ಕ್ವಾರೆಂಟೈನ್ ವೇಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
ಹೈದರಾಬಾದ್, ಏಪ್ರಿಲ್ 12: ಕ್ವಾರೆಂಟೈನ್‌ನಲ್ಲಿದ್ದ ಗರ್ಭಿಣಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಪ್ರಕಾಶಂ ಜಿಲ್ಲೆಯಿಂದ ಒಡಿಶಾಗೆ ಹೋಗುವ ತಯಾರಿಯಲ್ಲಿದ್ದ ಮಹಿಳೆಗೆ ಲಾಕ್‌ಡೌನ್ ತಡೆಯಾಯಿತು. ಬಳಿಕ, ಆಕೆಯಲ್ಲಿ ಕೊರೊನಾ ಸೋಂಕಿನ ರೋಗಲಕ್ಷಣಗಳು ಕಂಡು ಬಂದ ಹಿನ್ನೆಲೆ ಜಿಲ್ಲಾಡಳಿತ ಸಿದ್ಧ ಮಾಡಿದ್ದ ಕ್ವಾರೆಂಟೈನ್ ಕೊಠಡಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.
ಅದಾಗಲೇ ತುಂಬು ಗರ್ಭಿಣಿಯಾಗಿದ್ದ ಆ ಮಹಿಳೆ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಸುಮಾರು 12 ದಿನಗಳ ಕಾಲ ಕ್ವಾರೆಂಟೈನ್‌ನಲ್ಲಿದ್ದ ಮಹಿಳೆಗೆ ನೋವು ಕಾಣಿಸಿಕೊಂಡ ಹಿನ್ನೆಲೆ, ಆಕೆಯನ್ನು ಪಾಲಕೊಂಡ ಆಸ್ಪತ್ರೆಗೆ ಸೇರಿಸಲಾಯಿತು.
ಈ ವಿಷಯ ತಿಳಿದ ಜಿಲ್ಲಾಧಿಕಾರಿ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ, ಆಕೆಯ ಮತ್ತು ಮಗುವಿನ ಆರೋಗ್ಯ ವಿಚಾರಿಸಿದ್ದಾರೆ. ಪುಟ್ಟ ಮಗುವಿನ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಿ ಎಂದು ವೈದ್ಯರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು, ಮಗುವಿನ ಸಂರಕ್ಷಣೆಗಾಗಿ 25 ಸಾವಿರ ಘೋಷಿಸಿದ್ದಾರೆ.

ನಂತರ ಮಹಿಳೆ ಆರೋಗ್ಯ ವಿಚಾರಿಸಿ ಜಿಲ್ಲಾಧಿಕಾರಿ, ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಇಲ್ಲಿಯೇ ಉಳಿದು, ಆಮೇಲೆ ಒಡಿಶಾಗೆ ಹೋಗಲು ಮಹಿಳೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನು ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇದುವರೆಗೂ 405 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 6 ಜನರು ಸಾವನ್ನಪ್ಪಿದ್ದಾರೆ. ನೆರೆರಾಷ್ಟ್ರ ತೆಲಂಗಾಣ, ಕರ್ನಾಟಕದಲ್ಲೂ ಸೋಂಕಿತರು ಅಧಿಕವಾಗುತ್ತಿದ್ದು, ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.












Click it and Unblock the Notifications