ತೆಲಗು ನಟ ನಾಗಾರ್ಜುನ ಫಾರಂ ಹೌಸ್ ನಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆ

ಹೈದರಾಬಾದ್, ಸೆಪ್ಟೆಂಬರ್ 20: ಖ್ಯಾತ ತೆಲುಗು ನಟ ನಾಗಾರ್ಜುನ ಅವರಿಗೆ ಸೇರಿದ ಫಾರಂ ಹೌಸ್‌ನ ಕಾಂಪೌಂಡ್‌ನಲ್ಲಿ ವ್ಯಕ್ತಿಯೊಬ್ಬನ ಅಸ್ಥಿಪಂಜರ ಪತ್ತೆ ಆಗಿದೆ.

ಹೈದರಾಬಾದ್ ಹೊರವಲಯದಲ್ಲಿರುವ ಜಮೀನಿನಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದ್ದು, ಈ ಜಮೀನು ನಟ ನಾಗಾರ್ಜುನ ಅವರಿಗೆ ಸೇರಿದ್ದಾಗಿದೆ. ನಿನ್ನೆ ರಾತ್ರಿ ಕೃಷಿ ಕಾರ್ಮಿಕರು ಅಸ್ಥಿಪಂಜರವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಟ ನಾಗಾರ್ಜುನ ಫಾರ್ಮ್ ಹೌಸಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಮೃತ ವ್ಯಕ್ತಿಯನ್ನು ಚಕ್ಕಲಿ ಪಾಂಡು ಎಂದು ಗುರುತಿಸಲಾಗಿದ್ದು, ಆತ ಆರು ತಿಂಗಳ ಮುಂಚೆ ಸಾವನ್ನಪ್ಪಿದ್ದ ಎಂದು ಅಂದಾಜಿಸಲಾಗಿದೆ. ಮೃತ ಚಕ್ಕಲಿ ಪಾಂಡು ಕೃಷಿ ಜಮೀನಿಗೆ ಸಮೀಪದ ಹಳ್ಳಿಯೊಂದರಲ್ಲಿ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Decomposed Body Found In Telugu Actor Nagarjunas Form Land

ಮೃತ ದೇಹ ಪತ್ತೆ ಆಗಿರುವ ಈ ಜಾಗವು ನಾಗಾರ್ಜುನ ಅವರಿಗೆ ಸೇರಿದ್ದು, ಸುಮಾರು 50 ಎಕರೆ ವಿಸ್ತೀರ್ಣದ ದೊಡ್ಡ ಜಾಗ ಇದಾಗಿದೆ. ಪಾಪಿರೆಡ್ಡಿಗುಡ ಹಳ್ಳಿ ಬಳಿ ಇರುವ ಈ ಸ್ಥಳ ಬಹುಸಮಯ ಖಾಲಿ ಬಿಡಲಾಗಿತ್ತು. ಇದೇ ತಿಂಗಳ ಮೊದಲ ವಾರದಲ್ಲಿ ನಾಗಾರ್ಜುನ ಪತ್ನಿ ಇಲ್ಲಿಗೆ ಬಂದು ಕೃಷಿ ಕಾರ್ಯ ಪ್ರಾರಂಭಿಸುವಂತೆ ಸೂಚಿಸಿದ್ದರು.

ಚಕ್ಕಲಿ ಪಾಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಚಕ್ಕಲಿ ಪಾಂಡು ಮನೆ ಬಿಟ್ಟು ಮೂರು ವರ್ಷಗಳೇ ಆಗಿದ್ದುವಂತೆ, ಆತ ಮಾನಸಿಕ ಅಸ್ವಸ್ಥನಾಗಿದ್ದನೆಂದು ಮನೆಯವರು ತಿಳಿಸಿದ್ದಾರೆ.

ಮೃತ ದೇಹದ ಮೇಲಿದ್ದ ಬಟ್ಟೆ ಜೇಬಿನಲ್ಲಿ ಪರ್ಸ್‌ ಒಂದು ಸಿಕ್ಕಿದ್ದು, ಅದರಲ್ಲಿ ಆಧಾರ್ ಕಾರ್ಡ್‌ ಇದ್ದಿದ್ದ ಕಾರಣ ಮೃತ ದೇಹದ ಪತ್ತೆ ಸುಲಭವಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+