ದುರ್ಬಲ ಕಾಂಗ್ರೆಸ್‌ನಿಂದ ಮುಸಲ್ಮಾನರಿಗೆ ಪ್ರಯೋಜನ ಇಲ್ಲ: ಒವೈಸಿ
Recommended Video
ಹೈದರಾಬಾದ್, ಜೂನ್ 11: ದೇಶದಲ್ಲಿ ರಾಕೀಯವಾಗಿ ದುರ್ಬಲಗೊಂಡಿರುವ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂರಿಗೆ ಪ್ರಯೋಜನ ಇಲ್ಲ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ರಾಜಕೀಯವಾಗಿ ದೇಶದಾದ್ಯಂತ ಕಾಂಗ್ರೆಸ್ ಪಕ್ಷ ದುರ್ಬಲವಾಗುತ್ತಿದೆ, ಅದಕ್ಕೆ ಮತ ನೀಡುವ ಮುನ್ನಾ ಮುಸ್ಲೀಮರು ಯೋಚನೆ ಮಾಡಬೇಕು ಎಂದು ಅಸಾದುದ್ದೀನ್ ಒವೈಸಿ ಅವರು ಹೇಳಿದರು.
ನಾವು ಹಾಕುವ ಮತ ಎಲ್ಲಿ ಹೋಗುತ್ತಿದೆ? ಏನಾಗುತ್ತಿದೆ? ಎಂದು ಚಿಂತಿಸಲು ಮುಸಲ್ಮಾನರಿಗೆ ಇದು ಸಕಾಲ ಎಂದು ಒವೈಸಿ, ಕಾಂಗ್ರೆಸ್ ಈಗ ಮೊದಲಿನಂತಿಲ್ಲ ಅದು ನೆಲೆ ಕಳೆದುಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ಮುಸಲ್ಮಾನರು ಕಾಂಗ್ರೆಸ್ ಮತ್ತು ಇತರ ಜಾತ್ಯಾತೀತ ಪಕ್ಷಗಳನ್ನು ಬಿಡಲು ಸಿದ್ಧರಿಲ್ಲ ಆದರೆ ಆ ಪಕ್ಷಗಳು ಜನರ ಆಶಯಗಳನ್ನು ಈಡೇರಿಸಲು ಸಿದ್ಧವಿಲ್ಲ ಎಂದು ಒವೈಸಿ ಅವರು ಜಾತ್ಯಾತೀತ ಪಕ್ಷಗಳನ್ನೂ ಟೀಕಿಸಿದರು.
ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಸ್ಮೀಮರ ಮತಗಳಿಂದ ಗೆದ್ದಿದ್ದಾರೆ. ವೈನಾಡಿನಲ್ಲಿ 40 ಪ್ರತಿಶತ ಮುಸ್ಲಿಂರಿದ್ದಾರೆ. ಹಾಗಾಗಿಯೇ ಅವರು ಅಲ್ಲಿ ಗೆದ್ದಿದ್ದಾರೆ ಎಂದು ಒವೈಸಿ ಹೇಳಿದ್ದಾರೆ.












Click it and Unblock the Notifications