ತೆಲಂಗಾಣ: ನಾಪತ್ತೆಯಾಗಿದ್ದ ಟ್ರಾನ್ಸ್ ಅಭ್ಯರ್ಥಿ ಪೊಲೀಸ್ ಠಾಣೆಯಲ್ಲಿ ಪತ್ತೆ!

ಹೈದರಾಬಾದ್, ನವೆಂಬರ್ 29: ತೆಲಂಗಾಣ ಚುನಾವಣೆಗೆ ಸ್ಪರ್ಧಿಸಿ, ನಾಪತ್ತೆಯಾಗಿದ್ದ ಪ್ರಪ್ರಥಮ ತೃತೀಯ ಲಿಂಗಿ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಚಂದ್ರಮುಖಿ ಮುವ್ವಾಲಾ ಪೊಲೀಸ್ ಠಾಣೆಯಲ್ಲಿ ಪತ್ತೆಯಾಗಿ ಅಚ್ಚರಿ ಮೂಡಿಸಿದ್ದಾರೆ.

ತೆಲಂಗಾಣದಲ್ಲಿ ಡಿ.7 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಗೋಶಮಹಲ್ ಕ್ಷೇತ್ರದಿಂದ ಬಹುಜನ ಲೆಫ್ಟ್ ಫ್ರಂಟ್ ಪಕ್ಷದಿಂದ ಸ್ಪರ್ಧಿಸಿರುವ ಎಂ.ಚಂದ್ರಮುಖಿ ಬುಧವಾರ ರಾತ್ರಿ ಪೊಲೀಸ್ ಠಾಣೆಯಲ್ಲಿ ಪತ್ತೆಯಾಗಿದ್ದಾರೆ.

ಆದರೆ ಈ ಕುರಿತು ಪೊಲೀಸರಿಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿರುವ ಅವರು, ನೇರವಾಗಿ ಗುರುವಾರ ಕೋರ್ಟಿನಲ್ಲೇ ಎಲ್ಲ ವಿಷಯವನ್ನೂ ಬಾಯಿಬಿಡುತ್ತೇನೆ. ಅಲ್ಲಿಯವರೆಗೂ ಏನೂ ಹೇಳುವುದಿಲ್ಲ ಎಂದಿದ್ದಾರೆ.

Telangana: missing transwoman candidate Chandramukhi spotted in police station!

ತೆಲಂಗಾಣದ ಬಂಜರಾ ಹಿಲ್ಸ್ ನ ತಮ್ಮ ನಿವಾಸದಿಂದ ಅವರು ನಾಪತ್ತೆಯಾಗಿದ್ದರು. ಹೈದರಾಬಾದಿನ ತೃತೀಯ ಲಿಂಗಿ ಸಮುದಾಯದಲ್ಲಿ ಚಂದ್ರಮುಖಿ ಅವರ ಹೆಸರು ಬಹು ಪ್ರಸಿದ್ಧವಾಗಿದ್ದು, ಅವರು ಬಿಜೆಪಿಯ ರಾಜಾ ಸಿಂಗ್ ಮತ್ತು ಕಾಂಗ್ರೆಸ್ಸಿನ ಮುಖೇಶ್ ಗೌಡ್ ಅವರ ವಿರುದ್ಧ ಸ್ಪರ್ಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+