ಸ್ಟಾರ್ ನಿರ್ದೇಶಕರ ಕಾರು ತಡೆದು ದಂಡ ಹಾಕಿದ ಟ್ರಾಫಿಕ್ ಪೊಲೀಸ್!
ಹೈದರಾಬಾದ್, ಏಪ್ರಿಲ್ 5: ಐಷಾರಾಮಿ ಕಾರುಗಳಿಗೆ ನಿಷೇಧಿತ ಟಿಂಟೆಂಡ್ ಗ್ಲಾಸ್ ಹಾಕಿಸಿಕೊಂಡು ತಿರುಗಾಡುವ ಸೆಲೆಬ್ರಿಟಿಗಳ ವಿರುದ್ಧ ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ. ಕೆಲ ದಿನಗಳ ಹಿಂದೆ ಆರ್‌ಆರ್‌ಆರ್ ಚಿತ್ರದ ನಾಯಕ, ಯಂಗ್ ಟೈಗರ್ ಎಂದು ಕರೆಸಿಕೊಳ್ಳುವ ತಾರಕ್(ಜ್ಯೂನಿಯರ್ ಎನ್‌ಟಿಆರ್ ) ಅವರ ಕಾರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈಗ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರಿದ್ದ ಕಾರು ತಡೆದು ದಂಡ ವಿಧಿಸಲಾಗಿದೆ.
ಜ್ಯುಬಿಲಿ ಹಿಲ್ಸ್ ಸಂಚಾರ ಪೊಲೀಸರು ಚಲನ್ ಜಾರಿ ಮಾಡಿದ್ದಾರೆ ಎಂದು ವರದಿಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಅಧಿಕಾರಿಗಳು ಅವರ ವಾಹನವನ್ನು ತಡೆದು ನಿಲ್ಲಿಸಿ ನಂತರ ಟಿಂಟೆಡ್ ಗ್ಲಾಸ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡವನ್ನು ವಿಧಿಸಿದ್ದಾರೆ. ನಂತರ ಅವರು ಅವರ ಐಷಾರಾಮಿ ಕಾರಿನ ಕಿಟಕಿಗಳಿಂದ ಕಪ್ಪು ಫಿಲ್ಮ್ ಅನ್ನು ತೆಗೆದುಹಾಕಿದ್ದಾರೆ.
ಹೈದರಾಬಾದ್ ಪೊಲೀಸರು ಟಿಂಟೆಂಡ್ ಗ್ಲಾಸ್ ತೆರವು ಕಾರ್ಯಾಚರಣೆ ಮುಂದುವರೆಸಿದ್ದು, ನಟ ಅಲ್ಲು ಅರ್ಜುನ್ ಹಾಗೂ ಕಲ್ಯಾಣ್ ರಾಮ್ ಅವರಿಗೆ ಸೇರಿದ ಕಾರಿನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಜ್ಯುಬಿಲಿ ಹಿಲ್ಸ್ ಬಳಿಯೇ ಇಬ್ಬರು ನಟರ ಕಾರಿಗೆ ಮೇಲೆ ಕೇಸ್ ಬಿದ್ದಿದೆ. ಮಾರ್ಚ್ 25ರಂದು ಜ್ಯೂ ಎನ್‌ಟಿಆರ್ ಅವರ್ ರೇಂಜ್ ರೋವರ್ ಕಾರಿನ ಟಿಂಟೆಂಡ್ ಗ್ಲಾಸ್ ತೆಗೆದು ಹಾಕಿದ್ದ ಪೊಲೀಸರು ತಮ್ಮ ಕಾರ್ಯಾಚರಣೆ ಮುಂದುವರೆಸಿ, ಸೆಲೆಬ್ರಿಟಿಗಳ ಕಾರುಗಳ ಬೆನ್ನು ಬಿದ್ದಿದ್ದಾರೆ.

