ಹೈದರಾಬಾದ್: ನೀರಿನ ಸಂಪಿಗೆ ಬಿದ್ದು 3 ವರ್ಷದ ಮಗು ದುರಂತ ಸಾವು

Posted By:
Subscribe to Oneindia Kannada

ಹೈದರಾಬಾದ್, ನವೆಂಬರ್ 14: ಮೂರು ವರ್ಷದ ಮಗುವೊಂದು ಪ್ಲೇಸ್ಕೂಲಿನ ನೀರಿನ ಸಂಪಿಗೆ ಬಿದ್ದ ಸಾವನ್ನಪ್ಪಿದ ದಾರುಣ ಘಟನೆ ಹೈದರಾಬಬಾದಿನ ಶಿವಪುರಿ ಕಾಲೊನಿಯಲ್ಲಿ ನಡೆದಿದೆ.

ಮನೆ ಮುಂದಿನ ನೀರಿನ ತೊಟ್ಟಿಗೆ ಬಿದ್ದು ಬಾಲಕಿ ಸಾವು

ಮೃತ ಮಗುವನ್ನು ರಚಿತ್ ಎಂದು ಗುರುತಿಸಲಾಗಿದೆ. ಬೆಳಿಗ್ಗೆ ರಚಿತ್ ತಂದೆ, ಮಗನನ್ನು ಪ್ಲೇಸ್ಕೂಲಿಗೆ ಬಿಟ್ಟು ಹೋಗಿದ್ದರು. ನಂತರ ಸುಮಾರು 11:30 ರ ಸುಮಾರಿಗೆ ಮಗನಿಗೆ ಊಟ ತೆಗೆದುಕೊಂಡು ಬಂದ ರಚಿತ್ ತಾಯಿಗೆ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆಂಬ ವಿಷಯ ತಿಳಿದಿದೆ.

A 3 year old Kid dies after falling into sump tank in Hyderabad

ಗಾಬರಿಕೊಂಡು ಹತ್ತಿರದ ಆಸ್ಪತ್ರೆಗೆ ತೆರಳಿದರೆ ರಚಿತ್ ಮೃತನಾಗಿದ್ದಾನೆಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ಮಲಕಂಜ್ ಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A three-year-old boy died on Nov.14th after allegedly falling into a sump tank at a children's play school in Malkajgiri's Sivapuri Colony Hyderabad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