ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ನಿಮ್ಮ ಡಿಗ್ರಿ ಸರ್ಟಿಫಿಕೇಟ್ ಮೊದಲು ತೋರ್ಸಿ: ಪ್ರಕಾಶ್ ರಾಜ್

|
Google Oneindia Kannada News

Recommended Video

ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ ಪ್ರಕಾಶ್ ಆಕ್ಷೇಪ | Prakash Raj | Modi | Oneindia Kannada

ಹೈದರಾಬಾದ್, ಜನವರಿ 21: ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಕೇಳಿದ್ದಾರೆ. #justasking ಎಂಬ ಹ್ಯಾಶ್ ಟ್ಯಾಗ್ ಮೂಲಕ ಮೋದಿ ಅವರಿಗೆ ಚುನಾವಣೆ ಸಂದರ್ಭದಲ್ಲಿ ಪ್ರಶ್ನೆಗಳನ್ನು ಕೇಳಿದ್ದ ಪ್ರಕಾಶ್ ರಾಜ್ ಗೆ ಮೋದಿ ಹಿಂಬಾಲಕರು ಪ್ರತ್ಯುತ್ತರ ನೀಡುತ್ತಾ ಬಂದಿದ್ದಾರೆ. ಈಗ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸಿದ ಪ್ರಧಾನಿ ಮೋದಿ ಬಗ್ಗೆ ಪ್ರಕಾಶ್ ಅವರು ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆ.

ಅನರ್ಹರಿಗೆ ಗೆಲುವು, ಹೆಚ್ಚು ದಿನ ನಡೆಯಲ್ಲ: ಪ್ರಕಾಶ್ ರಾಜ್ಅನರ್ಹರಿಗೆ ಗೆಲುವು, ಹೆಚ್ಚು ದಿನ ನಡೆಯಲ್ಲ: ಪ್ರಕಾಶ್ ರಾಜ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರದಂದು ಪರೀಕ್ಷೆ ಕುರಿತಂತೆ ದೇಶದ ವಿವಿಧ ಭಾಗದ ವಿದ್ಯಾರ್ಥಿ/ನಿಯರ ಜೊತೆ ಚರ್ಚೆ ನಡೆಸಿದ್ದರು. ಪರೀಕ್ಷಾಒತ್ತಡದಿಂದ ಹೇಗೆ ಹೊರಬರಬಹುದು ಎಂಬುದಕ್ಕೆ ಸಲಹೆ, ಸೂಚನೆ ನೀಡಿದರು. ಮಕ್ಕಳ, ಪೋಷಕರ ಮೆಚ್ಚುಗೆ ಪಡೆದಿರ್ವ ಈ ಪರೀಕ್ಷೆ ಮೇಲಿನ ಚರ್ಚೆ ಯಾಕೋ ಪ್ರಕಾಶ್ ರಾಜ್ ಗೆ ಇಷ್ಟವಾಗಿಲ್ಲ.

ಮೋದಿ ನಡೆಸಿಕೊಟ್ಟ ಪರೀಕ್ಷೆ ಬಗ್ಗೆ ಚರ್ಚೆ ಬಗ್ಗೆಯೂ ತಮ್ಮ ಪ್ರತಿಕ್ರಿಯೆಯನ್ನು ಟ್ವೀಟ್ ಮಾಡಿ ತಿಳಿಸಿರುವ ಪ್ರಕಾಶ್ ರಾಜ್, ಪರೀಕ್ಷೆ ಬಗ್ಗೆ ಸಲಹೆ ನೀಡುವ ಮೊದಲು ನಿಮ್ಮ ಪದವಿ ಪ್ರಮಾಣ ಪತ್ರ ತೋರಿಸಿ ಎಂದಿದ್ದಾರೆ.

Prakash Raj asks Modi to Show his degree certificate

ಪದವಿ ಪಡೆಯದವರೆಲ್ಲ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ನಾನು ಪೊಲಿಟಿಕಲ್ ಸೈನ್ ವಿಷಯದಲ್ಲಿ ಪದವಿ ಪಡೆದಿದ್ದೇನೆ. ಭಾರತದ ಜನತೆ ಪೊಲಿಟಕಲ್ ಸೈನ್ಸ್ ಪಾಠವನ್ನು ಮಾಡಲಿದ್ದಾರೆ ಎಂದು ಪ್ರಕಾಶ್ ಹೇಳಿದ್ದಾರೆ.

ಹೈದರಾಬಾದಿನಲ್ಲಿ ಯಂಗ್ ಇಂಡಿಯಾ ರಾಷ್ಟ್ರೀಯ ಸಮನ್ವಯ ಸಮಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ಪ್ರಕಾಶ್ ಅವರು ಸಿಎಎ ಪ್ರತಿಭಟನೆ ಬಗ್ಗೆ ಕೂಡಾ ಪ್ರತಿಕ್ರಿಯಿಸಿದರು.

ಟ್ವೀಟ್ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಕಾಶ್ ರಾಜ್ ಪ್ರಶ್ನೆ! ಟ್ವೀಟ್ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಕಾಶ್ ರಾಜ್ ಪ್ರಶ್ನೆ!

ಸಿಎಎ, ಎನ್ ಆರ್ ಸಿ ಹಾಗೂ ಎನ್ ಪಿಆರ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ಸುಶಿಕ್ಷಿತರು ಹಾಗೂ ಸಂವಿಧಾನದ ತಿದ್ದುಪಡಿ ಆಗದಂತೆ ತಡೆಯಬಲ್ಲವರು ಎಂದಿದ್ದಾರೆ.

''ಪ್ರಧಾನಿಯವರೇ ನೀವೆ ಹೇಳಿದಂತೆ ನೀವು ಜನ ಸೇವಕರು, ನಿಮ್ಮ ಕರ್ತವ್ಯವನ್ನು ನಿಭಾಯಿಸಿ, ನೋಂದಣಿ ವಿಷಯಕ್ಕೆ ಬಂದರೆ, ನಿರುದ್ಯೋಗಿಗಳು, ಅನಕ್ಷರಸ್ಥರ ನೋಂದಣಿ ಮೊದಲು ಮಾಡಿ ಎಂದು ಪ್ರಕಾಶ್ ಆಗ್ರಹಿಸಿದ್ದಾರೆ.

English summary
Actor Prakash Raj asks PM Narendra Modi to show his degree certificate first then conduct Pariksha Pe Charcha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X