ವೇಶ್ಯಾಕೂಪದಲ್ಲಿ ಸಿಲುಕಿದ ಮೀನು ನಾನು: ಶ್ವೇತಾ

ಹೈದರಾಬಾದ್, ಸೆ.3: ಟಾಲಿವುಡ್ ನ ಉದಯೋನ್ಮುಖ ನಟಿ ಶ್ವೇತಾ ಬಸು ಪ್ರಸಾದ್ ವೇಶ್ಯಾವಾಟಿಕೆಯಲ್ಲಿ ತೊಡಗಲು ಕಾರಣವೇನು? ಎಂಬ ಸತ್ಯವನ್ನು ಕೋರ್ಟಿನಲ್ಲಿ ಬಹಿರಂಗ ಪಡಿಸಿದ್ದಾರೆ. ಬಂಜಾರ ಹಿಲ್ಸ್ ನ ಹೋಟೆಲ್ ನಲ್ಲಿ ಸೆರೆಸಿಕ್ಕಿದ್ದ ನಟಿ ಶ್ವೇತಾ ಮೊದಲ ಬಾರಿಗೆ ಈ ಬಗ್ಗೆ ಮಾತನಾಡಿದ್ದಾರೆ.

ಹೈದರಾಬಾದಿನ ಬಂಜಾರ ಹಿಲ್ಸ್ ನ ಸ್ಟಾರ್ ಹೋಟೆಲ್ ಹಯಾತ್ ನ ರೂಮ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುವಾಗ ಶ್ವೇತಾ ಬಸು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. 23 ವರ್ಷ ವಯಸ್ಸಿನ ನಟಿ ಗ್ಲಾಮರಸ್ ಜಗತ್ತಿನ ಕರಾಳ ಮುಖವನ್ನು ಪರಿಚಯಿಸಿದ್ದಾರೆ. ಹಣದ ಅವಶ್ಯಕತೆ ತುಂಬಾ ಇತ್ತು. ಅದರ ದುರುಪಯೋಗಪಡಿಸಿಕೊಂಡ ಕೆಲವು ದುಷ್ಟಶಕ್ತಿಗಳು ನನ್ನನ್ನು ವೇಶ್ಯಾವಾಟಿಕೆ ಕೂಪದಲ್ಲಿ ತಳ್ಳಿವೆ. ನಾನೇನು ಬಯಸಿ ಬಯಸಿ ಈ ಜಾಲದಲ್ಲಿ ಸಿಲುಕಿಲ್ಲ ಎಂದಿದ್ದಾರೆ.

ನನ್ನ ವೃತ್ತಿ ಬದುಕಿನಲ್ಲಿ ಕೆಲವು ಒಳ್ಳೆ ಚಿತ್ರಗಳನ್ನು ಮಾಡಿದ್ದೇನೆ. ಕೆಲ ಕೆಟ್ಟ ಆಯ್ಕೆಗಳನ್ನು ಮಾಡಿಕೊಂಡಿದ್ದೇನೆ, ಕೈಲಿ ಹಣ ಇಲ್ಲದಾಗ ನನ್ನ ಕುಟುಂಬ ಹಾಗೂ ಇನ್ನಿತರ ಒಳ್ಳೆ ಕಾರ್ಯಕ್ಕೆ ಹಣ ಬಳಸಲು ನನಗೆ ನೆರವು ಬೇಕಿತ್ತು. ಈ ಸಮಯದಲ್ಲಿ ಹಿತೈಷಿಗಳೆನಿಸಿಕೊಂಡಿದ್ದ ಕೆಲವರು ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಳ್ಳು ಹೆಚ್ಚಿನ ಲಾಭ ಸಿಗುತ್ತದೆ. ಯಾರಿಗೂ ತಿಳಿಯದಂತೆ ಸ್ಟಾರ್ ಹೋಟೆಲ್ ಗಳಲ್ಲಿ ವ್ಯವಹಾರ ಮುಗಿಸಬಹುದು ಎಂದು ಸಲಹೆ ನೀಡಿದರು. ನಾನು ಬೇರೆ ಯಾವುದೇ ದಾರಿ ತಿಳಿಯದಂತಾಗಿ ಈ ಕೂಪದಲ್ಲಿ ಸಿಲುಕಿದ ಮೀನನಂತೆ ಒದ್ದಾಡುತ್ತಿದ್ದೇನೆ ಎಂದು ಶ್ವೇತಾ ಹೇಳಿಕೊಂಡಿದ್ದಾಳೆ.

Revealed: Why Tollywood actress Shweta Basu accepts prostitution

ಇಂಡಸ್ಟ್ರಿಯಲ್ಲಿ ಇನ್ನೂ ಅನೇಕ ಹೀರೋಯಿನ್ ಗಳ ಕಥೆಯೂ ಇದೇ ರೀತಿ ಇದೆ. ನನ್ನಂತೆ ಹಲವಾರು ಮಂದಿ ಸಂಕಷ್ಟದಲ್ಲಿದ್ದಾರೆ. ತೊಂದರೆ ಹೇಳಿಕೊಳ್ಳುವಂತಿಲ್ಲ. ಪರಿಸ್ಥಿತಿ ಒಪ್ಪಿಕೊಳ್ಳುವಂತಿಲ್ಲ ಎಂದಿದ್ದಾರೆ.[ವೇಶ್ಯಾಗೃಹದಲ್ಲಿದ್ದ ನಟಿ ಶ್ವೇತಾ ಬಸು ಬಂಧನ]

ಶ್ವೇತಾ, ಪಿಂಪ್ ಬಾಲು, ಉದ್ಯಮಿ ಸೇರಿದಂತೆ ಅನೇಕರನ್ನು ಹೈದರಾಬಾದಿನ ಬಂಜಾರಾ ಹಿಲ್ಸ್ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಸದ್ಯಕ್ಕೆ ಶ್ವೇತಾ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದಾರೆ.

ಹಿಂದಿಯಲ್ಲಿ ಮಕ್ ಡಿ ಚಿತ್ರದ ನಟನೆಗಾಗಿ ಬಾಲನಟಿಯಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿರುವ 23 ವರ್ಷ ವಯಸ್ಸಿನ ಶ್ವೇತಾ ಬಸು ಪ್ರಸಾದ್ ಮೂಲತಃ ಜಾರ್ಖಂಡ್ ನ ಜೇಮ್ ಶೇಡ್ ಪುರದವರು.ಬೆಂಗಾಳಿ, ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ.

ಬಾಲನಟಿಯಾಗಿ ಗಮನ ಸೆಳೆದ ಶ್ವೇತಾ ಪ್ರಸಾದ್ ಮಕ್ಡಿ, ಇಕ್ಬಾಲ್ ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ್ದರು. ಮಕ್ಡಿ ಚಿತ್ರದ ಚುನ್ನಿ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ, ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಗಳಿಸಿದ್ದರು. ನಂತರ ಡರ್ನಾ ಜರೂರಿ ಹೈ(ಹಿಂದಿ), ಕೊತ್ತ ಬಂಗಾರು ಲೋಕಂ(ತೆಲುಗು), ಎಕ್ ನದೀರ್ ಗೊಲ್ಪೋ(ಬೆಂಗಾಳಿ) ಚಿತ್ರಗಳಲ್ಲಿ ನಟಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+