ವೈರಲ್ ವಿಡಿಯೋ; ಪ್ರಾಣಪಣಕ್ಕಿಟ್ಟು ನಾಯಿ ಕಾಪಾಡಿದ ಹೋಂ ಗಾರ್ಡ್
ಹೈದರಾಬಾದ್, ಸೆಪ್ಟೆಂಬರ್ 17: ನಾಯಿ ಎಂದರೆ ಇಷ್ಟಪಡುವ ಜನರು ಅನೇಕರಿದ್ದಾರೆ. ನಾಯಿಗಳಿಗೆ ಆಹಾರ ಹಾಕುವುದು ಸೇರಿದಂತೆ ಅವರುಗಳ ಆರೈಕೆ ಮಾಡುವ ಶ್ವಾನ ಪ್ರಿಯರು ಇದ್ದಾರೆ. ಆದರೆ, ಇಲ್ಲೊಬ್ಬರು ಜೀವದ ಹಂಗು ತೊರೆದು ನಾಯಿಯ ಜೀವ ಉಳಿಸಿದ್ದಾರೆ.
ತೆಲಂಗಾಣದ ಹೋಂ ಗಾರ್ಡ್ ಮುಜೀದ್ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಾಯಿಯನ್ನು ರಕ್ಷಣೆ ಮಾಡಿದ್ದಾರೆ. ಬುಧವಾರ ಮುಜೀದ್ ನಾಯಿಯನ್ನು ಕಾಪಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೋಂ ಗಾರ್ಡ್ ಮುಜೀದ್ ತೆಲಂಗಾಣದ ನಾಗರ್ ಕುರ್ನೂಲ್ ಎಂಬಲ್ಲಿ ನಾಯಿಯ ಜೀವ ಉಳಿಸಿದ್ದಾರೆ. ಕಾಲುವೆಯಲ್ಲಿ ರಭಸದಿಂದ ನೀರು ಹರಿಯುತ್ತಿತ್ತು. ಪೊದೆಯಲ್ಲಿ ನಾಯಿ ಜೀವ ಉಳಿಸಿಕೊಳ್ಳಲು ಪರದಾಟ ನಡೆಸಿತ್ತು.

ಜೆಸಿಬಿ ಸಹಾಯದಿಂದ ಸ್ಥಳಕ್ಕೆ ಧಾವಿಸಿದ್ದ ಮುಜೀದ್ ನೀರಿನ ರಭಸವನ್ನು ಲೆಕ್ಕಿಸದೆ ನಾಯಿಯನ್ನು ಕಾಪಾಡಿದ್ದಾರೆ. ಜೆಸಿಬಿಯ ಬಕೆಟ್ ಮೇಲೆ ನಾಯಿಯನ್ನು ಕೂರಿಸಿಕೊಂಡು ಅದನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ.
ಮುಜೀದ್ ರಕ್ಷಣಾ ಕಾರ್ಯಾಚರಣೆ ವಿಡಿಯೋವನ್ನು ಹಲವಾರು ಜನರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ಇಲ್ಲಿದೆ
#WATCH Telangana Home Guard jawan, Mujeed rescues a dog stuck in thick bushes at the bank of an overflowing stream in Nagarkurnool (16.09.20) pic.twitter.com/Se6V7VE1AC
— ANI (@ANI) September 17, 2020












Click it and Unblock the Notifications