Karnataka Election 2023 Polling Live: 224 ಕ್ಷೇತ್ರಗಳಲ್ಲಿ ಮತದಾನದ ಅವಧಿ ಅಂತ್ಯ
224
ಕ್ಷೇತ್ರಗಳಲ್ಲಿ ಮತದಾನದ ಅವಧಿ ಅಂತ್ಯಗೊಂಡಿದೆ. ಬಹುತೇಕ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದೆ. ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತಿರುವವರಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗುತ್ತಿದೆ. ಸಂಜೆ 5ರವರೆಗೆ ಶೇ.65.69ರಷ್ಟು ಮತದಾನ ಆಗಿದೆ. ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆದಿದೆ. id="toptextpromo">
ಒಂದು ತಿಂಗಳಿನಿಂದ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳನ್ನು ಮತದಾರರು ಸೂಕ್ಷ್ಮವಾಗಿ ಗಮನಿಸಿದ್ದರು. ನಾಯಕರ ಕೆಸರೆರೆಚಾಟ, ಅಭಿವೃದ್ಧಿಯ ಆಶ್ವಾಸನೆ, ಉಚಿತ ಉಡುಗೊರೆಗಳ ಘೋಷಣೆ ಮಹಾಪೂರವನ್ನು ಅಳೆದು ತೂಗಿ ಮತದಾರ ತನ್ನ ಆಯ್ಕೆಯನ್ನು ಮಾಡಿದ್ದಾನೆ. ಮತದಾರನ ತೀರ್ಪು ಈಗ ಮತಯಂತ್ರದಲ್ಲಿ ಭದ್ರವಾಗಿದ್ದು, ಮತದಾರನ ಮನದಾಳ ಏನು ಎನ್ನುವುದು ಮೇ 13ರಂದು ತಿಳಿಯಲಿದೆ.
ರಾಜ್ಯದಲ್ಲಿ ಒಟ್ಟಾರೆ ಶೇಕಡಾ 65.69 ರಷ್ಟು ಮತದಾನವಾಗಿದೆ. ಬೆಂಗಳೂರಿನ ಸಿವಿ ರಾಮನ್ ನಗರ ಕ್ಷೇತ್ರದಲ್ಲಿ ಶೇಕಡಾ 42.1 ರಷ್ಟು ಮತದಾನವಾಗಿದ್ದು ರಾಜ್ಯದಲ್ಲೇ ಕನಿಷ್ಠ ಮತದಾನ ಪ್ರಮಾಣ ದಾಖಲಾದ ಕ್ಷೇತ್ರ ಎನಿಸಿಕೊಂಡಿದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇ. 90.86 ರಷ್ಟು ಮತದಾನವಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಮತದಾನ ಪ್ರಮಾಣ ದಾಖಲಾದ ಕ್ಷೇತ್ರ ಎನಿಸಿಕೊಂಡಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು ಶೇ. 81.58 ರಷ್ಟು ಮತದಾನವಾಗಿದೆ. ಚಾಮರಾಜನಗರದಲ್ಲಿ ಶೇ. 82.38, ಗುಂಡ್ಲುಪೇಟೆ ಶೇ. 86.84, ಹನೂರು ಶೇ. 80.02 ಮತ್ತು ಕೊಳ್ಳೆಗಾಲದಲ್ಲಿ ಶೇ. 77.22 ರಷ್ಟು ಪ್ರಮಾಣದಲ್ಲಿ ಮತದಾನವಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.78.10 ರಷ್ಟು ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಶೇ. 72.21, ತರೀಕೆರೆ ಶೇ. 78.21, ಕಡೂರು ಶೇ. 80.88, ಶೃಂಗೇರಿ ಶೇ. 81.79, ಮೂಡಿಗೆರೆಯಲ್ಲಿ ಶೇ. 77.47 ರಷ್ಟು ಮತದಾನವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ಬಾರಿ ಶೇಕಡಾ 54.53 ರಷ್ಟು ಮತದಾನವಾಗಿದೆ. ಬೆಂಗಳೂರು ಕೇಂದ್ರ ಜಿಲ್ಲೆಯಲ್ಲಿ 55.63 % ರಷ್ಟು ಮತದಾನವಾಗಿದ್ದು, ಬೆಂಗಳೂರು ಉತ್ತರ ಜಿಲ್ಲೆಯಲ್ಲಿ 53.03 %, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 52.28 %, ಬೆಂಗಳೂರು ನಗರದಲ್ಲಿ 57.17 % ರಷ್ಟು ಮತದಾನವಾಗಿದೆ.
