ನಟ ವಿಜಯ್ ಸಾಯಿ ಆತ್ಮಹತ್ಯೆ, ಪತ್ನಿ ವಿರುದ್ಧ ಕೇಸು
ಹೈದರಾಬಾದ್, ಡಿಸೆಂಬರ್ 13: ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ವಿಜಯ್ ಸಾಯಿ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್ ಅವರ ಪತ್ನಿ ಹಾಗೂ ಇನ್ನಿಬ್ಬರ ವಿರುದ್ದ್ಧ ವಿರುದ್ಧ ಜ್ಯುಬಿಲಿ ಹಿಲ್ಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಲ್ಲಿನ ಯೂಸಫ್‌ಗುಡನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರದಂದು ಫ್ಯಾನಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ವಿಜಯ್ ದೇಹ ಪತ್ತೆಯಾಗಿತ್ತು. ಈ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ.

ಆತ್ಯಹತ್ಯೆಗೂ ಮುನ್ನ ತಮ್ಮ ಮೊಬೈಲ್ ಮೂಲಕ ಸೆಲ್ಫಿ ವಿಡಿಯೋ ಮಾಡಿದ್ದರು. ತಮ್ಮ ಈ ನಿರ್ಧಾರಕ್ಕೆ ಪತ್ನಿ ವನಿತಾ ಮತ್ತಿಬ್ಬರು ಕಾರಣ ಎಂದು ಆರೋಪಿಸಿದ್ದರು. ಈ ವಿಡಿಯೋ ಆಧಾರದ ಮೇಲೆ ಜ್ಯುಬಿಲಿ ಹಿಲ್ಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಲ್ಲದೇ. 'ಐ ಲವ್ ಯೂ ಡ್ಯಾಡಿ....' ಎಲ್ಲರಿಗೂ ಶಿಕ್ಷೆ ಆಗಬೇಕೆಂದು ವಿಜಯ್ ಸಾಯಿ ಸೆಲ್ಫಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ವಿಜಯ್ ಸಾಯಿ ಪತ್ನಿ ವನಿತಾ, ನಿರ್ದೇಶಕ ಶಶಿಧರ್ ಹಾಗೂ ವಕೀಲ ಶ್ರೀನಿವಾಸ್ ವಿರುದ್ಧ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.
'ಬೊಮ್ಮರಿಲ್ಲು', 'ಅಮ್ಮಾಯಿಲು ಅಬ್ಬಾಯಿಲು' ಸೇರಿದಂತೆ ಹಲವಾರು ಚಿತ್ರಗಳಲ್ಲಿ ವಿಜಯ್ ಅಭಿನಯಿಸಿದ್ದರು.












Click it and Unblock the Notifications