ಕಾರುಗಳು ಮತ್ತು ಇತರ ವಾಹನಗಳಿಗೆ ಟಿಂಟೆಡ್ ಗ್ಲಾಸ್ ಕಿಟಕಿಗಳ ವಿರುದ್ಧ ಈಗಾಗಲೇ ವಾಹನ ಚಾಲಕರಿಗೆ ಎಚ್ಚರಿಕೆ ನೀಡಿದ ಹೈದರಾಬಾದ್ ಟ್ರಾಫಿಕ್ ಪೊಲೀಸರು, ನಿರ್ದೇಶಕರ ಕಾರನ್ನು ತಡೆದು, ನಿಯಮ ಉಲ್ಲಂಘನೆಗಾಗಿ 700 ರೂ. ದಂಡ ವಿಧಿಸಿದ್ದಾರೆ. ನಿರ್ದೇಶಕ ತನ್ನ ಚಾಲಕನೊಂದಿಗೆ ಕಾರಿನಲ್ಲಿದ್ದ ಚಿತ್ರ ವೈರಲ್ ಆಗಿದೆ.
ಸೆಲೆಬ್ರಿಟಿಗಳ ಕಾರುಗಳೇ ಟಾರ್ಗೆಟ್:
ಈಗ, ಅಲ್ಲು ಅರ್ಜುನ್ ಅವರ ವಾಹನವು ನಿಯಮ ಮೀರಿ ಟಿಂಟೆಂಡ್ ಗ್ಲಾಸ್ ಹೊಂದಿರುವುದನ್ನು ಕಂಡು ಪೊಲೀಸರು ಪಕ್ಕಕ್ಕೆ ನಿಲ್ಲಿಸಿ, ದಂಡ ವಿಧಿಸಿದ್ದಾರೆ. ಕಾರನ್ನು ಪೊಲೀಸರು ಬುಕ್ ಮಾಡಿ, ಸ್ಥಳದಲ್ಲೇ 700 ರೂ. ದಂಡ ವಿಧಿಸಿದ್ದರು. ನಂತರ ಪೊಲೀಸರು ಗ್ಲಾಸ್ ಮೇಲಿನ ಕಪ್ಪು ಬಣ್ಣ ಪರದೆ ತೆಗೆದುಹಾಕಿದ್ದಾರೆ. ಅಲ್ಲದೆ, ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಟಾಲಿವುಡ್ ಸ್ಟಾರ್ ಕಲ್ಯಾಣ್ ರಾಮ್ ಅವರ ಕಾರನ್ನು ಸಹ ಬುಕ್ ಮಾಡಲಾಗಿದೆ.

ಅನುಮತಿ ಪಡೆದ ವಿವಿಐಪಿಗಳಿಗೆ ಮಾತ್ರ ಬ್ಲಾಕ್ ಫಿಲ್ಮುಗಳನ್ನು ಬಳಸಲು ಅವಕಾಶ ಇರುತ್ತದೆ. ವಾಸ್ತವವಾಗಿ, ಕಾನೂನುರೀತ್ಯಾ ಟಿಂಟೆಂಡ್ ಗ್ಲಾಸ್ ಬಳಕೆ ಅಪರಾಧ. ನಿರ್ಭಯಾ ಪ್ರಕರಣದ ನಂತರ ಎಲ್ಲಾ ವಾಹನಗಳಿಗೂ ಅನ್ವಯವಾಗುವಂತೆ ಸುಪ್ರೀಂಕೋರ್ಟ್ ಈ ಕುರಿತಂತೆ ತೀರ್ಪು ನೀಡಿದೆ. ಜೆಡ್ ಪ್ಲಸ್ ಕೇಟಗಿರಿ ಭದ್ರತೆ ಇರುವ ಸೆಲಬ್ರಿಟಿಗಳು ಬೇರೆಯವರೂ ಕೂಡ ತಮ್ಮ ವಾಹನಗಳ ಮೇಲೆ ಬ್ಲಾಕ್ ಫಿಲ್ಮುಗಳನ್ನು ಬಳಸಬಾರದು. ಮೋಟಾರ್ ವಾಹನ ಕಾಯ್ದೆ ಮತ್ತು ನ್ಯಾಯಾಲಯದ ಪ್ರಕಾರ, ಹೊರಭಾಗದಿಂದ ನೋಡಿದರೆ ಕಾರು ಒಳಗೆ ಇರುವುದು ನಿಖರವಾಗಿ ಇರಬೇಕು.
ಮೋಟಾರು ವಾಹನಗಳ ಕಾಯಿದೆ 1989 ರ ಪ್ರಕಾರ, ಅನುಮತಿಸುವ ಮಿತಿ(ಎಷ್ಟು ಪ್ರಮಾಣದಲ್ಲಿ ಟಿಂಟ್ ಇರಬಹುದು)ಯನ್ನು ಮೀರಿ ಗಮನವನ್ನು ನಿರ್ಬಂಧಿಸಲಾಗಿದೆ ವಿಂಡ್ ಶೀಲ್ಡ್ಸ್ ಮತ್ತು ವಾಹನಗಳ ಕಿಂಡಿಗಳ ಮೇಲೆ ಟಿಂಟೆಡ್ ಗ್ಲಾಸ್ ಅಥವಾ ಸನ್ ಫಿಲ್ಮ್ ಅನ್ನು ಬಳಸುವುದನ್ನು ಸುಪ್ರೀಂ 2012 ರಲ್ಲಿ ನಿಷೇಧಿಸಲಾಗಿದೆ. ಈ ನಿಯಮದ ಪ್ರಕಾರ, ಪ್ರತಿ ಮೋಟಾರು ವಾಹನದ ಫ್ರಂಟ್ ವಿಂಡ್ ಸ್ಕ್ರೀನ್ ಮತ್ತು ಹಿಂಬದಿ ವಿಂಡೋಸ್ 70% Visual Transmission light ಅನ್ನು ಅನುಮತಿಸಬೇಕಾಗಿದೆ ಎಂದು ಕಾಯ್ದೆಯಲ್ಲಿದೆ.












Click it and Unblock the Notifications