Ramesh Jarkiholi: DK Shivakumar ಎಷ್ಟೇ ಬ್ಲ್ಯಾಕ್ಮೇಲ್ ಮಾಡಿದ್ರು ಜನರ ಆಶಿರ್ವಾದ ನನ್ನ ಮೇಲೆ ಇದೆ.
CD ಬಿಡುಗಡೆ ಮಾಡ್ತೇನಿ ಎಂದು ಡಿಕೆ ಶಿವಕುಮಾರ್ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ.
ಎಬಿಪಿ ನ್ಯೂಸ್-ಸಿವೋಟರ್
ಎಬಿಪಿ ನ್ಯೂಸ್-ಸಿವೋಟರ್ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ. ಸಮೀಕ್ಷೆ ಪ್ರಕಾರ ಕಾಂಗ್ರೆಸ್ 81ರಿಂದ 101 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನೂ ಬಿಜೆಪಿ 66 ರಿಂದ 86 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದ್ದರೆ, ಜೆಡಿಎಸ್ 20ರಿಂದ 27 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ.
ಟೈಮ್ಸ್ ನೌ ಚುನಾವಣೋತ್ತರ ಸಮೀಕ್ಷೆ
ಟೈಮ್ಸ್ ನೌ ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಸಮೀಕ್ಷೆ ಪ್ರಕಾರ ಕಾಂಗ್ರೆಸ್ +113 ಹಾಗೂ ಬಿಜೆಪಿಗೆ - 85, ಜೆಡಿಎಸ್‌ಗೆ +23, ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಅಂತಿಮ ಫಲಿತಾಂಶ ಮೇ 13ರಂದು ಹೊರಬೀಳಲಿದೆ.
ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್
ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯವಾಗುತ್ತಿದ್ದಂತೆ ಕಾಂಗ್ರೆಸ್ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಲಿದ್ದು, 140 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೇ 13 ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ.
Congress will win with a very big margin, and will get at 140 seats Karnataka Congress leader Dinesh Gundu Rao as voting in Assembly elections conclude
— ANI (@ANI) May 10, 2023
Counting of votes in Karnataka Assembly elections on 13th May. pic.twitter.com/ndHEVJIkEe
ಇವಿಎಂಗಳನ್ನು ಸೀಲ್ ಮಾಡಿದ ಚುನಾವಣಾ ಅಧಿಕಾರಿಗಳು
ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ ಬೆಂಗಳೂರಿನ ಮತಗಟ್ಟೆಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಸೀಲ್ ಮಾಡಿ ಭದ್ರಪಡಿಸಲಾಗುತ್ತಿದೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ.
#WATCH | EVMs and VVPATs being sealed and secured at polling booths in Bengaluru as voting in the Karnataka Assembly elections concludes
— ANI (@ANI) May 10, 2023
Counting of votes on 13th May. pic.twitter.com/WbVAH8HTnC
ಟಿ.ವಿ 9 ಮತ್ತು ಸಿ ವೋಟರ್ ಚುನಾವಣೋತ್ತರ ಸಮೀಕ್ಷೆ
ಟಿ.ವಿ 9 ಮತ್ತು ಸಿ ವೋಟರ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 100-112 ಸ್ಥಾನಗಳನ್ನು ಪಡೆದಿದ್ದರೆ, ಬಿಜೆಪಿ 83-95 ಸ್ಥಾನಗಳನ್ನು ಪಡೆದಿದೆ ಇನ್ನು ಜೆಡಿಎಸ್ 21-29 ಸ್ಥಾನಗಳನ್ನು ಪಡೆದಿದ್ದು, ಇತರರು 02-06 ಸ್ಥಾನಗಳನ್ನು ಪಡೆಯಲಿದೆ ಎಂದು ಟಿವಿ 9 ಮತ್ತು ಸಿ ವೋಟರ್ ಚುನಾವಣೋತ್ತರ ಸಮೀಕ್ಷೆಯಲ್ಲಿ ತಿಳಿಸಿದೆ.
