ಠಾಣೆಗೆ ನುಗ್ಗಿ ಪೊಲೀಸರನ್ನು ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!

Recommended Video

      ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಪೊಲೀಸರಿಗೆ ಥಳಿಸಿದ ಗ್ರಾಮಸ್ಥರು | Oneindia Kannada

      ನೆಲ್ಲೂರು, ಆಗಸ್ಟ್‌ 02: ಪೊಲೀಸ್ ಠಾಣೆಗೆ ನುಗ್ಗಿ ಎಸ್‌ಐ ಸೇರಿದಂತೆ ಕಾನ್ಸ್ಟೇಬಲ್‌ಗಳನ್ನು ಗ್ರಾಮಸ್ಥರು ಸೇರಿಕೊಂಡು ಹಿಗ್ಗಾಮುಗ್ಗಾ ಥಳೀಸಿರುವ ಘಟನೆ ಆಂಧ್ರಲ್ಲಿ ನಡೆದಿದೆ.

      ಆಂಧ್ರದ ನೆಲ್ಲೂರು ಜಿಲ್ಲೆಯ ರಾಂಪುರ ಠಾಣೆಗೆ ಮುಗ್ಗಿರುವ ಗ್ರಾಮಸ್ಥರು ಪೊಲೀಸರೊಂದಿಗೆ ವಾಗ್ವಾದ ನಡೆಸಿ ನಂತರ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

      ಗಲಾಟೆಯಲ್ಲಿ ನಾಲ್ಕು ಜನ ಕಾನ್ಸ್‌ಟೇಬಲ್‌ಗಳು ಗಾಯಗೊಂಡಿದ್ದಾಎರೆ, ಒಬ್ಬರ ತಲೆಗೆ ತೀವ್ರ ಪೆಟ್ಟಾಗಿದೆ. ಎಸ್‌ಐಗೆ ಸಹ ಗಾಯಗಳಾಗಿವೆ. ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಠಾಣೆಯೇ ರಣರಂಗವಾದಂತೆ ಗ್ರಾಮಸ್ಥರು-ಪೊಲೀಸರು ಬಡಿದಾಡಿಕೊಂಡಿದ್ದಾರೆ.

      In Andhras Nellore Villagers beaten police in police station

      ರಾಂಪುರ ಗ್ರಾಮದ ಕೆಲವರನ್ನು ಮದ್ಯಪಾನ ಮಾಡಿ ಗಾಡಿ ಓಡಿಸಿದ್ದ ಕೇಸಿನಲ್ಲಿ ಪೊಲೀಸರು ಬಂಧಿಸಿದ್ದರಂತೆ ಇದರ ಬಗ್ಗೆ ಕೇಳಲು ಬಂದಾಗ ಮಾತಿಗೆ ಮಾತು ಬೆಳೆದು ಹಲ್ಲೆ ವರೆಗೂ ಹೋಗಿದೆ. ಪುರುಷರೊಂದಿಗೆ ಮಹಿಳೆಯರೂ ಸೇರಿಕೊಂಡು ಪೊಲೀಸರಿಗೆ ತದಿಕಿದ್ದಾರೆ.

      In Andhras Nellore Villagers beaten police in police station

      ಘಟನೆ ಕುರಿತಂತೆ ಪೊಲೀಸರು ಹಲವರನ್ನು ಬಂಧಿಸಿದ್ದು, ರಾಂಪುರದಲ್ಲಿ ಸೇನಾ ಮೀಸಲು ತುಕಡಿಯಿಂದ ಪಥಸಂಚಲನ ಮಾಡಿಸಲಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+