ಜೂಜು ಅಡ್ಡೆಯಲ್ಲಿ ಸಿಕ್ಕಿ ಬಿದ್ದ ನಟಿ 'ಕರಾಟೆ' ಕಲ್ಯಾಣಿ

ಹೈದರಾಬಾದ್, ಏ.28: ತೆಲುಗು ಚಿತ್ರರಂಗದಿಂದ ಮತ್ತೊಬ್ಬ ನಟಿ ಬಂಧನದ ಸುದ್ದಿ ಬಂದಿದೆ, ರಕ್ತಚಂದನ ಸ್ಮಗಲಿಂಗ್ ಕೇಸಿನಲ್ಲಿ ನೀತು ಅಗರವಾಲ್ ಅಂದರ್ ಆದ್ಮೇಲೆ, ಕರಾಟೆ ಕಲ್ಯಾಣಿ ಎಂದೇ ಜನಪ್ರಿಯವಾಗಿರುವ ತೆಲುಗು ನಟಿ ಕಲ್ಯಾಣಿ ಗ್ಯಾಂಬಲಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿದ್ದಾರೆ.

ಸೋಮವಾರ ರಾತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೂಜು ಅಡ್ಡೆ ಮೇಲೆ ವಿಶೇಷ ಪೊಲೀಸ್ ಘಟಕ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಅಲ್ಲೇ ಇಸ್ಪೀಟು ಹಿಡಿದುಕೊಂಡು ಕುಳಿತ ನಟಿ ಕಲ್ಯಾಣಿ ಪತ್ತೆಯಾಗಿದ್ದಾರೆ.

Telugu actress 'Karate' Kalyani arrest for playing cards, gambling

ಮಾಸ್ ಮಹಾರಾಜ ಎನಿಸಿರುವ ರವಿತೇಜ ನಟನೆಯ ಮಿರುಪಕಾಯ್ ಚಿತ್ರದಲ್ಲಿ 'ಅಬ್ಬಾ' ಎಂದು ಬಾಯಿ ತೆಗೆದು ಉದ್ಗಾರ ಮಾಡುತ್ತಿದ್ದ ನಟಿ ಕಲ್ಯಾಣಿ ಸಿಕ್ಕಿಬಿದ್ದಿದ್ದು ಕಂಡು ಜನತೆ ಕೂಡಾ ಅದೇ ರೀತಿ ಉದ್ಗಾರ ಎತ್ತಿದ್ದಾರೆ.

ಈ ಜೂಜು ಅಡ್ಡಾದಲ್ಲಿ ಸುಮಾರು 10 ಜನ ಜೂಜುಕೋರರು ಇರುವ ಖಚಿತ ಮಾಹಿತಿ ಸಿಕ್ಕಿತ್ತು. ಜೊತೆಗೆ ಇದೇ ಅಡ್ಡಾದಲ್ಲಿ ನಟಿ ಕಲ್ಯಾಣಿ ಯಾವಾಗಲೂ ಬರುತ್ತಾರೆ ಎಂಬ ಸುದ್ದಿ ಇತ್ತು. ಹೀಗಾಗಿ ಸರಿಯಾದ ಯೋಜನೆ ರೂಪಿಸಿ ರೆಡ್ ಹ್ಯಾಂಡ್ ಆಗಿ ಎಲ್ಲರನ್ನು ಹಿಡಿಯಲಾಗಿದೆ ಎಂದು ವಿಶೇಷ ಟಾಸ್ಕ್ ಘಟಕದ ಪೊಲೀಸರು ಹೇಳಿದ್ದಾರೆ.

Telugu actress 'Karate' Kalyani arrest for playing cards, gambling

ಬಂಧಿತರಿಂದ 80 ಸಾವಿರ ರು 8 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ಜೂಜಾಡಲು ಬಂದಿದ್ದೇಕೆ ಎಂಬುದರ ಬಗ್ಗೆ ನಟಿ ಕಲ್ಯಾಣಿ ಇಲ್ಲಿ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಲ್ಯಾಣಿ ಬಂಧನಕ್ಕಿಂತ ಈ ಪ್ರದೇಶದಲ್ಲಿ ಇಂಥದ್ದೊಂದು ಜೂಜುಕೋರರ ತಾಣವಿತ್ತು ಎಂಬ ವಿಷಯ ಅರಗಿಸಿಕೊಳ್ಳಲು ಆಗದೆ ಗೃಹಸ್ಥರು ಬೆಚ್ಚಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+