ಝೀ ನ್ಯೂಸ್ ಸಮೀಕ್ಷೆ ಫಲಿತಾಂಶ ಪ್ರಕಟ
ಕಾಂಗ್ರೆಸ್‌ಗೆ 103ರಿಂದ 118 ಸ್ಥಾನಗಳು ಬರಲಿವೆ ಎಂದು ಝೀ ನ್ಯೂಸ್ ಸಮೀಕ್ಷೆ ತಿಳಿಸಿದ್ದು, ಸ್ಪಷ್ಟ ಬಹುಮತದತ್ತ ಸಾಗಲಿದೆ ಎಂದು ಹೇಳಲಾಗಿದೆ. ಇನ್ನು ಬಿಜೆಪಿ ಪಕ್ಷ 79ರಿಂದ 94 ಸ್ಥಾನಗಳನ್ನು ಮಾತ್ರ ಗಳಿಸಲಿದೆ. ಇನ್ನು ಜೆಡಿಎಸ್ 25ರಿಂದ 33 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಲಿದೆ. ಅಲ್ಲದೇ ಪಕ್ಷೇತರರು 2ರಿಂದ 5 ಸ್ಥಾನಗಳಲ್ಲಿ ಜಯ ಗಳಿಸಲಿದ್ದಾರೆ.
ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟ
India Today-Axis My India ನಡೆಸಿದ ಕರ್ನಾಟಕ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಮಧ್ಯ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ 41, ಬಿಜೆಪಿ 35, ಜೆಡಿಎಸ್ 17, ಇತರರು 7 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ಅಂದಾಜಿಸಿದೆ.
ಎಕ್ಸಿಟ್ ಪೋಲ್ ಫಲಿತಾಂಶ: ಯಾರಿಗೆ ಜಯ?
TV9 Kannada C-VOTER ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ಕಾಂಗ್ರೆಸ್ 100ರಿಂದ112 ಕ್ಷೇತ್ರಗಳಲ್ಲಿ ಗೆಲುವುದು ಸಾಧಿಸಲಿದೆ. ಬಿಜೆಪಿ 83ರಿಂದ95, ಹಾಗೂ ಜೆಡಿಎಸ್ 21ರಿಂದ 29 ಕ್ಷೇತ್ರಗಳು ಹಾಗೂ ಇತರೆ ಪಕ್ಷಗಳು 02ರಿಂದ 06 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದಿದೆ. Zee News - Matrize ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ಕಾಂಗ್ರೆಸ್ 103 ರಿಂದ118, ಬಿಜೆಪಿ 79 ರಿಂದ 94, ಜೆಡಿಎಸ್ 25 ರಿಂದ 33 ಹಾಗೂ ಇತರೆ ಪಕ್ಷಗಳು 02 ರಿಂದ 05 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದಿದೆ. ಜೊತೆಗೆ Republic TV P-MARQ ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ಕಾಂಗ್ರೆಸ್ 94ರಿಂದ 108, ಬಿಜೆಪಿ 85ರಿಂದ100, ಜೆಡಿಎಸ್ 24 ರಿಂದ 32 ಹಾಗೂ ಇತರೆ ಪಕ್ಷಗಳು 02ರಿಂದ 06 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು.
ವಿಜಯಪುರ ಬಡಾವಣೆಯಲ್ಲಿ ಮತದಾನ ವೇಳೆ ಗಲಾಟೆ
ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಎರಡು ಗುಂಪುಗಳು ನಡುವೆ ಮಾತಿನ ಚಕಮಕಿ ನಡೆದಿದೆ. ಗುಂಪುಗಳನ್ನ ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆದಿದೆ. ಚಿಕ್ಕಮಗಳೂರು ನಗರದ ವಿಜಯಪುರದ ಉರ್ದು ಸ್ಕೂಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ಮತದಾನದ ಕೊನೆ ಕ್ಷಣದಲ್ಲಿ ಮಾತಿನ ಚಕಮಕಿ ನಡೆದಿದೆ.
224 ಕ್ಷೇತ್ರಗಳಲ್ಲಿ ಮತದಾನದ ಅವಧಿ ಅಂತ್ಯ
224 ಕ್ಷೇತ್ರಗಳಲ್ಲಿ ಮತದಾನದ ಅವಧಿ ಅಂತ್ಯಗೊಂಡಿದೆ. ಬಹುತೇಕ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದೆ. ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತಿರುವವರಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗುತ್ತಿದೆ. ಸಂಜೆ 5ರವರೆಗೆ ಶೇ.65.69ರಷ್ಟು ಮತದಾನ ಆಗಿದೆ. ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆದಿದೆ.
ಸಂಜೆ 5ರವರೆಗೆ ಶೇ.65.69ರಷ್ಟು ಮತದಾನ

ಸಂಜೆ 5ರವರೆಗೆ ಶೇ.65.69ರಷ್ಟು ಮತದಾನ ಆಗಿದೆ. ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಇನ್ನೂ ಕೆಲವೇ ಸಮಯದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇನ್ನೂ ಮಂಡ್ಯದಲ್ಲಿ ಸಂಜೆ 5ರವರೆಗೆ ಶೇ.75.90ರಷ್ಟು ಮತದಾನವಾಗಿದೆ.
ತುಮಕೂರಿನಲ್ಲಿ ಶೇ. 75.24ರಷ್ಟು, ಹಾಸನದಲ್ಲಿ ಶೇ.74, ಹಾವೇರಿಯಲ್ಲಿ ಶೇ. 73, ಕೊಪ್ಪಳದಲ್ಲಿ ಶೇ. 70.49, ರಾಮನಗರದಲ್ಲಿ ಶೇ.78.22, ಬೆಂಗಳೂರು ಗ್ರಾಮಂತರದಲ್ಲಿ ಶೇ. 76.06ರಷ್ಟು ಮತದಾನ ಆಗಿದೆ.
ಬೆಂಗಳೂರಿನಲ್ಲಿ 5 ಗಂಟೆ ವೇಳೆಗೆ ಆಗಿರುವ ಮತದಾನವೆಷ್ಟು?
ಸಂಜೆ 5 ಗಂಟೆ ವೇಳೆಗೆ ಬೆಂಗಳೂರಿನಲ್ಲಿ ಶೇಕಡ 50.91% ಮತದಾನವಾಗಿದ್ದು, ಮತಚಲಾವಣೆಗೆ 50 ನಿಮಿಷ ಮಾತ್ರ ಬಾಕಿ ಉಳಿದಿದೆ. ಸಿಲಿಕಾನ್ ಸಿಟಿ ಜನರ ನಿರಾಸಕ್ತಿ ಈ ಬಾರಿ ಶೇಕಾಡವಾರು ಮತದಾನ ಕಡಿಮೆ ಆಗಿದೆ. ಬೆಂಗಳೂರು ಉತ್ತರ ಶೇಕಡ 50.20ರಷ್ಟು ಮತದಾನವಾದರೆ, ಬೆಂಗಳೂರು ದಕ್ಷಿಣದಲ್ಲಿ ಶೇ. 48.42ರಷ್ಟು, ಬೆಂಗಳೂರು ಸೆಂಟ್ರಲ್‌ನಲ್ಲಿ ಶೇ. 51.20, ಬೆಂಗಳೂರು ನಗರದಲ್ಲಿ ಶೇ.52.81ರಷ್ಟು ಮತದಾನ ಆಗಿದೆ.
