2025 Union Budget: ಬಿಹಾರಕ್ಕೆ ಬಂಪರ್ ಮಿತ್ರ ಪಕ್ಷ ರಾಜ್ಯ ಕಾರಣ ಅಲ್ಲ, ಮತ್ತಿನ್ನೇನು ?
2025 Union Budget: ಕೇಂದ್ರ ಬಿಜೆಪಿ ಬಜೆಟ್ 2025 ಮಂಡನೆ ಮಾಡಲಾಗಿದ್ದು. ಇದರಲ್ಲಿ ಬಿಹಾರಕ್ಕೆ ಬಂಪರ್ ಹಾಗೂ ಭರ್ಜರಿ ಕೊಡುಗೆಗಳನ್ನು ಕೊಡಲಾಗಿದೆ. ಇದು ಕೇಂದ್ರದ ಬಜೆಟೋ ಇಲ್ಲ ಬಿಹಾರದ ಬಜೆಟೋ ಎನ್ನುವ ವ್ಯತ್ಯಾಸ ತಿಳಿಯದಷ್ಟರ ಮಟ್ಟಿಗೆ ಈ ಬಜೆಟ್ ಮಂಡನೆ ಮಾಡಲಾಗಿದೆ. ಇದು ಕೇಂದ್ರ ಬಜೆಟ್ ಅಲ್ಲ ಬಿಹಾರದ ಬಜೆಟ್ ಎಂದು ವಿರೋಧ ಪಕ್ಷಗಳು ಹಾಗೂ ಕಾಂಗ್ರೆಸ್ ದೂರಿವೆ.
ರಾಜ್ಯ ಕಾಂಗ್ರೆಸ್ ಸಹ ಕೇಂದ್ರ ಬಿಜೆಪಿ ಬಜೆಟ್ 2025 ಇದು ಕೇಂದ್ರ ಬಜೆಟ್ ಅಲ್ಲ ಬಿಹಾರಿ ಬಜೆಟ್... ಬಿಹಾರಕ್ಕೆ ಬೆಣ್ಣೆ ಕನ್ನಡಿಗರಿಗೆ ಸೊನ್ನೆ ಎಂದು ಟೀಕೆ ಮಾಡಿದೆ. ಕೇಂದ್ರ ಸರ್ಕಾರವು ಬಿಹಾರಕ್ಕೆ ತನ್ನ ಮಿತ್ರ ಪಕ್ಷ ಅಂತ ಮಾತ್ರ ಈ ಬಾರಿ ಬಜೆಟ್‌ನಲ್ಲಿ ಬಂಪರ್ ಕೊಡುಗೆಗಳನ್ನು ಕೊಟ್ಟಿಲ್ಲ. ಬಿಹಾರಕ್ಕೆ ಬಜೆಟ್‌ನಲ್ಲಿ ದೊಡ್ಡ ಗಂಟು ಕೊಟ್ಟಿರುವ ಹಿಂದೆ ಬೇರೆಯದೇ ಲೆಕ್ಕಾಚಾರ ಇದೆ. ಅದೇನು ಎನ್ನುವ ವಿವರ ಇಲ್ಲಿದೆ.

ಬಿಹಾರಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಹಲವು ಕೊಡುಗೆಗಳನ್ನು ಕೊಡಲಾಗಿದೆ. ಬಿಹಾರದ ಜೆಡಿಯು ಪಕ್ಷ ಕೇಂದ್ರ ಬಿಜೆಪಿಯ ಮಿತ್ರ ಪಕ್ಷ (ಎನ್‌ಡಿಎ ಮೈತ್ರಿ)ದಲ್ಲಿ ಇದೆ. ಅಲ್ಲದೆ ಕೇಂದ್ರದಲ್ಲಿ ನಿರ್ಣಾಯಕ ಪಾತ್ರವನ್ನು ಜೆಡಿಯು ಪಕ್ಷ ಹೊಂದಿದೆ. ಬಿಹಾರದ ಜನತಾ ದಳ ಸಂಯುಕ್ತ (ಜೆಡಿಯು) ಪಕ್ಷ ಹಾಗೂ ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷ (ಟಿಡಿಪಿ) ರಾಜ್ಯಗಳಿಗೆ ಬಂಪರ್ ಕೊಡುಗೆ ಸಿಗುತ್ತಲ್ಲೇ ಇದೆ. ಈ ಬಾರಿಯೂ ಬಜೆಟ್‌ನಲ್ಲೂ ಅದೇ ರಿಪೀಟ್ ಆಗಿದೆ. ಆದರೆ ಈ ಬಾರಿ ಆಂಧ್ರಪ್ರದೇಶಕ್ಕಿಂತ ಬಿಹಾರಕ್ಕೆ ಹೆಚ್ಚು ಗಿಫ್ಟ್ ಸಿಕ್ಕಿದೆ. ನಿರೀಕ್ಷೆಯಂತೆಯೇ ಈ ರಾಜ್ಯಗಳಿಗೆ ಭರ್ಜರಿ ಗಿಫ್ಟ್‌ಗಳನ್ನೇ ಮೀಸಲಿರಿಸಲಾಗಿದೆ.
