ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಶೇಖರರಾವ್ ಭೇಟಿಯಾದ ಎಚ್.ಡಿ.ದೇವೇಗೌಡ

By Gururaj
|
Google Oneindia Kannada News

ಹೈದರಾಬಾದ್, ಜುಲೈ 01 : ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರನ್ನು ಭೇಟಿಯಾಗಿದ್ದಾರೆ. ದೇವೇಗೌಡ, ಕೆಸಿಆರ್ ಭೇಟಿ ರಾಷ್ಟ್ರ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ವಿವಾಹ ಸಮಾರಂಭಕ್ಕಾಗಿ ಎಚ್.ಡಿ.ದೇವೇಗೌಡರು ಭಾನುವಾರ ಹೈದರಾಬಾದ್‌ಗೆ ತೆರಳಿದ್ದರು. ಆಗ ಅವರು ಕೆ.ಚಂದ್ರಶೇಖರರಾವ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಉಭಯ ನಾಯಕರು ಕೆಲವು ಹೊತ್ತು ರಾಜಕಾರಣದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಅವಧಿಗೆ ಮುನ್ನ ತೆಲಂಗಾಣ ವಿಧಾನಸಭೆ ಮತ್ತು ಲೋಕಸಭೆಗೂ ಚುನಾವಣೆ?ಅವಧಿಗೆ ಮುನ್ನ ತೆಲಂಗಾಣ ವಿಧಾನಸಭೆ ಮತ್ತು ಲೋಕಸಭೆಗೂ ಚುನಾವಣೆ?

ದೇಶದಲ್ಲಿ ತೃತೀಯ ರಂಗವನ್ನು ಬಲಪಡಿಸುವ ಉದ್ದೇಶದಿಂದ ಎಚ್.ಡಿ.ದೇವೇಗೌಡರು ಪ್ರಾದೇಶಿಕ ಪಕ್ಷಗಳ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಇದರ ಭಾಗವಾಗಿಯೇ ಇಂದು ಕೆಸಿಆರ್ ಅವರನ್ನು ಭೇಟಿ ಮಾಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಹರಕೆ ತೀರಿಸಿದ ಕೆಸಿಆರ್, ತಿಮ್ಮಪ್ಪನಿಗೆ 5.6 ಕೋಟಿ ಮೊತ್ತದ ಚಿನ್ನಾಭರಣ ಸಮರ್ಪಣೆಹರಕೆ ತೀರಿಸಿದ ಕೆಸಿಆರ್, ತಿಮ್ಮಪ್ಪನಿಗೆ 5.6 ಕೋಟಿ ಮೊತ್ತದ ಚಿನ್ನಾಭರಣ ಸಮರ್ಪಣೆ

ಇಬ್ಬರೂ ಹೈದರಾಬಾದ್‌ನಲ್ಲಿಯೇ ಇದ್ದ ಕಾರಣ ಭೇಟಿಯಾಗಿ, ಮಾತುಕತೆ ನಡೆಸಿದರು. ಈ ಭೇಟಿಗೆ ವಿಶೇಷ ಅರ್ಥವನ್ನು ಕಲ್ಪಿಸಬೇಕಾಗಿಲ್ಲ ಎಂದು ಜೆಡಿಎಸ್ ಪಕ್ಷದ ನಾಯಕರು ಹೇಳಿದ್ದಾರೆ. ಆದರೆ, ಉಭಯ ನಾಯಕರು ರಾಜಕೀಯ ವಿಷಯವನ್ನು ಮಾತನಾಡಿಲ್ಲ ಎಂಬುದು ತಳ್ಳಿಹಾಕುವಂತಿಲ್ಲ. ಭೇಟಿಯ ಚಿತ್ರಗಳು ಇಲ್ಲಿವೆ ನೋಡಿ

ಎಚ್‌ಡಿಡಿ, ಕೆಸಿಎಆರ್ ಭೇಟಿ

ಎಚ್‌ಡಿಡಿ, ಕೆಸಿಎಆರ್ ಭೇಟಿ

ಹೈದರಾಬಾದ್‌ನಲ್ಲಿ ಭಾನುವಾರ ಎಚ್.ಡಿ.ದೇವೇಗೌಡ ಮತ್ತು ಕೆ.ಚಂದ್ರಶೇಖರರಾವ್ ಭೇಟಿಯಾದರು. ರಾಷ್ಟ್ರ ರಾಜಕಾರಣದಲ್ಲಿ ಈ ಭೇಟಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. 2019ರ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮಹಾಘಟಬಂದನ್ ಕುರಿತು ಮಾತುಕತೆ ನಡೆಸಲು ಉಭಯ ನಾಯಕರು ಭೇಟಿಯಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೆಸಿಆರ್ ಬಂದಿದ್ದರು

ಕೆಸಿಆರ್ ಬಂದಿದ್ದರು

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕೆ.ಚಂದ್ರಶೇಖರರಾವ್ ಇದಕ್ಕೆ ಬೆಂಬಲ ನೀಡಿದ್ದರು. ಎಚ್.ಡಿ.ದೇವೇಗೌಡರ ನಿವಾಸಕ್ಕೆ ಆಗಮಿಸಿ ಶುಭ ಕೋರಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದರು.

ಪರಸ್ಪರ ಶುಭಾಶಯವ ವಿನಿಮಯ

ಪರಸ್ಪರ ಶುಭಾಶಯವ ವಿನಿಮಯ

ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಎಚ್.ಡಿ.ದೇವೇಗೌಡರು ಭಾನುವಾರ ಹೈದರಾಬಾದ್‌ಗೆ ತೆರಳಿದ್ದರು. ಆಗ ಅವರು ಕೆ.ಚಂದ್ರಶೇಖರರಾವ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಉಭಯ ನಾಯಕರು ಕೆಲವು ಹೊತ್ತು ಚರ್ಚೆ ನಡೆಸಿದ್ದಾರೆ. ಇಬ್ಬರು ನಾಯಕರು ಒಟ್ಟಿಗೆ ಇದ್ದುದ್ದರಿಂದ ಪರಸ್ಪರ ಭೇಟಿಯಾದರು. ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಜೆಡಿಎಸ್ ಮೂಲಗಳು ಹೇಳಿವೆ.

ಲೋಕಸಭೆ ಚುನಾವಣೆ

ಲೋಕಸಭೆ ಚುನಾವಣೆ

2019ರ ಲೋಕಸಭೆ ಚುನಾವಣೆ ಬಗ್ಗೆ ದೆಹಲಿಯಲ್ಲಿ ಕಳೆದ ವಾರ ಮಾತನಾಡಿದ್ದ ಎಚ್.ಡಿ.ದೇವೇಗೌಡರು, ಕೆ.ಚಂದ್ರಶೇಖರರಾವ್ ಅವರು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಟ ಮಾಡಲಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ ನಾಲ್ಕುದಿನದಲ್ಲಿ ಉಭಯ ನಾಯಕರು ಭೇಟಿಯಾಗಿದ್ದಾರೆ.

English summary
JD(S) supremo and Former PM H.D.Deve Gowda met Chief Minister of Telangana K. Chandrasekhar Rao in Hyderabad on Sunday, July 1, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X