ಕರ್ನಾಟಕ ಎಲೆಕ್ಷನ್ಮ: ತಗಟ್ಟೆಯಲ್ಲೇ ಗರ್ಭಿಣಿಗೆ ಹೆರಿಗೆ

ಬಳ್ಳಾರಿ ಜಿಲ್ಲೆಯ ಕೋರ್ಲಾಗುಂದಿ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಮತದಾನಕ್ಕೆ ಬಂದಿದ್ದರು. ಈ ವೇಳೆ ಅವರಿಗೆ ಹೆರಿಗೆ ನೋವು ಕಾಣಸಿಕೊಂಡಿದೆ. ಕೂಡಲೇ ಚುನಾವಣಾ ಸಿಬ್ಬಂದಿ ಮತಗಟ್ಟೆ ಪಕ್ಕದ ಕೊಠಡಿಗೆ ಆ ಗರ್ಭಿಣಿ ಮಹಿಳೆಯನ್ನು ಕರೆದೊಯ್ದಿದ್ದಾರೆ. ಆ ಮಹಿಳೆ ಅಲ್ಲಿಯೇ ಗಂಡು ಮಗುವಿge ಜನ್ಮ ನೀಡಿದ್ದಾರೆ. ಬಳ್ಳಾರಿ ಜಿಲ್ಲೆಯ ಕೋರ್ಲಾಗುಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮತದಾನಕ್ಕೆ ಇನ್ನೊಂದು ಗಂಟೆ ಬಾಕಿ
ಇಂದು ಬೆಳಗ್ಗೆ 7ಗಂಟೆಗೆ ಆರಂಭವಾಗಿರುವ ಮತದಾನ ಪ್ರಕ್ರಿಯೆ ಸಂಜೆ 6ಗಂಟೆಗೆ ಮುಕ್ತಾಯಗೊಂಡಿದೆ. ಮತದಾನ ಮಾಡಲು ಪ್ರಜೆಗಳಿಗೆ ಇನ್ನೊಂದು ಗಂಟೆ ಮಾತ್ರವೇ ಬಾಕಿ ಇದೆ. ನಿಗದಿತ ಸಮಯದ ನಂತರ ಬಂದರೆ ಉಪಯೋಗವಿಲ್ಲ. ಸಂಜೆ 6 ಗಂಟೆ ನಂತರ ಮತಗಟ್ಟೆ ಬಾಗಿಲುಗಳು ಬಂದ್ ಆಗಿರಲಿವೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಮತದಾನ ಮಾಡಿದ ರಾಕಿಬಾಯ್

ಸ್ಯಾಂಡಲ್‌ವುಡ್ ರಾಕಿಬಾಯ್ ಯಶ್ ಇಂದು ಮತದಾನ ಮಾಡಿದರು. ಬೆಂಗಳೂರಿನ ಹೊಸಕೆರೆಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮತದಾನದ ಬಳಿಕ ಮಾತನಾಡಿದ ಅವರು, 'ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಅವರು ಪ್ರಚಾರ ಮಾಡಿದ್ದೆ. ಆದರೆ ಈ ಬಾರಿ ನನಗೆ ಪ್ರಚಾರಕ್ಕೆ ಬರಬೇಕು ಅಂತ ಅನಿಸಿಲ್ಲ ಹೀಗಾಗಿ ಬಂದಿಲ್ಲ' ಎಂದರು.
ಬೆಂಗಳೂರಿನಲ್ಲಿ ಓಟ್ ಮಾಡಲು ಬಂದಿದ್ದ ವ್ಯಕ್ತಿಗೆ ಶಾಕ್
ರಾಜ್ಯದೆಲ್ಲೆಡೆ ಮತದಾನದ ವೆಲೆ ಹಲವಾರು ಲೋಪದೋಷಗಳು ಕಂಡು ಬಂದಿವೆ. ಬೆಂಗಳೂರಿನ ಜಯನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮೃತ ತಂದೆ ಹೆಸರು ಮತದಾನದ ಪಟ್ಟಿಯಲ್ಲಿ ಕಂಡುಬಂದಿದ್ದು ಬದುಕಿದ ಮಗನ ಹೆಸರು ಮತದಾನ ಪಟ್ಟಿಯಲ್ಲಿ ಇಲ್ಲ. ಚುನಾವಣಾ ಅಧಿಕಾರಿಗಳ ವಿರುದ್ಧ ವ್ಯಕ್ತಿ ಆಕ್ರೋಶ ಹೊರಹಾಕಿದ್ದಾರೆ.
