ಗುಜರಿ ವಸ್ತುಗಳಿಂದಲೇ ಕೇಂದ್ರ ಸರ್ಕಾಕ್ಕೆ ಬಂತು ₹1,163 ಕೋಟಿ - ಆದಾಯದ ಪ್ರಮುಖ ಮೂಲಗಳಿವು

ನವದೆಹಲಿ, ಡಿಸೆಂಬರ್, 29: ಕೇಂದ್ರ ಸರ್ಕಾರಕ್ಕೆ ಹಲವಾರು ಮೂಲಗಳಿಂದ ಆದಾಯ ಬರುತ್ತಿರುತ್ತದೆ. ಆದರೆ ಇದೀಗ ಕೇಂದ್ರ ಸರ್ಕಾರ ಕೇವಲ ಗುಜರಿ ಮಾರಾಟದಿಂದಲೇ ಸುಮಾರು 1,200 ಕೋಟಿ ರೂಪಾಯಿವರೆಗೂ ಆದಾಯ ತೆಕ್ಕೆಗೆ ಹಾಕಿಕೊಂಡಿದೆ. ಗುಜರಿ ವಸ್ತುಗಳ ಮಾರಾಟದಿಂದ ಗಳಿಸಿದ ಆದಾಯವು ಭಾರತವು ಚಂದ್ರಯಾನ-3 ಪ್ರಾಜೆಕ್ಟ್‌ ಅನ್ನು ಚಂದ್ರನತ್ತ ಎರಡು ಬಾರಿ ಕಳುಹಿಸುವ ಮೊತ್ತ ಆಗಿದೆ ಎಂದು ತಿಳಿದುಬಂದಿದೆ. ಹಾಗಾದರೆ 2021ರಿಂದ ಬಂದ ಆದಾಯ ಎಷ್ಟು ಎಂದು ಇಲ್ಲಿ ತಿಳಿಯಿರಿ.

ಭಾರತದ ಯಶಸ್ವಿ ಚಂದ್ರಯಾನ-3 ಮಿಷನ್‌ನ ವೆಚ್ಚ ಸರಿಸುಮಾರು 600 ಕೋಟಿ ರೂಪಾಯಿ ಅಷ್ಟೇ ಆಗಿದೆ. ಆದರೆ ಕೇಂದ್ರ ಸರ್ಕಾರ ಹಳೆಯ ಉಪಕರಣಗಳು, ಬಳಕೆಗೆ ಬಾರದ ವಾಹನಗಳು ಸೇರಿ ಇನ್ನಿತರ ಗುಜರಿ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಚಂದ್ರಯಾನ-3ಗೆ ವೆಚ್ಚವಾದ ಹಣದ ಎರಡು ಪಟ್ಟು ಆದಾಯವನ್ನು ತೆಕ್ಕೆಗೆ ಹಾಕಿಕೊಂಡಿದೆ.

₹1,163 crore revenue to central government from Scrap items, know details

ಕೇಂದ್ರ ಸರ್ಕಾರದ ಇತ್ತೀಚಿನ ವರದಿಯ ಪ್ರಕಾರ, ಅಕ್ಟೋಬರ್ 2021ರಿಂದ ಇದುವರೆಗೂ ಸುಮಾರು ₹1,163 ಕೋಟಿ ರೂಪಾಯಿ ಹಣವನ್ನು ಗುಜರಿ ಮಾರಾಟದಿಂದಲೇ ಕೇಂದ್ರ ಸರ್ಕಾರ ಗಳಿಸಿದೆ ಎಂದು ಹೇಳುತ್ತದೆ. ಇದರಲ್ಲಿ ಈ ವರ್ಷದ ಅಕ್ಟೋಬರ್‌ನಲ್ಲಿ ಒಂದು ತಿಂಗಳ ಅವಧಿಯ ಪ್ರಚಾರದ ಸಮಯದಲ್ಲಿ ಗಳಿಸಿದ 557 ಕೋಟಿ ರೂಪಾಯಿ ಸಹ ಸೇರಿದೆ.

