ತೆಲಂಗಾಣ; ಡೆಪ್ಯೂಟಿ ಸ್ಪೀಕರ್‌ಗೆ ಕೊರೊನಾ ವೈರಸ್ ಸೋಂಕು

ಹೈದರಾಬಾದ್, ಜೂನ್ 30 : ತೆಲಂಗಾಣ ವಿಧಾನಸಭೆ ಡೆಪ್ಯೂಟಿ ಸ್ಪೀಕರ್‌ಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ರಾಜ್ಯದ ಗೃಹ ಸಚಿವರಿಗೆ ಭಾನುವಾರ ರಾತ್ರಿ ಸೋಂಕು ತಗುಲಿರುವುದು ಖಚಿತವಾಗಿತ್ತು.

Recommended Video

      COVAXIN India's first vaccine for human trial|ಕೊವ್ಯಾಕ್ಸಿನ್ ಪ್ರಯೋಗಕ್ಕೆ ಸಿಕ್ತು ಅನುಮತಿ|Oneindia Kannada

      ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಟಿ. ಪದ್ಮರಾವ್ ಮತ್ತು ಅವರ ಐವರು ಕುಟುಂಬ ಸದಸ್ಯರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಮವಾರ ಟಿ. ಪದ್ಮರಾವ್ ಮತ್ತು ಕುಟುಂಬದವರಿಗೆ ಸೋಂಕು ತಗುಲಿರುವ ವರದಿ ಬಂದಿತ್ತು.

      ಸಿಂಕರಾಬಾದ್ ಕ್ಷೇತ್ರದ ಶಾಸಕರಾದ ಟಿ. ಪದ್ಮರಾವ್ ಮತ್ತು ಅವರ ಕುಟುಂಬ ಸದಸ್ಯರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಆಂಧ್ರಜ್ಯೋತಿ ಪತ್ರಿಕೆ ವರದಿ ಮಾಡಿದೆ. ಕುಟುಂಬ ಸದಸ್ಯರ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

      Telangana Deputy Speaker Tested Positive For COVID 19

      ಆಸ್ಪತ್ರೆಗೆ ದಾಖಲಾಗುವ ಮುನ್ನ ತಮ್ಮ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಟಿ. ಪದ್ಮರಾವ್ ಪಾಲ್ಗೊಂಡಿದ್ದರು ಎಂಬ ಮಾಹಿತಿ ಇದೆ. ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಅವರು ಪರೀಕ್ಷೆಗೆ ಒಳಪಟ್ಟಿದ್ದರು.

      ತೆಲಂಗಾಣದಲ್ಲಿ ಟಿಆರ್‌ಎಸ್ ಪಕ್ಷದ ಸರ್ಕಾರವಿದೆ. ಪಕ್ಷದ ಐವರೂ ಶಾಸಕರಿಗೆ ಇದುವರೆಗೂ ಸೋಂಕ ತಗುಲಿದೆ. ಗೃಹ ಸಚಿವ ಮಹಮೂದ್ ಅಲಿ ಜ್ಯುಬ್ಲಿ ಹಿಲ್ಸ್‌ನಲ್ಲಿರುವ ಆಸ್ಪತ್ರೆಗೆ ಭಾನುವಾರ ರಾತ್ರಿ ದಾಖಲಾಗಿದ್ದರು.

      ಸೋಮವಾರ ಒಂದೇ ದಿನ ತೆಲಂಗಾಣ ರಾಜ್ಯದಲ್ಲಿ 975 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 15,394.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+