'ನನ್ನ ಹೆಸರಿನಲ್ಲಿ ಬೇರೆ ಯಾರೋ ಮತ ಹಾಕಿದ್ದಾರೆ'
ಬೆಂಗಳೂರಿನ ಪುಲಕೇಶಿನಗರದ ಮತಗಟ್ಟೆಯಲ್ಲಿ ಯುವಕ ಗಂಭೀರ ಆರೋಪ ಮಾಡಿದ್ದಾನೆ. ಸುದ್ದಿಗಾರರೊಂದಿಗೆ ಮಾತನಾಡಿದ ಯುವಕ ಸಯ್ಯದ್, 'ನಾನು ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದೇನೆ. 885 ಮತಚೀಟಿಯ ನಂಬರ್. ಆದರೆ ಮತಗಟ್ಟೆಗೆ ಬರುವಷ್ಟರಲ್ಲಿ ನನ್ನ ಹೆಸರಿಲ್ಲಿ ಬೇರೆ ಯಾರೋ ಮತಚಲಾಯಿಸಿದ್ದಾರೆ. ಮತದಾನ ನನ್ನ ಹಕ್ಕು. ಮತಚಲಾಯಿಸುವವರೆಗೂ ಇಲ್ಲಿಂದ ಹೋಗುವುದಿಲ್ಲ' ಎಂದು ಯುವಕ ಪಟ್ಟು ಹಿಡಿದು ಕುಳಿತಿರುವುದು ಕಂಡು ಬಂದಿದೆ.
ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಹೇಳಿದ್ದೇನು?
‘ಇದೊಂದು ಪುಟ್ಟ ಗ್ರಾಮ, ಸರ್ವತೋಮುಖ ಅಭಿವೃದ್ಧಿಯಾಗಿದೆ. ಈ ಕ್ಷೇತ್ರ ಪ್ರತಿನಿಧಿಸುವ ಎಚ್‌ಡಿ ರೇವಣ್ಣ ಅವರಿಗೆ ಸಲ್ಲಬೇಕು’ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರು ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಮತಯಾಚನೆ ಮಾಡಿದ ನಂತರ ಹೇಳಿದರು.
#WATCH | "It's a small village. All round development has taken place. Credit should go to HD Revanna, who represents this constituency," says JD(S) chief and former Prime Minister HD Devegowda after casting his vote at his native village Haradanahalli in Hassan district… pic.twitter.com/FOSPR1ldBm
— ANI (@ANI) May 10, 2023
ನಕಲಿ ಮತದಾನದ ಆರೋಪ: ಪೊಲೀಸ್ ವಾಹನ ಬೆನ್ನಟ್ಟಿದ ತೆನೆ ಕಾರ್ಯಕರ್ತರು
ವಿಜಯಪುರ ಜಿಲ್ಲೆಯ ಮಸಬಿನಾಳದಲ್ಲಿ ಮತಯಂತ್ರ ಒಡೆದು ಹಾಕಿದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 20-25 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತದಾನಕ್ಕೆ ಹೊಸ ಮತಯಂತ್ರಗಳನ್ನು ತೆಗೆದುಕೊಂಡು ಹೋಗುವ ವೇಳೆಯೂ ಗಲಾಟೆ ಮುಂದುರೆದಿದೆ. ಇಸ್ಲಾಂಪುರ ತಾಂಡಾದಲ್ಲಿ ಇವಿಎಂ ಸಾಗಿಸುವಾಗ ಗಲಾಟೆಯಾಗಿದೆ. ಕಾರು, ಪೊಲೀಸ್ ವಾಹನವನ್ನು ಬೆನ್ನಟ್ಟಿದ ಜೆಡಿಎಸ್ ಕಾರ್ಯಕರ್ತರು, ನಕಲಿ ಮತದಾನಕ್ಕಾಗಿ ಹೆಚ್ಚುವರಿ ಇವಿಎಂ ಅನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವೇಳೆ ಮತ್ತೆ ವಾಗ್ದಾದ ನಡೆದಿದೆ.