ಅಕ್ಟೋಬರ್ 2021 ರಿಂದ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ 96 ಲಕ್ಷ ಭೌತಿಕ ಕಡತಗಳನ್ನು ಖಾಲಿ ಮಾಡಲಾಗಿದ್ದು, ಇದರಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಸುಮಾರು 355 ಲಕ್ಷ ಚದರ ಅಡಿ ಜಾಗವನ್ನು ಸಹ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದೆ. ಇದು ಸರ್ಕಾರಿ ಕಚೇರಿಗಳಲ್ಲಿನ ಕಾರಿಡಾರ್‌ಗಳನ್ನು ಸ್ವಚ್ಛಗೊಳಿಸಲು, ಮುಕ್ತ ಸ್ಥಳವನ್ನು ಮನರಂಜನಾ ಕೇಂದ್ರಗಳಾಗಿ ಮತ್ತು ಇತರ ಉಪಯುಕ್ತ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಸದುಪಯೋಗವಾಗಿದೆ.

ಆದಾಯದ ಮೂಗಳು: ಈ ವರ್ಷ ಸರ್ಕಾರವು ಗುಜರಿ ವಸ್ತುಗಳ ಮಾರಾಟದಿಂದ ಗಳಿಸಿದ 556 ಕೋಟಿ ರೂಪಾಯಿಗಳಲ್ಲಿ ಸುಮಾರು 225 ಕೋಟಿ ರೂಪಾಯಿಗಳನ್ನು ರೈಲ್ವೇ ಸಚಿವಾಲಯದಿಂದಲೇ ಗಳಿಸಿದೆ. ಇತರ ಪ್ರಮುಖ ಆದಾಯಗಳೆಂದರೆ ರಕ್ಷಣಾ ಸಚಿವಾಲಯದಿಂದ 168 ಕೋಟಿ ರೂಪಾಯಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಿಂದ 56 ಕೋಟಿ ರೂಪಾಯಿ ಮತ್ತು ಕಲ್ಲಿದ್ದಲು ಸಚಿವಾಲಯದಿಂದ 34 ಕೋಟಿ ರೂಪಾಯಿ ಹಣವನ್ನು ಗಳಿಕೆ ಮಾಡಿದೆ ಎಂದು ತಿಳಿದುಬಂದಿದೆ.

ಈ ವರ್ಷ ಮುಕ್ತಗೊಳಿಸಲಾದ ಒಟ್ಟು 164 ಲಕ್ಷ ಚದರ ಅಡಿ ಜಾಗದಲ್ಲಿ ಕಲ್ಲಿದ್ದಲು ಸಚಿವಾಲಯದಲ್ಲಿ ಗರಿಷ್ಠ 66 ಲಕ್ಷ ಚದರ ಅಡಿ ಜಾಗವನ್ನು ಮತ್ತು ಭಾರೀ ಕೈಗಾರಿಕೆ ಸಚಿವಾಲಯ 21 ಲಕ್ಷ ಚದರ ಅಡಿಗಳಲ್ಲಿ ಮುಕ್ತಗೊಳಿಸಲಾಗಿದೆ. ನಂತರ ರಕ್ಷಣಾ ಸಚಿವಾಲಯ 19 ಲಕ್ಷ ಚದರ ಅಡಿ ಜಾಗವನ್ನು ಮುಕ್ತವಾಗಿಸಿದೆ ಎಂದು ತಿಳಿಸಿದೆ ಅಂತಾ ನ್ಯೂಸ್‌ 18 ಕನ್ನಡ ವರದಿ ಮಾಡಿದೆ.

ಈ ಬಾರಿ ಸುಮಾರು 24 ಲಕ್ಷ ಕಡತಗಳನ್ನು ಹೊರ ಹಾಕಲಾಗಿದ್ದು, ಅದರಲ್ಲಿ ಗರಿಷ್ಠ ಪ್ರಮಾಣದ ಕಡತಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ (3.9 ಲಕ್ಷ ಕಡತಗಳು) ನಂತರ ಸೇನಾ ವ್ಯವಹಾರಗಳ ಇಲಾಖೆಯಿಂದ (3.15 ಲಕ್ಷ ಕಡತಗಳು) ತೆಗೆದು ಹಾಕಲಾಗಿದೆ. ಸ್ವಚ್ಛತಾ ಅಭಿಯಾನದ ಪ್ರಭಾವದಿಂದಾಗಿ ಒಟ್ಟಾರೆ ಇ-ಫೈಲ್ ಅಳವಡಿಕೆಯು ಸರ್ಕಾರದಲ್ಲಿ ಸುಮಾರು 96 ಪ್ರತಿಶತದಷ್ಟು ಬೆಳೆದಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+