ಮೆಡಿಕಲ್ ಸೀಟು ಸಿಕ್ಕಿಲ್ಲವೆಂದು ಸಜೀವವಾಗಿ ಪತ್ನಿಯನ್ನು ಕೊಂದ ಪತಿ!
ಹೈದರಾಬಾದ್, ಸೆಪ್ಟೆಂಬರ್ 19: ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಸೀಟು ಗಳಿಸಲು ಸಮರ್ಥಳಾಗಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ಜೀವಂತವಾಗಿ ಸುಟ್ಟ ಘಟನೆ ಹೈದರಾಬಾದಿಲ್ಲಿ ನಡೆದಿದೆ.
ಸಜಿವವಾಗಿ ದಹನವಾದ ದುರ್ದೈವಿಯನ್ನು ಹರಿಕಾ ಎಂದು ಗುರುತಿಸಲಾಗಿದ್ದು, ಈ ಕುರಿತು ಆಕೆಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಮೆಡಿಕಲ್ ಸೀಟು ಪಡೆಯಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ತಮ್ಮ ಮಗಳನ್ನು ಜೀವಂತವಾಗಿ ಸುಡಲಾಗಿದೆ, ಇದಕ್ಕೂ ಮುನ್ನ ಆಕೆಗೆ ವರದಕ್ಷಿಣೆಯ ಕಿರುಕುಳವನ್ನೂ ನೀಡಲಾಗಿದೆ ಎಂದು ಹರಿಕಾ ಪಾಲಕರು ದೂರಿದ್ದಾರೆ.
ಹೈದರಾಬಾದಿನ ಎಲ್ ಬಿ ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications