ಲಾಕ್‌ಡೌನ್: ಮನೆಗೆ ಬಂದಿದ್ದ ಮಗಳ ಮೇಲೆ ತಂದೆಯಿಂದ ಅತ್ಯಾಚಾರ
ಹೈದರಾಬಾದ್, ಜೂನ್ 1: ಲಾಕ್‌ಡೌನ್ ಎಂದು ಮನೆಗೆ ಬಂದಿದ್ದ 13 ವರ್ಷದ ಮಗಳ ಮೇಲೆ ತಂದೆಯೇ ಅತ್ಯಾಚಾರವೆಸಗಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ.
Recommended Video
ಆರೋಪಿ ಇದುವರೆಗೆ ನಾಲ್ಕು ಮದುವೆಯಾಗಿದ್ದಾನೆ. ಇದೀಗ ಕೆಲವು ದಿನಗಳಿಂದ ಮಗಳ ಮೇಲೂ ಕಣ್ಣು ಹಾಕಿದ್ದ. ಬಲವಂತವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಲ್ಲದೆ ವಿಷಯ ಹೊರಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಎರಡು ತಿಂಗಳ ಬಳಿಕ ವಿಷಯ ಅರಿತ ಮಲತಾಯಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಮಾರ್ಚ್‌ನಲ್ಲಿ ಕೊರೊನಾ ಲಾಕ್‌ಡೌನ್ ಎದುರಾದ ಕಾರಣ ಎಲ್ಲಾ ಶಿಕ್ಷಣ ಸಂಸ್ಥೆಗಳು ಬಾಗಿಲು ಮುಚ್ಚಿದ್ದವು. ಹಾಗಾಗಿ ಆಕೆ ಮನೆಗೆ ಬಂದಿದ್ದಳು.

ಯಾರಿಗೂ ವಿಷಯ ಹೇಳದಂತೆ ಆತ ಪ್ರಾಣ ಬೆದರಿಕೆ ಒಡ್ಡಿದ್ದ. ಈತನ ಕೃತ್ಯ ಮನೆಯಲ್ಲಿ ಯಾರಿಗೂ ತಿಳಿದಿರಲಿಲ್ಲ. ಮನೆಯಲ್ಲಿ ನಡೆದ ಹಬ್ಬದ ದಿನದಂದೂ ಕೂಡ ಆತ ಅತ್ಯಾಚಾರವೆಸಗಿದ್ದ , ಬಳಿಕ ಮಲತಾಯಿ ಬಳಿ ಹೋಗಿ ಆಕೆ ನಡೆದುದ್ದೆಲ್ಲವನ್ನೂ ವಿವರಿಸಿದ್ದಾಳೆ.
ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಕರಣಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 37 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತ ನಾಲ್ಕು ಮದುವೆಯಾಗಿದ್ದು ಮೊದಲು ಹಾಗೂ ಎರಡನೆಯ ಹೆಂಡತಿಗೆ ವಿಚ್ಛೇದನ ನೀಡಿದ್ದ, ಮೂರನೇ ಹೆಂಡತಿ ತೀರಿಕೊಂಡಿದ್ದಳು.ಮಗಳು ಬೇರೆ ಜಿಲ್ಲೆಯಲ್ಲಿ ಧಾರ್ಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.












Click it and Unblock the Notifications