ಪ್ರಯಾಣಿಕರೇ ಗಮನಿಸಿ: ಡಿಸೆಂಬರ್‌ 14ರಂದು ಈ ರೈಲುಗಳ ಸಂಚಾರ ಭಾಗಶಃ ರದ್ದು

ಹುಬ್ಬಳ್ಳಿ, ಡಿಸೆಂಬರ್‌ 12: ಎಸ್ಎಸ್ಎಸ್ ಹುಬ್ಬಳ್ಳಿ-ಅರಸೀಕೆರೆ ಡೈಲಿ ಎಕ್ಸ್ ಪ್ರೆಸ್ ರೈಲು, ಅರಸೀಕೆರೆ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಹಾಗೂ ಬೆಳಗಾವಿ-ಮಣುಗೂರು ನಿಲ್ದಾಣಗಳ ನಡುವಿನ ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರು ಓದಲೇಬೇಕಾದ ಸುದ್ದಿ ಇಲ್ಲಿದೆ.

ಇದೇ ಶನಿವಾರ ಅಂದರೆ ಡಿಸೆಂಬರ್ 14 ರಂದು ಅರಸೀಕೆರೆ ನಿಲ್ದಾಣದ ಯಾರ್ಡ್ ನಲ್ಲಿ ಸುರಕ್ಷತೆ ಮತ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ, ಈ ಕೆಳಗಿನ ರೈಲುಗಳ ಸಂಚಾರ ಭಾಗಶಃ ರದ್ದಾಗುವ ಸಾಧ್ಯತೆ ಇದೆ. ಇಲ್ಲದೇ ಹೋದರೆ ನಿಯಂತ್ರಣಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಪ್ರಯಾಣಿಕರು ಗಮನಿಸಬೇಕಾಗಿದೆ.

Partial Train Cancellation In Hubballi On December 14th And 15th

ಭಾಗಶಃ ರದ್ದಾಗುವ ರೈಲುಗಳ ವಿವರ

1. ರೈಲು ಸಂಖ್ಯೆ 16214 ಎಸ್ಎಸ್ಎಸ್ ಹುಬ್ಬಳ್ಳಿ-ಅರಸೀಕೆರೆ ಡೈಲಿ ಎಕ್ಸ್ ಪ್ರೆಸ್ ರೈಲು ಶನಿವಾರ ಡಿಸೆಂಬರ್ 14ರಂದು ಬೀರೂರು-ಅರಸೀಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಬೀರೂರಿನಲ್ಲಿ ಕೊನೆಗೊಳ್ಳುತ್ತದೆ.

2. ರೈಲು ಸಂಖ್ಯೆ 16213 ಅರಸೀಕೆರೆ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಡಿಸೆಂಬರ್ 15 ರಂದು ಅರಸೀಕೆರೆ-ಬೀರೂರು ನಿಲ್ದಾಣಗಳ ನಡುವೆ ಭಾಗಶ: ರದ್ದಾಗಲಿದೆ. ಈ ರೈಲು ಅರಸೀಕೆರೆ ನಿಲ್ದಾಣದ ಬದಲು ಬೀರೂರಿನಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.

ರೈಲುಗಳ ನಿಯಂತ್ರಣ ವಿವರ

ಇನ್ನು ಡಿಸೆಂಬರ್ 14ರಂದು ತಮ್ಮ ಮೂಲ ನಿಲ್ದಾಣದಿಂದ ಹೊರಡುವ ರೈಲುಗಳ ಸಂಖ್ಯೆ 16545 ಯಶವಂತಪುರ-ಸಿಂಧನೂರು ಡೈಲಿ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯ 30 ನಿಮಿಷಗಳವರೆಗೆ ಮತ್ತು ರೈಲು ಸಂಖ್ಯೆ 20653 ಬೆಂಗಳೂರು-ಬೆಳಗಾವಿ ಡೈಲಿ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯ 20 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಬೆಳಗಾವಿ-ಮಣುಗೂರು ನಿಲ್ದಾಣಗಳ ನಡುವಿನ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ ರದ್ದು

ಹುಬ್ಬಳ್ಳಿ: ಬೆಳಗಾವಿ ಮತ್ತು ಮಣುಗೂರು ನಿಲ್ದಾಣಗಳ ನಡುವೆ ವಾರದಲ್ಲಿ ನಾಲ್ಕು ದಿನ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 07335/07336) ರೈಲು ಸೇವೆ ಕಾರ್ಯಾಚರಣೆಯ ಕಾರಣಗಳಿಂದಾಗಿ ಮುಂದಿನ ಸೂಚನೆವರೆಗೆ ರದ್ದುಪಡಿಸಲಾಗುತ್ತಿದೆ.

1. ಡಿಸೆಂಬರ್ 18, 2024ರಿಂದ ಮುಂದಿನ ಆದೇಶದವರೆಗೆ ಬೆಳಗಾವಿಯಿಂದ ಮಣುಗೂರು ನಿಲ್ದಾಣದವರೆಗೆ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ (07335) ರೈಲು ಸಂಚಾರ ರದ್ದುಪಡಿಸಲಾಗಿದೆ.

2. ಡಿಸೆಂಬರ್ 19, 2024ರಿಂದ ಮುಂದಿನ ಆದೇಶದವರೆಗೆ ಮಣುಗೂರುದಿಂದ ಬೆಳಗಾವಿ ತನಕ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ (07336) ರೈಲು ಸಂಚಾರ ರದ್ದುಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

This is an AI generated aticle image through WISE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+