ಲೋಕಸಭೆಗೆ ಮುನ್ನ ಸೆಮಿ ಫೈನಲ್, 8 ರಾಜ್ಯಗಳ ಚುನಾವಣೆ

ನವದೆಹಲಿ, ಡಿಸೆಂಬರ್ 18 : ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಅಧಿಕಾರಕ್ಕೇರಲು ಸಿದ್ದವಾಗಿದೆ. ಈ ಚುನಾವಣೆ ಕೇವಲ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ 2019ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಬಿಂಬಿಸಲಾಗುತ್ತಿದೆ.

2017ರಲ್ಲಿ ಉತ್ತರ ಪ್ರದೇಶ, ಪಂಜಾಬ್, ಗೋವಾ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯದ ವಿಧಾನಸಭೆ ಚುನಾವಣೆಗಳು ನಡೆದವು. ಬಿಜೆಪಿ ಪಂಜಾಬ್ ಹೊರತುಪಡಿಸಿ ಉಳಿದ ಚುನಾವಣೆಗಳಲ್ಲಿ ಜಯಗಳಿಸಿತು.

2018ರಲ್ಲಿ ವಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಕರ್ನಾಟಕ ಸೇರಿ 8 ವಿಧಾನಸಭೆ ಚುನಾವಣೆಗಳಿವೆ. ಈ ಚುನಾವಣೆಗಳು 2019ರ ಲೋಕಸಭೆ ಚುನಾವಣೆಗೆ ಮೊದಲು ಎದುರಾಗುವ ಸೆಮಿ ಫೈನಲ್‌ಗಳಾಗಿವೆ.

ಕಾಂಗ್ರೆಸ್ ಮುಕ್ತ ಭಾರತ ಎಂಬ ಘೋಷವಾಕ್ಯದಡಿ ಚುನಾವಣೆ ಎದುರಿಸುತ್ತಿರುವ ಬಿಜೆಪಿಗೆ 2018ರ ಚುನಾವಣೆಗಳು ಹೇಗೆ ಸಹಕಾರಿಯಾಗಲಿವೆ? ಎಂಬುದು ಕುತೂಹಲಕ್ಕೆ ಕಾರಣವಾಗಿವೆ.

2018ರ ಚುನಾವಣೆಗಳು ಅಂದುಕೊಂಡಷ್ಟು ಸುಲಭವಾಗಿಲ್ಲ ಎಂಬುದು ಬಿಜೆಪಿ ಹೈಕಮಾಂಡ್‌ಗೂ ಗೊತ್ತು. ಅದರಲ್ಲೂ ದಕ್ಷಿಣ ಭಾರತದ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇದ್ದು, ಗೆಲ್ಲಲು ಸಾಕಷ್ಟು ಕಸರತ್ತು ಮಾಡಬೇಕಿದೆ...

'ಗುಜರಾತ್ ಮಾದರಿ'ಯ ಪ್ರಯೋಗ

'ಗುಜರಾತ್ ಮಾದರಿ'ಯ ಪ್ರಯೋಗ

2017ರ ವಿಧಾನಸಭೆ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ 'ಗುಜರಾತ್ ಮಾದರಿ' ಈಗ ತವರು ರಾಜ್ಯದಲ್ಲಿಯೂ ಗೆಲುವು ತಂದುಕೊಟ್ಟಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಈ ಅಂಶ 2018ರಲ್ಲಿಯೂ ಜಯ ತಂದು ಕೊಡುವುದೇ?

ರೈತರ ಸಮಸ್ಯೆ, ಗ್ರಾಮೀಣ ಭಾಗ

ರೈತರ ಸಮಸ್ಯೆ, ಗ್ರಾಮೀಣ ಭಾಗ

ಗುಜರಾತ್ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಬಲ ಹೆಚ್ಚಾಗಿದೆ. ಬಟ್ಟೆ ವ್ಯಾಪಾರಿಗಳು, ರೈತರು ಕಾಂಗ್ರೆಸ್ ಜೊತೆ ನಿಂತಿದ್ದಾರೆ. 2018ರಲ್ಲಿ ನಡೆಯುವ ಚುನಾವಣೆಗಳಲ್ಲಿಯೂ ರೈತಾಪಿ ವರ್ಗ ಬಿಜೆಪಿ ಬೆಂಬಲಕ್ಕೆ ನಿಲ್ಲುತ್ತದೆಯೇ?.

2018ರಲ್ಲಿ ಬಿಜೆಪಿ-ಕಾಂಗ್ರೆಸ್ ಮುಖಾಮುಖಿ

2018ರಲ್ಲಿ ಬಿಜೆಪಿ-ಕಾಂಗ್ರೆಸ್ ಮುಖಾಮುಖಿ

2018ರಲ್ಲಿ ನಾಗಾಲ್ಯಾಂಡ್, ತ್ರಿಪುರ, ಮೇಘಾಲಯ, ವಿಜೋರಾಂ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಕರ್ನಾಟಕದ ವಿಧಾನಸಭೆ ಚುನಾವಣೆಗಳಿವೆ. ಲೋಕಸಭೆ ಚುನಾವಣೆಗಿಂತ ಮೊದಲು ಎದುರಾಗುವ ಸೆಮಿ ಫೈನಲ್ ಇದಾಗಿವೆ. ಕಾಂಗ್ರೆಸ್-ಬಿಜೆಪಿ ಮುಖಾಮುಖಿಯಾಗಿ ಗೆದ್ದರೆ ಸಂಸತ್ತಿನ ಹಾದಿ ಸುಗಮವಾಗಲಿದೆ.

ಯಾವುದೂ ತವರು ನೆಲವಲ್ಲ

ಯಾವುದೂ ತವರು ನೆಲವಲ್ಲ

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಕರ್ನಾಟಕದಲ್ಲಂತೂ ಕಾಂಗ್ರೆಸ್ ಅಧಿಕಾರಲ್ಲಿದೆ. ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಈ ರಾಜ್ಯಗಳು ತವರು ನೆಲವಲ್ಲ. 2018ರ ಚುನಾವಣೆಯಲ್ಲಿ ಬಿಜೆಪಿಗೆ ಈ ರಾಜ್ಯಗಳಲ್ಲಿ ಪೈಪೋಟಿಯೂ ಹೆಚ್ಚಬಹುದು.

ಅಭಿವೃದ್ಧಿ ರಾಜಕಾರಣದ ಜಪ

ಅಭಿವೃದ್ಧಿ ರಾಜಕಾರಣದ ಜಪ

ನರೇಂದ್ರ ಮೋದಿ ಅವರ ಅಭಿವೃದ್ಧಿ ರಾಜಕಾರಣಕ್ಕೆ ಜನರು ಬೆಂಬಲ ನೀಡುತ್ತಾರೆ ಎಂದು ಬಿಜೆಪಿ ನಾಯಕರು ಈಗಾಗಲೇ ಹೇಳುತ್ತಿದ್ದಾರೆ. ಆದರೆ, 2018ರ ಚುನಾವಣೆ ಸಮಯದಲ್ಲಿ ಹೊಸ ವಿಚಾರದತ್ತ ರಾಜಕಾರಣ ಹೊರಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+