ಹುಬ್ಬಳ್ಳಿ : ಬೆಂಗಳೂರು, ಚೆನ್ನೈ, ಅಹಮದಾಬಾದ್‌ಗೆ ವಿಮಾನ ಸೇವೆ ಆರಂಭ
ಹುಬ್ಬಳ್ಳಿ, ಜುಲೈ 02 : ಇಂಡಿಗೊ ಸಂಸ್ಥೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ವಿಮಾನ ಸೇವೆಯನ್ನು ಆರಂಭಿಸಿದೆ. ಗೋವಾ-ಹುಬ್ಬಳ್ಳಿ-ಕೊಚ್ಚಿ ವಿಮಾನ ಸೇವೆಗೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು, ಚೆನ್ನೈ, ಅಹಮದಾಬಾದ್ ನಗರಗಳಿಗೆ ಹುಬ್ಬಳ್ಳಿಯಿಂದ ವಿಮಾನ ಸೇವೆ ಆರಂಭವಾಗಿದೆ. ಇಂಡಿಗೊ ಸಂಸ್ಥೆ ಭಾನುವಾರ ವಿಮಾನ ಸೇವೆಯನ್ನು ಆರಂಭಿಸಿದೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಪ್ರಯಾಣಿಕರಿಗೆ ಹುಬ್ಬಳ್ಳಿ ವಾಣಿಜ್ಯ ಸಂಘದ ಸದಸ್ಯರು ಸ್ವಾಗತ ಕೋರಿದರು. ಅಹಮದಾಬಾದ್‌ಗೆ ಹೊರಟ ಪ್ರಯಾಣಿಕರಿಗೆ ಶುಭ ಕೋರಲಾಯಿತು.

ಜೂನ್ 27ರಂದು ಇಂಡಿಗೊ ಗೋವಾ-ಹುಬ್ಬಳ್ಳಿ-ಕೊಚ್ಚಿ ವಿಮಾನ ಸೇವೆಯನ್ನು ಆರಂಭಿಸಿತ್ತು. ಈ ಸೇವೆಗೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯಡಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಈಗಾಗಲೇ ಹಲವು ಕಂಪನಿಗಳು ಹುಬ್ಬಳ್ಳಿಯಿಂದ ವಿಮಾನ ಸೇವೆ ಒದಗಿಸಲು ಮುಂದೆ ಬಂದಿವೆ.
ಜುಲೈ ತಿಂಗಳಿನಲ್ಲಿ ಸ್ಪೈಸ್ ಜೆಟ್ ಕೊಲಂಬೋ ಮತ್ತು ದುಬೈಗೆ ವಿಮಾನ ಹಾರಾಟವನ್ನು ಆರಂಭಿಸಲಿದೆ. ಜುಲೈ 10ರ ಬಳಿಕ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಪ್ರತಿದಿನ 20 ವಿಮಾನಗಳು ಹಾರಾಟ ನಡೆಸಲಿವೆ.












Click it and Unblock the Notifications