ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್: ನಾಪತ್ತೆಯಾಗಿದ್ದ ಒಂದೇ ಕುಟುಂಬದ ಐವರ ಶವ ಪತ್ತೆ

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 17 : ಹೈದರಾಬಾದಿನ ಕೊಲ್ಲೂರು ಬಳಿ ಒಂದೇ ಕುಟುಂಬದ ಐವರ ಶವಗಳು ಅನುಮಾನಾಸ್ಪದವಾಗಿ ಮಂಗಳವಾರ ಪತ್ತೆಯಾಗಿವೆ.

ಮೂವರು ಮಹಿಳೆಯರ ಶವಗಳು ಪೊದೆಯಲ್ಲಿ ಪತ್ತೆಯಾಗಿದ್ದು, ಇನ್ನು ಇಬ್ಬರ ಮೃತ ದೇಹಗಳು ಕಾರಿನಲ್ಲಿ ಪತ್ತೆಯಾಗಿವೆ. ಮೃತರನ್ನು ಪ್ರಭಾಕರ್ ರೆಡ್ಡಿ(40), ಪತ್ನಿ ಮಾಧವಿ(26), 4 ವರ್ಷದ ಮಗು ವರ್ಷಿತ್, ಪ್ರಭಾಕರ್ ರೆಡ್ಡಿ ಆಂಟಿ ಲಕ್ಷ್ಮೀ (47) ಮತ್ತು ಮಗಳು ಸಿಂಧುಜಾ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಇವರೆಲ್ಲರು ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ.

5 Members Of Hyderabad Family Found Dead, Including 4-Year-Old

ಅರ್ಧ ತಿಂದಿರುವ ಕೇಕ್ ಹಾಗೂ ಕಾರಿನಲ್ಲಿ ಕ್ರಿಮಿನಾಶಕ ವಾಸನೆ ಬರುತ್ತಿದ್ದು, ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಖಚಿತಪಡಿಸಿಲ್ಲ.

ಮತ್ತೊಂದೆಡೆ ಬೇರೆ ಸ್ಥಳದಲ್ಲಿ ಐವರನ್ನು ಕೊಲೆ ಮಾಡಿ ಈ ರೀತಿಯಾಗಿ ಬೇರೆ ಬೇರೆ ಕಡೆ ಎಸೆಯಲಾಗಿದೆಯೇ ಎಂಬ ಅನುಮಾನಗಳು ಸಹ ಹುಟ್ಟಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಸೈಬರಾಬಾದ್ ಪೊಲೀಸ್ ಕಮಿಷನರ್ ಸಂದೀಪ್ ಶಾಂದಿಲ್ಯ ತಿಳಿಸಿದ್ದಾರೆ.

ಮೃತರು ಎರಡು ದಿನಗಳ ಹಿಂದೆ ವಾಟರ್ ಫಾಲ್ಸ್ ನೋಡಲು ತೆರಳುವುದಾಗಿ ಸಂಬಂಧಿ ಬಳಿ ಹೇಳಿಕೊಂಡಿದ್ದರು. ಸಂಜೆ ವೇಳೆಗೆ ವಾಟರ್ ಫಾಲ್ಸ್ ನೋಡಲು ತೆರಳಿದವರ ಮೊಬೈಲ್ ಗಳು ಸ್ವಿಚ್ ಆಫ್ ಆಗಿತ್ತು.

ಇದರಿಂದ ಭಯಗೊಂಡ ಸಂಬಂಧಿ ರವೀಂದ್ರ ರೆಡ್ಡಿ ಎಂಬವರು ಸೋಮವಾರ ಸಂಜೆ ಅಮೀನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

English summary
Five dead bodies were found at Kolluru in Narsingi at two different locations on Tuesday. Though police are still investigating the case, the cause of death is suspected to be suicide pact.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X