ರಾಹುಲ್ ಗಾಂಧಿ, ಕುಮಾರಸ್ವಾಮಿ ಜೋಕರ್ಸ್ ಎಂದ ಬೊಮ್ಮಾಯಿ!

Recommended Video

      ಎಚ್ ಡಿ ಕೆ ಹಾಗು ರಾಹುಲ್ ಗಾಂಧಿಯನ್ನ ಲೇವಡಿ ಮಾಡಿದ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ

      ಹುಬ್ಬಳ್ಳಿ, ಏಪ್ರಿಲ್ 19: "ಯಾರು ನಾಯಕರು, ಯಾರು ಜೋಕರ್ ಗಳು ಎಂಬುದನ್ನು ಮತದಾರರು ನಿರ್ಧರಿಸಲಿದ್ದಾರೆ" ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜೋಕರ್ ಗಳು ಎಂದು ಪರೋಕ್ಷವಾಗಿ ಲೇವಡಿ ಮಾಡಿದ್ದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ, "ಅವರು(ರಾಹುಲ್ ಗಾಂಧಿ ಮತ್ತು ಎಚ್ ಡಿ ಕುಮಾರಸ್ವಾಮಿ) ತಮ್ಮ ಬಗ್ಗೆಯೇ ಹಾಸ್ಯ ಮಾಡಿಕೊಂಡು ಮಾತನಾಡುವುದು ಮತ್ತು ಅವರ ವರ್ತನೆಗಳನ್ನು ನೋಡಿದರೆ ಹೀರೋ ಯಾರು, ಜೋಕರ್ ಯಾರು ಎಂಬುದನ್ನು ಜನರೇ ನಿರ್ಧರಿಸುತ್ತಾರೆ" ಎಂದು ಬೊಮ್ಮಾಯಿ ಹೇಳಿದರು.

      ಲಿಂಗಾಯತ ವಿವಾದವನ್ನು ಕಾಂಗ್ರೆಸ್ ಪಕ್ಷ, ಬ್ರಿಟಿಶರ ಒಡೆದು ಆಳುವ ನೀತಿಯಂತೆ ಬಳಸಿಕೊಳ್ಳಲು ಪ್ರಯತ್ನಿಸಿದೆ ಎಂದು ಅವರು ದೂರಿದರು.

      Rahul Gandhi and HD Kumaraswamy are jokers: Basavaraj Bommai

      ಲಿಂಗಾಯತ ವಿವಾದವನ್ನು ಕಾಂಗ್ರೆಸ್ ಪಕ್ಷ ಚುನಾವಣೆಯ ಗಿಮಿಕ್ ನಂತೆ ಬಳಸಿಕೊಂಡಿತ್ತು. ಆದರೆ ತನ್ನ ಪ್ರಯತ್ನದಲ್ಲಿ ಅದು ಸೋತಿತು. ಇದೀಗ ಲಿಂಗಾಯತ ವಿಷಯಕ್ಕಾಗಿಯೇ ಕಾಂಗ್ರೆಸ್ ನಲ್ಲಿ ಎರಡು ಪಂಗಡಗಳಾಗಿವೆ. ಒಂದು ಕಡೆ ಡಿಕೆ ಶಿವಕುಮಾರ್ ಅವರು ಲಿಂಗಾಯತ ಧರ್ಮವನ್ನು ಕಾಂಗ್ರೆಸ್ ಒಡೆದಿದ್ದಕ್ಕೆ ಕ್ಷಮೆ ಕೇಳಿದರೆ, ಎಂಬಿ ಪಾಟೀಲ್ ಅವರು ತಾವು ಕ್ಷಮೆ ಕೇಳೋಲ್ಲ ಎನ್ನುತ್ತಿದ್ದಾರೆ ಎಂದು ಅವರು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+