ನಂದಮೂರಿ ಹರಿಕೃಷ್ಣ ಶವದೆದುರು ಸೆಲ್ಫಿ ಕ್ಲಿಕ್ಕಿಸಿಕೊಂಡ ಆಸ್ಪತ್ರೆ ಸಿಬ್ಬಂದಿ!
ಹೈದರಾಬಾದ್, ಸೆಪ್ಟೆಂಬರ್ 09: ಭೀಕರ ಅಪಘಾತಕ್ಕೊಳಗಾಗಿ ಆಗಸ್ಟ್ 29 ರಂದು ಮೃತರಾದ ತೆಲುಗು ನಟ, ರಾಜಕಾರಣಿ ನಂದಮೂರಿ ಹರಿಕೃಷ್ಣ ಅವರ ಶವದೆದುರು ಆಸ್ಪತ್ರೆ ಸಿಬ್ಬಂದಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ!
ಶವದೆದುರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವಿಕೃತ ಮನಸ್ಥಿತಿಯನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸೆಲ್ಫಿ ಎಂಬ ಭೂತ ಮಾನವೀಯತೆ, ಸಂಸ್ಕಾರ ಎಂಬೆಲ್ಲ ಪದಗಳನ್ನು ಗಾಳಿಗೆ ತೂರಿದೆ. ಅದಕ್ಕೆ ಉದಾಹರಣೆಯಾಗಿ ಎಷ್ಟೋ ಘಟನೆಗಳು ನಮ್ಮ ಮುಂದಿವೆ. ಈ ಪಟ್ಟಿಗೆ ತಾಜಾ ನಿದರ್ಶನ ನಂದಮೂರಿ ಹರಿಕೃಷ್ಟ ಅವರ ಶವದೆದುರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು!
ಆಗಸ್ಟ್ 29 ರಂದು ತೆಲಂಗಾಣದ ನಲ್ಗೊಂಡ ಎಂಬಲ್ಲಿ ಭೀಕರ ಅಪಘಾತಕ್ಕೊಳಗಾಗಿ ನಂದಮೂರಿ ಹರಿಕೃಷ್ಣ(61) ಮೃತರಾಗಿದ್ದರು.
|
ಇಂಥವರ ಬಗ್ಗೆ ಅಸಹ್ಯವಾಗುತ್ತದೆ!
ಇಂಥವರ ಬಗ್ಗೆ ನನಗೆ ಕರುಣೆ, ಅಸಹ್ಯ ಎರಡೂ ಆಗುತ್ತದೆ. ಒಂದು ಶವದ ಎದುರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲೂ ಇವರಿಗೆ ಏನೂ ಅನ್ನಿಸುವುದಿಲ್ಲ. ಅವರಿಗೇನಿದ್ದರೂ ಆ ವ್ಯಕ್ತಿಯ ಜನಪ್ರಿಯತೆ ಮುಖ್ಯ ಅಷ್ಟೇ ಎಂದಿದ್ದಾರೆ ಕಾಂತು ಅಗಸ್ತ್ಯ.
| Array |
ಇದಕ್ಕೆ ಏನೆನ್ನಬೇಕು?
ತೆಲುಗು ನಟ ನಂದಮೂರಿ ಹರಿಕೃಷ್ಣ ಅವರ ಶವದೆದುರು ಆಸ್ಪತ್ರೆ ಸಿಬ್ಬಂದಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಈ ನಡೆಗೆ ಏನೆನ್ನಬೇಕು? ಎಂದು ಪ್ರಶ್ನಿಸಿದ್ದಾರೆ ಶೈಲಾ ಅಂಚನ್.
|
ಕ್ರಮ ಕೈಗೊಳ್ಳಿ
ಹರಿಕೃಷ್ಣ ಅವರ ಶವದೆದುರು ಸೆಲ್ಫಿ ಕ್ಲಿಕ್ಕಿಸಿಕೊಂಡ ಆಸ್ಪತ್ರೆ ಸಿಬ್ಬಂದಿ ವಿರುದ್ಧ ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ ಶರತ್ ಚಂದ್ರ.

ಕ್ರಮ ಕೈಗೊಳ್ಳುವುದಾಗಿ ಅಭಯ ನೀಡಿದ ಆಸ್ಪತ್ರೆ
ಆಸ್ಪತ್ರೆಗೆ ದಾಖಲಾಗಿದ್ದ ಹರಿಕೃಷ್ಣ ಅವರು ಚಿಕಿತ್ಸೆ ಫಲಕಾರಿಯಾಗದ ಮೃತರಾದ ಕೆಲವೇ ಸೆಕೆಂಡ್ ಗಳಲ್ಲಿ ತೆಗೆದ ಸೆಲ್ಫಿ ಇದಾಗಿದ್ದು, ಈ ಎಲ್ಲಾ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಸ್ಪತ್ರೆಯ ಆಡಳಿತ ಮಂಡಳಿ ಅಭಯ ನೀಡಿದೆ.












Click it and Unblock the Notifications