ಹೈದರಾಬಾದ್: ಎಲಿವೇಟರ್ ಬಾಗಿಲಿಗೆ ತಲೆಸಿಕ್ಕಿ ಬಾಲಕಿ ಸಾವು

ಹೈದರಾಬಾದ್, ನವೆಂಬರ್, 17: ಎಲಿವೇಟರ್ ಬಾಗಿಲಿಗೆ ಮೂರು ವರ್ಷದ ಬಾಲಕಿ ತಲೆ ಸಿಕ್ಕಿ ಹಾಕಿಕೊಂಡ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ಹೈದರಾಬಾದಿನಲ್ಲಿ ಸಂಭವಿಸಿದೆ.

ಸೈದಾ ಜನಾಯ್ಬ್ ಸಾವನ್ನಪ್ಪಿದ ಮೂರು ವರ್ಷದ ಪುಟ್ಟ ಬಾಲಕಿ. ಈಕೆ ಹೈದರಾಬಾದಿನ ದಿಲ್ ಸುಖ್ ನಗರ ಬಳಿಯಿರುವ ಚೈತನ್ಯ ಖಾಸಗಿ ಶಾಲೆಯಲ್ಲಿ ನರ್ಸರಿ ಓದುತ್ತಿದ್ದಳು.[ಇಬ್ಬರು ದಲಿತ ಮಕ್ಕಳ ಹತ್ಯೆಗೆ ಕಾರಣವಾಗಿದ್ದೊಂದು ಮೊಬೈಲ್!]

3 Year Old Girl Dies After Getting Stuck in School Elevator in Hyderabad

ಸೈದಾ ಜನಾಯ್ಬ್ ಮತ್ತು ಇನ್ನಿತರ ವಿದ್ಯಾರ್ಥಿಗಳನ್ನು ಮೂರನೇ ಫ್ಲೋರ್ ನಿಂದ ಕೆಳಗೆ ಫ್ಲೋರ್ ನಲ್ಲಿರುವ ಶಾಲೆಗೆ ಎಲಿವೇಟರ್ ಮೂಲಕ ಕರೆದುಕೊಂಡು ಹೋಗಲು ಶಾಲಾ ಶಿಕ್ಷಕಿ ನಿರ್ಧರಿಸಿ ಅದರ ಬಳಿ ಕರೆದುಕೊಂಡು ಬಂದಿದ್ದಾರೆ.

ಬಳಿಕ ಎಲಿವೇಟರ್ ಮೂಲಕ ಹೋಗಲು ಮುಂದಾದಾಗ ಅಚಾನಕ್ಕಾಗಿ ಸೈದಾ ಜನಾಯ್ಬ್ ತಲೆ ಎಲಿವೇಟರ್ ಬಾಗಿಲಿಗೆ ಸಿಕ್ಕಿ ಹಾಕಿಕೊಂಡಿದೆ. ಎಲಿವೇಟರ್ ಆನ್ ಇದ್ದುದರಿಂದ ಅದು ತಕ್ಷಣ ಚಲಿಸಲು ಪ್ರಾರಂಭಿಸಿದೆ. ಆ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.[ಇಬ್ಬರು ಮಕ್ಕಳ ಪ್ರಾಣಕ್ಕೆ ಎರವಾದ ಮುಚ್ಚಿದ ಕಾರಿನ ಬಾಗಿಲು]

ಈಗಾಗಲೇ ಈ ಪ್ರಕರಣವನ್ನು ಹೈದರಾಬಾದ್ ಪೊಲೀಸರು ಕೈಗೆತ್ತಿಕೊಂಡಿದ್ದು, ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ ಎಂದು ಹೈದರಾಬಾದ್ ಡೆಪ್ಯೂಟಿ ಕಮೀಷನರ್ ವಿ. ರವೀಂದ್ರ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+