ನಾಪತ್ತೆಯಾದ ಮಹಿಳೆ ಬೆಂಗಳೂರಿನ ಮದ್ರಸಾದಲ್ಲಿ ಪತ್ತೆ
ವಿಜಯವಾಡ, ಜ. 27: ವಿಜಯವಾಡದಿಂದ ಮಗಳು ಶೆಕ್ ತಬ್ಸುಮ್ (4) ಜತೆ ಭಾನುವಾರ ಕಾಣೆಯಾಗಿದ್ದ 24 ವರ್ಷದ ಶೇಕ್ ರೆಹಮುನ್ನೀಸಾ ಬೆಂಗಳೂರಿನ ಮದರಸಾವೊಂದರಲ್ಲಿ ಪತ್ತೆಯಾಗಿದ್ದಾರೆ.
ಶೇಖ್ ನಜಿರ್ ಬಾಷಾ ಎಂಬುವರ ಪತ್ನಿ ರೆಹಮುನ್ನೀಸಾ ಮಚಲಿಪಟ್ಟಣದ ಕಾರ್ಯಕ್ರಮವೊಂದಕ್ಕೆ ಹೋಗಲು ಬೆಂಜ್ ಸರ್ಕಲ್ ನಿಂದ ಆಟೋ ಹತ್ತಿದ್ದರು. ಆದರೆ ನಂತರ ನಾಪತ್ತೆಯಾಗಿದ್ದ ಅವರ ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು.[ಹುಬ್ಬಳ್ಳಿ-ವಿಜಯವಾಡ ರೈಲು ನಿತ್ಯ ಸಂಚಾರ]

ವಿಜಯವಾಡದ ರಾಜಿವ್ ನಗರ ನಿವಾಸಿ ಬಾಷಾ ಹೆಂಡತಿ ಮತ್ತು ಮಗಳು ನಾಪತ್ತೆಯಾಗಿರುವ ಬಗ್ಗೆ ಪಟಮಾಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ರೆಹಮುನ್ನೀಸಾ ಬೆಂಗಳೂರಿನ ಮದರಸಾವೊಂದರಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದಾರೆ.
ಕುಟುಂಬದ ನೆರವಿನಲ್ಲಿ ಬೆಂಗಳೂರಿಗೆ ಆಗಮಿಸಿ, ಮಹಿಳೆ ಮತ್ತು ಆಕೆಯ ಮಗಳನ್ನು ಕುಟುಂಬದವರೊಂದಿಗೆ ಸೇರಿಸಲಾಗಿದೆ ಎಂದು ಪಟಮಟಾ ಪೊಲೀಸ್ ಇನ್ಸ್ ಪೆಕ್ಟರ್ ಕೆ.ದಾಮೋದರ್ ತಿಳಿಸಿದ್ದಾರೆ.












Click it and Unblock the Notifications