3 ಗಂಟೆಯವರೆಗೆ ಎಲ್ಲಿ? ಎಷ್ಟು ಮತದಾನ?
ಮಧ್ಯಾಹ್ನನದ ನಂತರ ಮತದಾನದಲ್ಲಿ ಚುರುಕು ಕಂಡುಬಂದಿದೆ. ಬಳ್ಳಾರಿಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ. 53.31ರಷ್ಟು ಮತದಾನವಾಗಿದೆ. ಬೀದರ್‌ನಲ್ಲಿ ಶೇ. 50.64, ವಿಜಯಪುರದಲ್ಲಿ ಶೇ. 49, ಚಾಮರಾಜನಗರದಲ್ಲಿ ಶೇ. 51.75, ಚಿಕ್ಕಬಳ್ಳಾಪುರದಲ್ಲಿ ಶೇ. 58.74, ಚಿತ್ರದುರ್ಗದಲ್ಲಿ ಶೇ. 53.05, ದಕ್ಷಿಣ ಕನ್ನಡದಲ್ಲಿ ಶೇ. 54.9, ದಾವಣಗೆರೆಯಲ್ಲಿ ಶೇ.58.04ರಷ್ಟು ಮತದಾನವಾಗಿದೆ.
ಇನ್ನೂ ಗದಗದಲ್ಲಿ ಶೇ. 55.04ರಷ್ಟು, ಹಾಸನದಲ್ಲಿ ಶೇ. 59.15, ಹಾವೇರಿಯಲ್ಲಿ ಶೇ. 57.17, ಕೊಡಗು ಜಿಲ್ಲೆಯಲ್ಲಿ ಶೇ. 58.25, ಕೊಪ್ಪಳದಲ್ಲಿ ಶೇ. 56.86, ಮಂಡ್ಯಾದಲ್ಲಿ ಶೇ. 58.39, ಮೈಸೂರಿನಲ್ಲಿ ಶೇ. 50.47ರಷ್ಟು, ರಾಯಚೂರಿನಲ್ಲಿ ಶೇ.52.37, ರಾಮನಗರದಲ್ಲಿ ಶೇ.53.36, ಶಿವಮೊಗ್ಗದಲ್ಲಿ ಶೇ. 56.01, ಉಡುಪಿ ಶೇ. 60.29, ಉತ್ತರ ಕನ್ನಡ ಶೇ. 54.94, ಯಾದಗಿರಿಯಲ್ಲಿ ಶೇ. 43.08ರಷ್ಟು ಮತದಾನವಾಗಿದೆ.
Dhananjay Voting: ಅಕ್ಕ ಹಾಗು ಅಜ್ಜಿಯ ಮತದಾನಕ್ಕೆ ಕೈ ಹಿಡಿದು ಕರೆದುಕೊಂಡು ಬಂದ ಧನಂಜಯ್ | Elections 2023
ಕನ್ನಡದ ಸಾಕಷ್ಟು ಸಿನಿತಾರೆಯರು ಬೆಳ್ಳಂಬೆಳಗ್ಗೆ ಮತಕಗಟ್ಟೆಗಳ ಮುಂದೆ ಕಾಣಿಸಿಕೊಂಡರು. ಜೊತೆಗೆ ಚಂದನವನದ ಸ್ಟಾರ್ ನಟ ಹಾಗೂ ನಟಿಯರು ಇಂದು ಮತದಾನ ಮಾಡಿದರು. ನಟಿ ಮೇಘನಾ, ಕಿಚ್ಚ ಸುದೀಪ್, ಅನಂತ್‌ನಾಗ್, ಮೇಘನಾ, ಸುಮಲತಾ, ಸಾಧು ಕೋಕಿಲ ಮತದಾನ ಮಾಡಿದರು.
