:30 ರ ಹೊತ್ತಿಗೆ 2,18,993 ಪ್ಲೇಟ್‌ಗಳ ಬಿರಿಯಾನಿಗಳನ್ನು ಜನ ಆರ್ಡರ್ ಮಾಡಿದ್ದಾರೆ. ಇನ್ನು ರಾತ್ರಿ 9.30 ರ ವೇಳೆಗೆ 90,000 ಕ್ಕೂ ಹೆಚ್ಚು ಬರ್ಗರ್‌ಗಳನ್ನು ಆರ್ಡರ್ ಮಾಡಲಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ. 4,244 ಜನರು ಉಪ್ಪಿಟ್ಟು ಸಹ ಆರ್ಡರ್ ಮಾಡಿದ್ದರು. ಬೆಂಗಳೂರಿನಲ್ಲಿ 1,927 ಬಳಕೆದಾರರು ಸಲಾಡ್ ಅನ್ನು ಆರ್ಡರ್ ಮಾಡಿದ್ದರೆ, 9,410 ಜನರು ಖಿಚ್ಡಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸಂಸ್ಥೆ ಹೇಳಿದೆ. ಇದು ಹೊಸ ವರ್ಷವನ್ನು ಜನ ಹೇಗೆ ಬರಮಾಡಿಕೊಂಡರು, ಜನರ ಅಭಿರುಚಿಗಳು ಹೇಗೆ ಭಿನ್ನವಾಗಿದ್ದವು ಎನ್ನುವುದನ್ನು ತೋರಿಸಿದೆ.

ಸಿಹಿ ತಿಂಡಿಗಳ ಆರ್ಡರ್‌ನಲ್ಲೂ ದಾಖಲೆ

ಇನ್ನು ಸಿಹಿ ತಿಂಡಿಗಳ ಆರ್ಡರ್‌ನಲ್ಲೂ ಹೊಸ ದಾಖಲೆ ಸೃಷ್ಟಿಯಾಗಿದೆ. ರಾತ್ರಿ 9.30ರ ವೇಳೆಗೆ 7,573 ಕ್ಯಾರೆಟ್ ಹಲ್ವಾ ಆರ್ಡರ್ ಮಾಡಲಾಗಿದೆ. 2025ರಲ್ಲಿ 6,67,04,007 ಜನರು ಇತರರಿಗೆ ಆಹಾರವನ್ನು ಆರ್ಡರ್ ಮಾಡಿದ್ದಾರೆ ಎಂದು ಸ್ವಿಗ್ಗಿ ಹಂಚಿಕೊಂಡಿದೆ. ಇದು ಗಿಫ್ಟ್‌ ನೀಡುವ ಮತ್ತು ಊಟವನ್ನು ಹಂಚುವ ಟ್ರೆಂಡ್ ಹೆಚ್ಚಾಗುತ್ತಿದೆ ಎನ್ನುವುದನ್ನು ತೋರಿಸುತ್ತದೆ.

ಈ ಬಾರಿಯೂ ಕಾಂಡೋಮ್‌ಗೆ ಡಿಮ್ಯಾಂಡ್

ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಕಾಂಡೋಮ್‌ಗೆ ಡಿಮ್ಯಾಂಡ್ ಹೆಚ್ಚಳವಾಗಿದೆ. ಡಿಸೆಂಬರ್ 31, 2025ರ ರಾತ್ರಿ, ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್ ಭಾರತದಾದ್ಯಂತ 122,000 ಕ್ಕೂ ಹೆಚ್ಚು ಕಾಂಡೋಮ್ ಪ್ಯಾಕ್‌ಗಳನ್ನು ವಿತರಿಸಿದೆ ಎಂದು ವರದಿ ಮಾಡಿದೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕೂಡ ಗಮನಾರ್ಹ ಮಾರಾಟವನ್ನು ದಾಖಲಿಸಿದೆ, ಮಧ್ಯಾಹ್ನದ ವೇಳೆಗೆ 4,779 ಪ್ಯಾಕ್‌ಗಳನ್ನು ಸೇಲ್‌ ಮಾಡಿರುವುದಾಗಿ ತಿಳಿಸಿದೆ.

ಬ್ಲಿಂಕಿಟ್: ಹೊಸ ವರ್ಷದ ಹಿಂದಿನ ದಿನದಂದು ರಾತ್ರಿ 9,50ರ ಸುಮಾರಿಗೆ 122,356 ಕಾಂಡೋಮ್ ಪ್ಯಾಕ್‌ಗಳ ಆರ್ಡರ್ ಬಂದಿದ್ದವು.

ಸ್ವಿಗ್ಗಿ ಇನ್‌ಸ್ಟಾಮಾರ್ಟ್: ಡಿಸೆಂಬರ್ 31ರ ಬುಧವಾರ ಮಧ್ಯಾಹ್ನದಷ್ಟರಲ್ಲಿ 4,779 ಪ್ಯಾಕ್‌ಗಳ ಸೇಲ್ ಆಗಿವೆ. ಬ್ಲಿಂಕಿಟ್ ಆರ್ಡರ್ ಮಾಡಿದ ಅತ್ಯಂತ ಜನಪ್ರಿಯ ಕಾಂಡೋಮ್ ಫ್ಲೇವರ್‌ಗಳ ವಿವರವನ್ನು ಸಹ ಒದಗಿಸಿದೆ. ಆದರೆ ಒಟ್ಟಾರೆ ಕಾಂಡೋಮ್ ಆರ್ಡರ್‌ಗಳ ಸಂಖ್ಯೆಯ ಬಗ್ಗೆ ಇನ್ನಷ್ಟೇ ನಿಖರ ಮಾಹಿತಿ ಲಭ್ಯವಾಗಬೇಕಾಗಿದೆ.

ಚಾಕೊಲೇಟ್: ಮಾರಾಟದ 39%

ಸ್ಟ್ರಾಬೆರಿ: ಮಾರಾಟದ 31%

ಬಬಲ್ಗಮ್: ಮಾರಾಟದ 19%

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+