ಸಾಮೂಹಿಕ ಅತ್ಯಾಚಾರ: ರಸ್ತೆಯಲ್ಲಿ ವಿವಸ್ತ್ರವಾಗಿ ಓಡಿದ ಮಹಿಳೆ
ಹೈದರಾಬಾದ್, ಫೆಬ್ರವರಿ 18: ವಿವಾಹಿತೆಯ ಮೇಲೆ ಯುವಕರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ಶನಿವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಗುಂಟೂರು ಜಿಲ್ಲೆಯ ತಡಪಲ್ಲಿಯ ಸಂತ್ರಸ್ತೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ವಿಜಯವಾಡದಿಂದ ಸ್ಕೂಟರಿನಲ್ಲಿ ಬರುವಾಗ ಯುವಕನೊಬ್ಬನಿಗೆ ಸಂತ್ರಸ್ತೆ ಡ್ರಾಪ್ ನೀಡಿದ್ದರು.
ತಾನು ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವುದಾಗಿ ಆಕೆ ತಿಳಿಸಿದ್ದಳು. ಮರುದಿನವೂ ಆತ ಸಿಕ್ಕಿದ್ದ, ಯಾವುದೋ ಸರ್ಟಿಫಿಕೇಟ್ ತರಲು ಹೋಗಬೇಕು ಎಂದು ಹೇಳಿ ಬೈಕ್ ಹತ್ತಿಕೊಂಡಿದ್ದ, ಬಳಿಕ ತನ್ನ ಸ್ನೇಹಿತರು ಇಲ್ಲೇ ಇದ್ದಾರೆ ಅವರನ್ನು ಭೇಟಿ ಮಾಡಬೇಕು ಅವರಿದ್ದಲ್ಲಿಗೆ ಬಿಡಿ ಎಂದು ಕೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಯುವಕರೆಲ್ಲ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಗ್ರಾಮೀಣ ಮಂಗಳಗಿರಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications