ಪಶುವೈದ್ಯೆ ಅತ್ಯಾಚಾರ, ಕೊಲೆ: 24 ಗಂಟೆಯಲ್ಲೇ ದುಷ್ಕರ್ಮಿಗಳ ಬಂಧನ

Recommended Video

      Veterinary doctor Priyanka Reddy found completely burnt after she went missing | Oneindia Kannada

      ಹೈದರಾಬಾದ್, ನವೆಂಬರ್ 29: ದೇಶವನ್ನೇ ಬೆಚ್ಚಿಬೀಳಿಸಿರುವ ತೆಲಂಗಾಣದ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಹತ್ಯೆ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

      ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳು ಮತ್ತು ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿದ ಸೈಬರಾಬಾದ್ ಪೊಲೀಸರು ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅವರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಂಕಿತ ಆರೋಪಿಗಳನ್ನು ಅನಂತಪುರದಲ್ಲಿ ಬಂಧಿಸಿದ್ದು, ಹೈದರಾಬಾದ್‌ಗೆ ಕರೆತಂದಿದ್ದಾರೆ. ಘಟನೆ ವರದಿಯಾದ ಒಂದು ದಿನದಲ್ಲಿಯೇ ಪೊಲೀಸರ 15 ತಂಡಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸಿದೆ.

      ನಾಪತ್ತೆಯಾಗಿದ್ದ ಪ್ರಿಯಾಂಕಾ ಅವರ ದ್ವಿಚಕ್ರ ವಾಹನವನ್ನು ಕೂಡ ಪತ್ತೆಹಚ್ಚಿದ್ದಾರೆ. ಅವರ ವಾಹನವನ್ನು ಕೊತ್ತೂರು ಎಂಬ ಗ್ರಾಮದಲ್ಲಿ ಪೊದೆಗಳ ನಡುವೆ ಎಸೆಯಲಾಗಿತ್ತು. ಅದರ ನಂಬರ್‌ಪ್ಲೇಟ್‌ ಅನ್ನು ತೆಗೆದುಹಾಕಲಾಗಿತ್ತು. ಪ್ರಿಯಾಂಕಾ ಅವರ ಮೃತದೇಹವನ್ನು ಹಾಲು ಮಾರಲು ಹೋಗುತ್ತಿದ್ದ ವ್ಯಕ್ತಿಯೊಬ್ಬ ಮೊದಲು ಗಮನಿಸಿದ್ದ. ಬೆಂಕಿಯ ಜ್ವಾಲೆಯ ನಡುವೆ ಕೈಯೊಂದು ಆತನಿಗೆ ಕಾಣಿಸಿತ್ತು. ಕೂಡಲೇ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ.

      ಟೈರ್ ಪಂಕ್ಚರ್ ಮಾಡಿದ್ದರು

      ಟೈರ್ ಪಂಕ್ಚರ್ ಮಾಡಿದ್ದರು

      ಪ್ರಿಯಾಂಕಾ ರೆಡ್ಡಿ ಬುಧವಾರ ಬೆಳಿಗ್ಗೆ ತೊಂಡುಪಳ್ಳಿ ಟೋಲ್ ಪ್ಲಾಜಾದ ಬಳಿ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದನ್ನು ನಾಲ್ವರು ಆರೋಪಿಗಳು ಗಮನಿಸಿದ್ದರು. ಅವರು ಸಂಜೆ ವೇಳೆಗೆ ದ್ವಿಚಕ್ರ ವಾಹನ ತೆಗೆದುಕೊಳ್ಳಲು ಬರುತ್ತಾರೆ ಎಂಬುದನ್ನು ಈ ಆರೋಪಿಗಳು ಊಹಿಸಿದ್ದರು. ಹೀಗಾಗಿ ಅವರು ಗಾಡಿ ನಿಲ್ಲಿಸಿ ಹೋದ ಬಳಿಕ ಟೈರ್ ಪಂಕ್ಚರ್ ಮಾಡಿದ್ದರು.

      ನಿರ್ಜನ ಪ್ರದೇಶಕ್ಕೆ ಎಳೆದೊಯ್ದರು

      ನಿರ್ಜನ ಪ್ರದೇಶಕ್ಕೆ ಎಳೆದೊಯ್ದರು

      ತಮ್ಮ ಕೆಲಸ ಮುಗಿಸಿ ರಾತ್ರಿ 8 ಗಂಟೆ ಸುಮಾರಿಗೆ ಮರಳಿ ಬಂದ ಪ್ರಿಯಾಂಕಾ, ಪಂಕ್ಚರ್ ಆಗಿದ್ದನ್ನು ಗಮನಿಸಿದರು. ಆಗ ಅವರ ಬಳಿ ಬಂದ ಇಬ್ಬರು ಅದನ್ನು ರಿಪೇರಿ ಮಾಡಲು ಸಹಾಯ ಮಾಡುವುದಾಗಿ ತಿಳಿಸಿದರು. ಗಾಡಿ ತೆಗೆದುಕೊಂಡ ಅವರಿಬ್ಬರಿಗಾಗಿ ಪ್ರಿಯಾಂಕಾ ಕಾಯುತ್ತಿದ್ದರು. ಆಗ ಇನ್ನಿಬ್ಬರು ದುಷ್ಕರ್ಮಿಗಳು ಬಂದು ಅವರನ್ನು ಟೋಲ್ ಪ್ಲಾಜಾದಿಂದ ಹೆಚ್ಚೆಂದರೆ 50 ಮೀಟರ್ ದೂರದಲ್ಲಿರುವ ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ. ಅಲ್ಲಿ ಅವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ.

      ಲಾರಿ ಚಾಲಕ, ಕ್ಲೀನರ್

      ಲಾರಿ ಚಾಲಕ, ಕ್ಲೀನರ್

      ಬಂಧಿತರಲ್ಲಿ ಪ್ರಮುಖ ಶಂಕಿತ ಆರೋಪಿ ಮೊಹಮ್ಮದ್ ಪಾಶಾ ಮಹಬೂಬನಗರದ ನಾರಾಯಣಪೇಟೆ ಮೂಲದವನಾಗಿದ್ದು, ಲಾರಿ ಚಾಲಕನ ಕೆಲಸ ಮಾಡುತ್ತಿದ್ದ. ಆತನ ಜತೆಗೆ ರಂಗಾರೆಡ್ಡಿ ಮತ್ತು ಮಹಬೂಬನಗರದ ಕ್ಲೀನರ್ ಹಾಗೂ ಇನ್ನಿಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಯಾರೂ ಇಲ್ಲದ ಜಾಗಕ್ಕೆ ಪ್ರಿಯಾಂಕಾ ಅವರನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಆ ಜಾಗದಲ್ಲಿ ಪ್ರಿಯಾಂಕಾ ಅವರ ಬಟ್ಟೆಯ ತುಂಡುಗಳು ಹಾಗೂ ಮದ್ಯದ ಬಾಟಲಿಗಳು ಕಂಡುಬಂದಿವೆ.

      ಸಾಕ್ಷ್ಯ ನಾಶಕ್ಕೆ ಪ್ರಯತ್ನ

      ಸಾಕ್ಷ್ಯ ನಾಶಕ್ಕೆ ಪ್ರಯತ್ನ

      ಆರೋಪಿಗಳು ಸಾಕ್ಷ್ಯಗಳನ್ನು ನಾಶಪಡಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸಿದ್ದರು. ಆದರೆ ತಂತ್ರಜ್ಞಾನವು ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ನೆರವಾಯಿತು. ಟೋಲ್ ಗೇಟ್ ಸಮೀಪದಲ್ಲಿಯೇ ಪ್ರಿಯಾಂಕಾ ಅವರಿಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿವೆ. ಅವರ ಮೃತದೇಹ ಗುರುವಾರ ಬೆಳಿಗ್ಗೆ ಟೋಲ್‌ಗೇಟ್‌ನಿಂದ 30 ಕಿ.ಮೀ. ದೂರದಲ್ಲಿ ಸುಟ್ಟ ಸ್ಥಿತಿಯಲ್ಲಿ ಸಿಕ್ಕಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+