ಮತದಾನಕ್ಕೆ ಬಂದ ಮಹಿಳೆಯರಿಗೆ ಲಾಠಿ ಏಟು

ಮತದಾನಕ್ಕೆ ಬಂದ ಮಹಿಳೆಯರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ ಆರೋಪ ಕೇಳಿಬಂದಿದೆ. ಗದಗ ಜಿಲ್ಲೆ ಮಂಡರಗಿ ತಾಲೂಕಿನ ಶೀರನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ಮತದಾರರು ಮತದಾನ ಸ್ಥಗಿತ ಮಾಡಿ ಎಂದು ಚುನಾವಣಾ ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತಗಟ್ಟೆಯಲ್ಲೇ ವಾಗ್ವಾದ, ನೂಕಾಟ, ತಳ್ಳಾಟ ನಡೆದಿದೆ.
ಮದ್ಯಾಹ್ನ 3 ಗಂಟೆಯವರೆಗೆ ಶೇ. 52.03ರಷ್ಟು ಮತದಾನ

ರಾಜ್ಯದಲ್ಲಿ ಮದ್ಯಾಹ್ನ 3 ಗಂಟೆಯವರೆಗೆ ಶೇ. 52.03ರಷ್ಟು ಮತದಾನವಾಗಿದೆ. ರಾಜ್ಯದೆಲ್ಲೆಡೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಮತಚಲಾಯಿಸುತ್ತಿರುವುದು ಕಂಡು ಬಂದಿದೆ. ಜೊತೆಗೆ ಚಂದನವನದ ಸ್ಟಾರ್ ನಟ ಹಾಗೂ ನಟಿಯರು ಇಂದು ಮತದಾನ ಮಾಡಿದರು. ನಟಿ ಮೇಘನಾ, ಕಿಚ್ಚ ಸುದೀಪ್, ಅನಂತ್‌ನಾಗ್, ಮೇಘನಾ, ಸುಮಲತಾ, ಸಾಧು ಕೋಕಿಲ, ಧ್ರುವ ಸರ್ಜಾ ಸೇರಿದಂತೆ ಇತರರು ಮತದಾನ ಮಾಡಿದರು.
ತಾಂತ್ರಿಕ ದೋಷದಿಂದ 9 ಕಡೆ ಮತದಾನ ಸ್ಥಗಿತ
ಬೆಳಗಾವಿಯ ಒಟ್ಟು 9 ಕಡೆಗಳಲ್ಲಿ ತಾಂತ್ರಿಕ ದೋಷದಿಂದಾಗಿ ಮತದಾನ ಸ್ಥಗಿತಗೊಂಡಿದೆ. ಕಳೆದ ಎರಡೂವರೆ ಗಂಟೆಯಿಂದಲೂ ಮತದಾನ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ. ಬೆಳಗಾವಿಯ ಕಿತ್ತೂರು, ದೇವಗಾಂವ್, ಮೂಡಲಗಿ ಪಟ್ಟಣ, ಅರಬಾವಿ, ನೇಸರಗಿ, ಕಾದ್ರೊಳ್ಳಿ, ಉಳ್ಳಿಗೇರಿ, ಮೂಡಲಗಿ ಸೇರಿದಂತೆ ಒಟ್ಟು ಒಂಬತ್ತು ಕಡೆ ಮತದಾನ ಸ್ಥಗಿತವಾಗಿದ್ದು, ಮತದಾನಕ್ಕೆ ತೆರಳಿದ್ದ ಜನರು ಕಾದು ಕಾದು ಸುಸ್ತಾಗಿದ್ದಾರೆ. ಈ ಸಂಬಂಧ ಸ್ಥಳಕ್ಕೆ ತಜ್ಞರ ತಂಡ ಆಗಮಿಸಿದ್ದು, ತಾಂತ್ರಿಕ ದೋಷ ನಿವಾರಣೆ ಮಾಡುತ್ತಿದ್ದಾರೆ.
READ MORE












Click it and Unblock the Notifications