ಪುಲ್ವಾಮಾದ ದಾಳಿ ನಡೆಸಿದವರು ಶೈತಾನನ ಸೈನಿಕರು : ಒವೈಸಿ
ಹೈದರಾಬಾದ್, ಫೆಬ್ರವರಿ 24: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಆತ್ಮಾಹುತಿ ದಾಳಿಯನ್ನು ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ಅವರು ಕಟು ಶಬ್ದಗಳಿಂದ ಖಂಡಿಸಿದ್ದಾರೆ.
ಭಾರತದ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯಲ್ಲಿ 44ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡ ಘಟನೆ ಬಗ್ಗೆ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುಲ್ವಾಮಾ ದಾಳಿ ಹಿಂದೆ ಪಾಕಿಸ್ತಾನದ ನೇರ ಕೈವಾಡವಿದ್ದು, ಅಲ್ಲಿನ ಸರ್ಕಾರ, ಪಾಕ್ ಆರ್ಮಿ ಹಾಗೂ ಐಎಸ್ಐ ಸಂಘಟನೆ ಪ್ರಕಾರ ಈ ದಾಳಿಯ ಯೋಜನೆ ನಡೆದಿದೆ. ದಾಳಿ ನಡೆಸಿರುವ ಜೈಷ್-ಎ-ಮೊಹ್ಮದ್ ಅದು ಜೈಷ್-ಎ-ಶೈತಾನ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Asaduddin Owaisi: This attack has links to Pakistan. It was done as per plan of Pakistan govt, Pakistan Army & ISI. I would like to tell the outfit that killed our 40 men & claimed its responsibility - you're not Jaish-e-Mohammed, you are Jaish-e-Shayateen. #PulwamaAttack (23.02) pic.twitter.com/IO5bkztzUC
— ANI (@ANI) February 23, 2019
ಓರ್ವ ಸೈನಿಕನಾದ ಮೊಹ್ಮದ್ ಮನುಷ್ಯರನ್ನ ಕೊಲ್ಲಲು ಸಾಧ್ಯವಿಲ್ಲ. ಆತ ಮಾನವೀಯತೆಯ ಕರುಣಾಜನಕ. ಆದರೆ ನೀವೂ ಜೈಷ್-ಎ-ಶೈತಾನ್ ಆಗಿದ್ದೀರಿ.ನೀನು ದೆವ್ವದ ಅನುಯಾಯಿ. ಪಾಕಿಸ್ತಾನದ ನರಿ ಬುದ್ಧಿ ಇದೇ ಮೊದಲೇನಲ್ಲ.ಈ ಹಿಂದೆ ಪಠಾಣ್ಕೋಟ್,ಉರಿ ಇದೀಗ ಪುಲ್ವಾಮಾ. ಪ್ರಧಾನಿ ಮೋದಿ ನಿಮ್ಮ ಮುಗ್ಧತೆಯ ಮುಖವಾಡ ತೆಗೆದು ಹೊರಹಾಕಿ ಎಂದು ವಾಗ್ದಾಳಿ ನಡೆಸಿದ್ದರು.












Click it and Unblock the Notifications