ರಾಹುಲ್ ಗಾಂಧಿಗೆ ಮದುವೆಯಾಗಿದೆಯಂತೆ, ಪತ್ನಿ ಕಾಂಗ್ರೆಸ್ ಪಕ್ಷವಂತೆ!
ಹೈದರಾಬಾದ್, ಆಗಸ್ಟ್ 14: "ನಾನು ಕಾಂಗ್ರೆಸ್ ಪಕ್ಷವನ್ನು ಮದುವೆಯಾಗಿದ್ದೇನೆ, ಅದೇ ನನ್ನ ಪತ್ನಿ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಎರಡು ದಿನಗಳ ಭೇಟಿಗೆಂದು ಹೈದರಾಬಾದಿಗೆ ಆಗಮಿಸಿರುವ ರಾಹುಲ್ ಗಾಂಧಿಯವರು ಸಂಪಾದಕರುಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಅವರನ್ನು, 'ನಿಮ್ಮ ಮದುವೆ ಯಾವಾಗ? ಮದುವೆ ಕುರಿತು ಏನು ಯೋಚಿಸಿದ್ದೀರಿ' ಎಂದು ಒಬ್ಬರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, 'ನಾನು ಕಾಂಗ್ರೆಸ್ ಪಕ್ಷವನ್ನು ಮದುವೆಯಾಗಿದ್ದೇನೆ' ಎಂದು ಉತ್ತರಿಸಿದರು!
ರಾಹುಲ್ ಗಾಂಧಿ ಜೊತೆ ಮದುವೆ? ವದಂತಿ ಸುಳ್ಳು ಎಂದ ಅದಿತಿ!
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, 2019 ರಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುವುದಿಲ್ಲ ಎಂದು ಭವಿಷ್ಯ ನುಡಿದರು. 'ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 230 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದಕ್ಕೂ ಸಾಧ್ಯವಿಲ್ಲ' ಎಂದು ರಾಹುಲ್ ಗಾಂಧಿ ಹೇಳಿದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಈ ರಾಜ್ಯದಲ್ಲಿರುವ ಸಮಾನ ಮನಸ್ಕರ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಿದೆ ಎಂದು ಗಾಂಧಿ ಹೇಳಿದರು.