Get Updates
Get notified of breaking news, exclusive insights, and must-see stories!

ರಾಜ್ಯದ ಈ ಭಾಗದಲ್ಲಿ ರೈಲು ಸೇವೆ ತಾತ್ಕಾಲಿಕ ಬದಲಾವಣೆ!

ರಾಜ್ಯದ ಈ ಜಿಲ್ಲೆಯಲ್ಲಿ ರೈಲುಗಳ ಸೇವೆಯಲ್ಲಿ ಕೆಲವೊಂದು ಪ್ರಮುಖ ಹಾಗೂ ತಾತ್ಕಾಲಿಕ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಕ್ಯಾಸಲ್ ರಾಕ್ ಮತ್ತು ಕುಲೆಮ್ ನಿಲ್ದಾಣಗಳ ನಡುವೆ ನಡೆಯುತ್ತಿರುವ ರೈಲ್ವೆ ಕಾಮಗಾರಿಗಳ ವಿಸ್ತರಣೆಯ ಹಿನ್ನೆಲೆಯಲ್ಲಿ, ಈ ಕೆಳಗಿನ ರೈಲುಗಳ ಸಂಚಾರದಲ್ಲಿ ಭಾಗಶಃ ರದ್ದತಿ ಮತ್ತು ಮಾರ್ಗ ಬದಲಾವಣೆ ಮಾಡಲಾಗಿದೆ. ಅವು ಯಾವುದು ಹಾಗೂ ಯಾವ ಮಾರ್ಗದ ರೈಲು ಸಂಚಾರದಲ್ಲಿ ಬದಲಾವಣೆ ಆಗಲಿದೆ ಎನ್ನುವ ವಿವರ ಇಲ್ಲಿದೆ.

ನೈರುತ್ಯ ರೈಲ್ವೆಯು ಹುಬ್ಬಳ್ಳಿ ಮಾರ್ಗವಾಗಿ ಹೊರಡುವ ಕೆಲವು ಪ್ರಮುಖ ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಿದೆ. ಅದೇನು ಎನ್ನುವ ವಿವರ ನೋಡೋಣ.

Temporary Change in Train Service in This Part of Karnataka

1. ಏಪ್ರಿಲ್ 17, 19, 21, 22, 24, 26 ಮತ್ತು 28, 2025 ರಂದು ಶಾಲಿಮಾರ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 18047 ಶಾಲಿಮಾರ್-ವಾಸ್ಕೋ ಡ ಗಾಮಾ ಅಮರಾವತಿ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿವರೆಗೆ ಮಾತ್ರ ಸಂಚರಿಸಲಿದ್ದು, ಹುಬ್ಬಳ್ಳಿ-ವಾಸ್ಕೋ ಡ ಗಾಮಾ ನಡುವಿನ ಸಂಚಾರ ರದ್ದಾಗಿದೆ.

2. ಏಪ್ರಿಲ್ 20, 22, 24, 25, 27, 29 ಮತ್ತು ಮೇ 1, 2025 ರಂದು ರೈಲು ಸಂಖ್ಯೆ 18048 ವಾಸ್ಕೋ ಡ ಗಾಮಾ - ಶಾಲಿಮಾರ್ ಅಮರಾವತಿ ಎಕ್ಸ್ ಪ್ರೆಸ್ ರೈಲು ವಾಸ್ಕೋ ಡ ಗಾಮಾ ಬದಲು ಹುಬ್ಬಳ್ಳಿಯಿಂದ ಹೊರಡಲಿದ್ದು, ವಾಸ್ಕೋ ಡ ಗಾಮಾ ಮತ್ತು ಹುಬ್ಬಳ್ಳಿ ನಡುವಿನ ಸಂಚಾರ ರದ್ದಾಗಿದೆ.

3. ಏಪ್ರಿಲ್ 17 ಮತ್ತು 24, 2025 ರಂದು ತನ್ನ ಮೂಲ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17419/17021 ತಿರುಪತಿ/ಹೈದರಾಬಾದ್- ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿವರೆಗೆ ಮಾತ್ರ ಸಂಚರಿಸಲಿದ್ದು, ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮಾ ನಡುವೆ ಭಾಗಶಃ ರದ್ದುಗೊಂಡಿದೆ.

4. ಏಪ್ರಿಲ್ 18 ಮತ್ತು 25, 2025 ರಂದು ರೈಲು ಸಂಖ್ಯೆ 17420/17022 ವಾಸ್ಕೋ ಡ ಗಾಮಾ- ತಿರುಪತಿ/ಹೈದರಾಬಾದ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ವಾಸ್ಕೋ ಡ ಗಾಮಾ ಬದಲು ಹುಬ್ಬಳ್ಳಿಯಿಂದ ಹೊರಡಲಿದ್ದು, ವಾಸ್ಕೋ ಡ ಗಾಮಾ ಮತ್ತು ಹುಬ್ಬಳ್ಳಿ ನಡುವಿನ ಸಂಚಾರ ರದ್ದಾಗಿದೆ.

5. ಏಪ್ರಿಲ್ 18, 23 ಮತ್ತು 25, 2025 ರಂದು ಸಿಕಂದರಾಬಾದ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17039 ಸಿಕಂದರಾಬಾದ್-ವಾಸ್ಕೋ ಡ ಗಾಮಾ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿವರೆಗೆ ಮಾತ್ರ ಸಂಚರಿಸಲಿದ್ದು, ಹುಬ್ಬಳ್ಳಿ-ವಾಸ್ಕೋ ಡ ಗಾಮಾ ನಡುವಿನ ಸಂಚಾರ ರದ್ದಾಗಿದೆ.

6. ಏಪ್ರಿಲ್ 19, 24 ಮತ್ತು 26, 2025 ರಂದು ರೈಲು ಸಂಖ್ಯೆ 17040 ವಾಸ್ಕೋ ಡ ಗಾಮಾ - ಸಿಕಂದರಾಬಾದ್ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ವಾಸ್ಕೋ ಡ ಗಾಮಾ ಬದಲು ಹುಬ್ಬಳ್ಳಿಯಿಂದ ಹೊರಡಲಿದ್ದು, ವಾಸ್ಕೋ ಡ ಗಾಮಾ ಮತ್ತು ಹುಬ್ಬಳ್ಳಿ ನಡುವಿನ ಸಂಚಾರ ರದ್ದಾಗಿದೆ.

ರೈಲುಗಳ ಮಾರ್ಗ ಬದಲಾವಣೆ

1. ಏಪ್ರಿಲ್ 19 ಮತ್ತು 26, 2025 ರಂದು ಪುಣೆಯಿಂದ ಹೊರಡುವ ರೈಲು ಸಂಖ್ಯೆ 11097 ಪುಣೆ-ಎರ್ನಾಕುಲಂ ಪೂರ್ಣ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸತಾರಾ ಮತ್ತು ಸ್ಯಾನ್ವೊರ್ಡೆಮ್ ನಡುವಿನ ನಿಲುಗಡೆಯನ್ನು ಬಿಟ್ಟು ಪುಣೆ, ಪನ್ವೇಲ್, ರೋಹಾ ಮತ್ತು ಮಡಗಾಂವ್ ಮಾರ್ಗವಾಗಿ ಸಂಚರಿಸಲಿದೆ.

2. ಏಪ್ರಿಲ್ 21 ಮತ್ತು 28, 2025 ರಂದು ಎರ್ನಾಕುಲಂ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 11098 ಎರ್ನಾಕುಲಂ-ಪುಣೆ ಪೂರ್ಣ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸ್ಯಾನ್ವೊರ್ಡೆಮ್ ಮತ್ತು ಸತಾರಾ ನಡುವಿನ ನಿಲುಗಡೆಯನ್ನು ಬಿಟ್ಟು ಮಡಗಾಂವ್, ರೋಹಾ, ಪನ್ವೇಲ್ ಮತ್ತು ಪುಣೆ ಮಾರ್ಗವಾಗಿ ಚಲಿಸಲಿದೆ.

3. ಏಪ್ರಿಲ್ 21 ಮತ್ತು 28, 2025 ರಂದು ವಾಸ್ಕೋ ಡ ಗಾಮಾದಿಂದ ಹೊರಡುವ ರೈಲು ಸಂಖ್ಯೆ 17315 ವಾಸ್ಕೋ ಡ ಗಾಮಾ - ವೇಲಾಂಕಣಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸ್ಯಾನ್ವೊರ್ಡೆಮ್ ಮತ್ತು ಸೇಲಂ ನಡುವಿನ ನಿಲುಗಡೆಯನ್ನು ಬಿಟ್ಟು ಮಡಗಾಂವ್, ಮಂಗಳೂರು ಜಂಕ್ಷನ್, ಶೋರನೂರ್ ಮತ್ತು ಈರೋಡ್ ಮಾರ್ಗವಾಗಿ ಚಲಿಸಲಿದೆ.

4. ಏಪ್ರಿಲ್ 22 ಮತ್ತು 29, 2025 ರಂದು ವೇಲಾಂಕಣಿಯಿಂದ ಹೊರಡುವ ರೈಲು ಸಂಖ್ಯೆ 17316 ವೇಲಾಂಕಣಿ-ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸೇಲಂ ಮತ್ತು ಸ್ಯಾನ್ವೊರ್ಡೆಮ್ ನಡುವಿನ ನಿಲುಗಡೆಯನ್ನು ಬಿಟ್ಟು ಈರೋಡ್, ಶೋರನೂರು, ಮಂಗಳೂರು ಜಂಕ್ಷನ್ ಮತ್ತು ಮಡಗಾಂವ್ ಮಾರ್ಗವಾಗಿ ಚಲಿಸಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+