ತೆಲಂಗಾಣದಲ್ಲಿ ಕೊಳವೆ ಬಾವಿಗೆ ಬಿದ್ದ 18 ತಿಂಗಳ ಮಗು
ತೆಲಂಗಾಣ, ಜೂನ್ 23: ಹಲವು ಕೊಳವೆ ಬಾವಿ ದುರಂತಗಳ ನಂತರವೂ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ. ತೆಲಂಗಾಣದಲ್ಲಿ 18 ತಿಂಗಳ ಮಗುವೊಂದು ಕೊಳವೆ ಬಾವಿಗೆ ಬಿದ್ದಿದೆ. ಗುರುವಾರ ಮಗು 40 ಅಡಿಯ ಕೊಳವೆ ಬಾವಿಗೆ ಬಿದ್ದಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ.
ತೆಲಂಗಾಣದ ವಿಕಾರಾಬಾದ್ ನಲ್ಲಿದ್ದ ತೆರೆದ ಕೊಳವೆ ಬಾವಿಗೆ ಈ ಮಗು ಬಿದ್ದಿದೆ. ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಅಧಿಕಾರಿಗಳು ಆಗಮಿಸಿದ್ದು ಮಗುವನ್ನು ರಕ್ಷಿಸಲು ಹರ ಸಾಹಸ ಪಡುತ್ತಿದ್ದಾರೆ.

ಇತ್ತೀಚೆಗೆ ಬೆಳಗಾವಿಯ ಅಥಣಿಯ ಝಂಝರವಾಡ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಯೊಳಗೆ 6 ವರ್ಷದ ಕಂದಮ್ಮ ಕಾವೇರಿ ಬಿದ್ದಿದ್ದಳು. ಎರಡು ದಿನಗಳ ನಿರಂತರ ಕಾರ್ಯಾಚರಣೆ ನಂತರವೂ ಕಾವೇರಿಯನ್ನು ಹೊರ ತೆಗೆಯಲು ಸಾಧ್ಯವಾಗಿರಲಿಲ್ಲ.

ಇದೀಗ ಅಂಥಹದ್ದೇ ದುರಂತ ಪಕ್ಕದ ತೆಲಂಗಾಣದಲ್ಲಿ ನಡೆದಿದೆ.












Click it and Unblock the Notifications