ಗೌಪ್ಯ ಮತದಾನಕ್ಕೆ ಕಳಂಕ: ಮತ ಹಾಕುವ ಫೋಟೋಗಳು ವೈರಲ್
ಧಾರವಾಡ, ಮೇ 10: ಪಕ್ಷೇತರ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂಬುದನ್ನು ಖಾತ್ರಿ ಪಡಿಸಲು ಬೆಂಬಲಿಗನೊಬ್ಬ ಮತ ಹಾಕುವ ವೇಳೆ ತೆಗೆದುಕೊಂಡಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುಂದಗೋಳ ವಿಧಾನಸಭಾ ಕ್ಷೇತ್ರದ ಮತದಾರೊಬ್ಬರು ಮತ ಹಾಕಿದ ಫೋಟೊ ತೆಗೆದುಕೊಂಡಿದ್ದು, ಮತಗಟ್ಟೆ ಕೇಂದ್ರಕ್ಕೆ ಮೊಬೈಲ್, ಕ್ಯಾಮೆರಾ ತೆಗೆದುಕೊಂಡು ಹೋಗಲು ನಿರ್ಬಂಧವಿದೆ. ಆದರೂ ಚುನಾವಣಾ ಸಿಬ್ಬಂದಿ ಕಣ್ತಪ್ಪಿಸಿ, ಮೊಬೈಲ್ ತೆಗೆದುಕೊಂಡು ಹೋಗಿ, ಕ್ರಮ ಸಂಖ್ಯೆ 14 ರಲ್ಲಿರುವ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಪಕ್ಷೇತರ ಅಭ್ಯರ್ಥಿಗೆ ಮತ ಹಾಕುತ್ತಿರುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.

ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸದ್ಯ ಫೋಟೋ ವೈರಲ್ ಆಗುತ್ತಿದ್ದು, ಮತದಾನ ಮಾಡಿ ಫೋಟೋ ಹರಿಬಿಟ್ಟಿದ್ದು ಯಾರೆಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ.
ಮತದಾನ ಮಾಡಿ ಫೋಟೋ ಕ್ಲಿಕ್ಕಿಸಿದ ಮತದಾರ
ಚಿತ್ರದುರ್ಗ: ಮತದಾನ ಕೇಂದ್ರ ಒಳಗಡೆ ಮೊಬೈಲ್ ಫೋನ್ ನಿಷೇಧ ಮಾಡಿದ್ದರೂ ಚುನಾವಣಾ ಅಧಿಕಾರಿಗಳ ಕಣ್ತಪ್ಪಿಸಿ, ಮತದಾರನೊಬ್ಬ ಮತಗಟ್ಟೆಗೆ ಯೊಳಗೆ ತೆರಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಮೊಬೈಲ್‌ನಿಂದ ಪೋಟೋ ಕ್ಲಿಕ್ಕಿಸಿದ್ದಾನೆ. ಈ ಮೂಲಕ ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎನ್ನುವುದನ್ನು ಖಾತ್ರಿ ಪಡಿಸಿದ್ದಾನೆ.
ಮತ ಹಾವುದನ್ನು ಫೋಟೋ ತೆಗೆದಿರುವ ವ್ಯಕ್ತಿ ನಮ್ಮ ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ ರಘುಮೂರ್ತಿ ಅವರಿಗೆ ಅಮೂಲ್ಯವಾದ ಮತ ನೀಡಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಈ ಫೋಟೋ ಎಲ್ಲೆಡೆ ವೈರಲ್ ಆಗಿದೆ.












Click it and Unblock the Notifications