ಇಂಡಿಯನ್ ಆಯಿಲ್ 4000 ಕೋಟಿ ಬಂಡವಾಳ ಹೋಯ್ತು!

10 per cent shares of Indian Oil disinvestment in November end
ನವದೆಹಲಿ, ನ.11: ಬಂಡವಾಳ ಹಿಂತೆಗೆತ ಯೋಜನೆಯನ್ನು ಕೇಂದ್ರ ಸರಕಾರ ಮುಂದುವರಿಸಿದೆ. ನಷ್ಟದತ್ತ ಮುಖ ಮಾಡಿರುವ ಭಾರತೀಯ ತೈಲ ನಿಗಮದ (IOC) ಶೇ. 10ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ ಡಿಸೆಂಬರ್ ವೇಳೆಗೆ ಸರಕಾರವು 4000 ಕೋಟಿ ರೂ ಬಂಡವಾಳ ಸಂಗ್ರಹಿಸಲು ಮುಂದಾಗಿದೆ.

ಸರಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಂಡವಾಳ ಹಿಂತೆಗೆತ ಯೋಜನೆಯ ಮೂಲಕ ಒಟ್ಟು 40,000 ಕೋಟಿ ರೂ ಹಿಂತೆಗೆದು, ಖಜಾನೆಗೆ ಬಂಡವಾಳ ತುಂಬುವುದು ಈ ಯೋಜನೆಯ ಗುರಿಯಾಗಿದೆ. ಬಂಡವಾಳ ಹಿಂತೆಗೆತದ ಮೂಲಕ ಕೇಂದ್ರ ಸರಕಾರವು ಪ್ರಸಕ್ತ ವರ್ಷ 6 ಕಂಪನಿಗಳ ಪಾಲು ಮಾರಾಟ ಮಾಡಿ ಇದುವರೆಗೆ 1,325 ಕೋಟಿ ರೂ. ಹಣ ಸಂಗ್ರಹಿಸಿದೆ. ಮುಂದಿನ ಹಂತದಲ್ಲಿ Engineers India Ltd (EIL) ಸಂಸ್ಥೆಯ ಷೇರು ಸಹ ಮಾರಾಟವಾಗಲಿದೆ.

ಆದರೆ ಕಂಪನಿ ಮತ್ತು ಬಂಡವಾಳ ಹಿಂತೆಗೆತ ಇಲಾಖೆಯಿಂದ ಇದಕ್ಕೆ ಪ್ರತಿರೋಧ ವ್ಯಕ್ತವಾಗಿತ್ತು. ಬಂಡವಾಳ ಹಿಂತೆಗೆತದಿಂದ ಮುಂಬೈ ಷೇರು ಮಾರುಕಟ್ಟೆಯಲ್ಲಿ IOC ಷೇರು ಮೌಲ್ಯ ಗಣನೀಯವಾಗಿ ಏರಿದೆ. ಆದರೂ ನಿರೀಕ್ಷಿತ ಬಂಡವಾಳ ಬರುವುದು ದುಸ್ತರವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಕಳೆದ ಜನವರಿಯಲ್ಲಿ IOC ಷೇರು ಮೌಲ್ಯ ಗರಿಷ್ಠ 375 ರೂ. ಗೆ ತಲುಪಿತ್ತು.

ಕೇಂದ್ರ ಸರಕಾರ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ ಸಂಸ್ಥೆಯಲ್ಲಿ ಒಟ್ಟು ಶೇ. 78.92ರಷ್ಟು ಪಾಲು ಹೊಂದಿದೆ. ಇದರಲ್ಲಿ 19.16 ಕೋಟಿ ಷೇರುಗಳನ್ನು ಮಾರಾಟ ಮಾಡಿ, 4 ಸಾವಿರ ಕೋಟಿ ರೂ. ಕ್ರೋಡೀಕರಿಸಲು ಸರಕಾರ ಗುರಿ ಹಾಕಿಕೊಂಡಿದೆ. ಇದರ ಜತೆಗೆ ಇತರೆ ಸಾರ್ವಜನಿಕ ತೈಲ ಕಂಪನಿಗಳ ಪಾಲು ಮಾರಾಟ ಪ್ರಕ್ರಿಯೆಗೂ ಚಾಲನೆ ನೀಡಲಾಗುವುದು ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+