ಬಿಹಾರದಲ್ಲಿ ಚುನಾವಣೆ: ಈ ವರ್ಷ ಫೆಬ್ರವರಿ 5ಕ್ಕೆ ದೆಹಲಿ ವಿಧಾನಸಭೆ ಚುನಾವಣೆ ಮುಕ್ತಾಯವಾದರೆ ಇರುವ ಮತ್ತೊಂದು ಚುನಾವಣೆ ಎಂದರೆ ಅದು ಬಿಹಾರದ ಚುನಾವಣೆ. ಹೌದು ಈ ವರ್ಷಾಂತ್ಯದಲ್ಲಿ ಬಿಹಾರದ ವಿಧಾನಸಭೆ ಚುನಾವಣೆ ಇದೆ. ಇದೇ ಕಾರಣಕ್ಕೆ ಬಿಹಾರದಲ್ಲಿ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡೇ ಎನ್‌ಡಿಎ ಭರ್ಜರಿ ಬಜೆಟ್ ಮಂಡನೆ ಮಾಡಿದ್ದು. ಅದರಲ್ಲಿ ಬಿಹಾರಕ್ಕೆ ದೊಡ್ಡ ಪಾಲನ್ನು ಇರಿಸಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಮಿತ್ರ ಪಕ್ಷವಾಗಿರುವ ಜೆಡಿಯುಗೆ ಬಿಹಾರದಲ್ಲಿ ಈ ಬಾರಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಆಡಳಿತರೂಢ ನಿತೀಶ್ ಕುಮಾರ್ ಅವರು ಅಲ್ಲಿ ಮೈತ್ರಿ ಪಕ್ಷವನ್ನು ತೊರೆದು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದರು. ಬಿಹಾರದಲ್ಲಿ ಜೆಡಿಯುಗೆ ಸವಾಲಿನ ಪರಿಸ್ಥಿತಿ ಇದೆ. ಕೇಂದ್ರ ಬಜೆಟ್‌ನಲ್ಲಿ ಬಂಪರ್ ಸಿಕ್ಕಿರುವುದು ಡಬಲ್ ಇಂಜೆನ್ ಇದ್ದರೆ ಸಿಗುವ ಲಾಭಗಳು ಎಂದು ಬಿಹಾರದ ಮತದಾರರಿಗೆ ಮನವೊಲಿಸಲು ಸಹಕಾರಿಯಾಗಲಿದೆ ಎಂದೇ ಅಂದಾಜಿಸಲಾಗಿದೆ.
ಬಿಹಾರಕ್ಕೆ ಸಿಕ್ಕಿರುವ ಬಂಪರ್ ಕೊಡುಗೆಗಳು
* ಪಾಟ್ನಾ ಸೇರಿ 5 ಐಐಟಿಗಳ ಅಭಿವೃದ್ಧಿಗಳ ಅನುದಾನ ಕೊಡಲಾಗಿದೆ.
* ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಮಂಜೂರು ಮಾಡಲಾಗಿದೆ.
* ಬಿಹಾರದ 500 ಹೆಕ್ಟೇರ್ ಜಮೀನಿಗೆ ನೀರಾವರಿ ಯೋಜನೆಯನ್ನು ಅಭಿವೃದ್ಧಿ.
* ಮಕಾನ್ ಮಂಡಳಿ, ಆಹಾರ ಸಂಸ್ಕರಣೆಗೆ ಆದ್ಯತೆ ಸೇರಿದಂತೆ ಹಲವು ಬಂಪರ್ ಕೊಡುಗೆಗಳನ್ನು ಕೊಡಲಾಗಿದೆ.
ದೆಹಲಿ ವಿಧಾನಸಭೆ ಚುನಾವಣೆ: ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿವೆ. ದೆಹಲಿ ಮತದಾರರನ್ನು ಸೆಳೆಯುವುದಕ್ಕೆ ಕೇಂದ್ರ ಬಿಜೆಪಿ ಸರ್ಕಾರವು ಪರೋಕ್ಷ ಪ್ರಯತ್ನವನ್ನು ನಡೆಸುತ್ತಿದೆ. ದೆಹಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 5ಕ್ಕೆ ನಡೆಯಲಿದ್ದು, 8ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಇನ್ನು ಈ ಬಾರಿಯ ಬಜೆಟ್‌ನಲ್ಲಿ ಬಿಜೆಪಿ ಮಿತ್ರ ಪಕ್ಷಗಳು ಹಾಗೂ ಬಿಜೆಪಿ ಪಕ್ಷಗಳ ರಾಜ್ಯಗಳಿಗೆ ಕೊಟ್ಟಿರುವ ಕೊಡುಗೆ ದೆಹಲಿ ಮತದಾರರ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆಯೇ ಎನ್ನುವುದು ಫೆಬ್ರವರಿ 8ಕ್ಕೆ ತಿಳಿಯಲಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ದೆಹಲಿಯ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ.












Click it and Unblock the Notifications